ದಾವಣಗೆರೆ(ಮೇ.02): ನರ್ಸ್‌ ಮತ್ತು ವೃದ್ಧನಲ್ಲಿ ಸೋಂಕು ದೃಢಪಟ್ಟಬೆನ್ನಲ್ಲೇ ಉಭಯ ಕುಟುಂಬದ ಒಟ್ಟು 6 ಜನರಲ್ಲಿ ಸೋಂಕಿರುವುದು, ಅದರಲ್ಲೂ 1 ವರ್ಷದ ಹಸುಗೂಸು ಸಹಿತ ಸೋಂಕಿಗೆ ತುತ್ತಾಗಿರುವುದು ಆಡಳಿತ ಯಂತ್ರ, ಜಿಲ್ಲೆಯ ಜನರನ್ನು ಕಳವಳಕ್ಕೀಡು ಮಾಡಿದೆ.

ಇಲ್ಲಿನ ಬಾಷಾ ನಗರದ ಪಿಎಚ್‌ಸಿ ಶುಶ್ರೂಷಕಿಯಲ್ಲಿ ಬುಧವಾರ ಸೋಂಕು ದೃಢಪಟ್ಟಿತ್ತು. ಗುರುವಾರ ಜಾಲಿ ನಗರದ 59 ವರ್ಷದ ವೃದ್ಧನಲ್ಲಿ ಸೋಂಕು ಕಂಡು ಬಂದಿತ್ತು. ಶುಶ್ರೂಷಕಿಯಾದ ರೋಗಿ ಸಂಖ್ಯೆ-533ರಿಂದ ಆಕೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ವರ್ಷದ ಮಗನಲ್ಲೂ ಸೋಂಕು ದೃಢಪಟ್ಟಿದೆ. ಆದರೆ, ಸೋಂಕಿನ ಯಾವುದೇ ಲಕ್ಷಣ ಆತನಲ್ಲಿ ಕಂಡು ಬಂದಿಲ್ಲವಾದರೂ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶುಕ್ರವಾರ ಜಿಲ್ಲಾಧಿಕಾರಿ ಬೀಳಗಿ ಸುದ್ದಿಗಾರರಿಗೆ ತಿಳಿಸಿದರು.

ನಿವೃತ್ತ ಯೋಧನ ಮನೆಯಲ್ಲಿ ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಯತ್ನ

ಜಾಲಿ ನಗರದ ಸೋಂಕಿತ ವೃದ್ಧ ರೋಗಿ ಸಂಖ್ಯೆ-556ನ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಜನರ ವರದಿ ಪಾಸಿಟಿವ್‌ ಬಂದಿದೆ. ಸೋಂಕಿತನ 34 ವರ್ಷದ ಮಗ, ಸೋಂಕಿತನ ಮೂವರು ಸೊಸೆಯಂದಿರು

ಜೊತೆಗೆ 34 ವರ್ಷದ ಸೋಂಕಿತಳ 1 ವರ್ಷದ ಮಗುವಿನಲ್ಲೂ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರ ಟ್ರೇಸಿಂಗ್‌ ಕಾರ್ಯ ಶುರುವಾಗಿದೆ. ಈವರೆಗೆ ಒಟ್ಟು 82 ಜನರ ಸ್ಯಾಂಪಲ್‌ ಪರೀಕ್ಷೆಗೆ ಕಳಿಸಿದ್ದೇವೆ. ಶುಕ್ರವಾರ ಸಂಜೆ ಹೊತ್ತಿಗೆ ರೋಗಿ ಸಂಖೆ 533 ಮತ್ತು 556ರ ಮನೆಗಳನ್ನು ಎಪಿ ಸೆಂಟರ್‌ ಅಂತಾ ಗುರುತಿಸಿ, ಆ ಮನೆಗಳಿದ್ದ ಕಂಟೈನ್‌ಮೆಂಟ್‌ ಝೋನ್‌ನ ನೆರೆ ಹೊರೆಯವರನ್ನು ದ್ವಿತೀಯ ಸಂಪರ್ಕದಲ್ಲಿದ್ದವರು ಅಂತಾ ಪರಿಗಣಿಸುತ್ತೇವೆ ಎಂದು ವಿವರಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 13 ರಿಂದ 6 ಕ್ಕಿಳಿದ ಕೊರೋನಾ ಸೋಂಕಿತರ ಸಂಖ್ಯೆ!

ಸರ್ಕಾರದ ನಿರ್ದೇಶನದಂತೆ ಎಲ್ಲಾ ತಜ್ಞ ವೈದ್ಯರ ಸಮಿತಿ ರಚಿಸಿ, ಸಭೆ ಮಾಡಿದ್ದೇವೆ. ಅಲ್ಲದೇ, ರೋಗಿ ಸಂಖ್ಯೆ 556 ಸದ್ಯಕ್ಕೆ ವೆಂಟಿಲೇಟರ್‌ನಲ್ಲಿದ್ದು, ಇಲ್ಲಿನ ತಜ್ಞ ವೈದ್ಯರಿಗೆ ಬೆಂಗಳೂರಿನ ತಜ್ಞ ವೈದ್ಯರ ನೆರವಿನಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇವೆ. ಸೋಂಕಿನ ವೃದ್ಧನನ್ನು ಉಳಿಸಿಕೊಳ್ಳಲು ಎಲ್ಲಾ ಅಗತ್ಯಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸೋಂಕಿತ ವೃದ್ಧನ 1 ವರ್ಷದ ಮೊಮ್ಮಗನಲ್ಲಿ ಸೋಂಕಿನ ಯಾವುದೇ ಲಕ್ಷಣ ಇಲ್ಲ. ಆದರೂ, ಜಿಲ್ಲಾಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಸೋಂಕಿತರಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮತ್ತು ತಾಯಿಗೂ ಪಾಸಿಟಿವ್‌ ಬಂದಿದ್ದು, ತಾಯಿ-ಮಗು ಜೊತೆಗೆ ಇರುತ್ತಾರೆ. ನಿನ್ನೆ, ಮೊನ್ನೆಯ 2 ಕೇಸ್‌ ಹಾಗೂ ಇಂದಿನ 6 ಕೇಸ್‌ ಸೇರಿ ಜಿಲ್ಲೆಯಲ್ಲಿ ಒಟ್ಟು 8 ಪಾಸಿಟಿವ್‌ ಪ್ರಕರಣಗಳಾಗಿವೆ.

ಕೊರೋನಾದಿಂದ ವ್ಯಾಪಾ​ರಿ​ಗಳ ಬದುಕು ಮೂರಾ​ಬ​ಟ್ಟೆ: ಗ್ರಾಹ​ಕ​ರಿ​ಲ್ಲ​ದೇ ಕೊಳೆಯುತ್ತಿದೆ ಕಲ್ಲಂಗಡಿ..!

ಒಟ್ಟು 82 ಸ್ಯಾಂಪಲ್ಸ್‌ ಗುರುವಾರ ಕಳಿಸಿದ್ದೆವು. ಇದರಲ್ಲಿ 6 ಪಾಸಿಟಿವ್‌ ಬಂದರೆ, ಉಳಿದೆಲ್ಲಾ ವರದಿ ನೆಗೆಟಿವ್‌ ಬಂದಿವೆ. ಇಂದು ಉಭಯ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದವರ ಸ್ಯಾಂಪಲ್‌ ಸಂಗ್ರಹಿಸಿ, ಲ್ಯಾಬ್‌ಗೆ ಕಳಿಸಿದ್ದೇವೆ. ಸೋಂಕಿತ ನರ್ಸ್‌ ಹೆರಿಗೆ ಮಾಡಿಸಿದ್ದ ತಾಯಿ-ಮಗು ಹಾಗೂ, ಬಾಣಂತಿಯ ಪತಿಯ ವರದಿ ನೆಗೆಟಿವ್‌ ಬಂದಿದೆ ಎಂದು ಬೀಳಗಿ ತಿಳಿಸಿದರು.