ಮಡಿಕೇರಿ(ಮೇ.02): ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಾಲೂರಿನಲ್ಲಿ ನಡೆದಿದೆ. ಪಾಲೂರು ಆಶಾ ಕಾರ್ಯಕರ್ತೆ ಎಚ್‌.ಆರ್‌.ಲತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ಸಿ.ಕೆ.ಜಲಜಾಕ್ಷಿ, ಪಾಲೂರು ಗ್ರಾಮದ ನಿವೃತ್ತ ಯೋಧರೊಬ್ಬರ ಮನೆಗೆ ತೆರಳಿದ್ದ ಸಂದರ್ಭ ಗದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ.

ಮೇಲಾಧಿಕಾರಿಗಳ ಸೂಚನೆಯಂತೆ ಆಶಾ ಕಾರ್ಯಕರ್ತೆ ಎಚ್‌.ಆರ್‌.ಲತಾ, ಕಿರಿಯ ಆರೋಗ್ಯ ಸಹಾಯಕಿ ಸಿ.ಕೆ.ಜಲಜಾಕ್ಷಿ ಹಾಗೂ ಚೇರಂಬಾಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನಿಖಿಲ್‌ ಅವರು ಈ ಕುರಿತು ನಾಪೋಕ್ಲು ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಠಾಣಾಧಿಕಾರಿ ಕಿರಣ್‌ ಕೇಸು ದಾಖಲಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 13 ರಿಂದ 6 ಕ್ಕಿಳಿದ ಕೊರೋನಾ ಸೋಂಕಿತರ ಸಂಖ್ಯೆ!

ಕೊರೋನಾ ಸೋಂಕಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆ ಮತ್ತು ಕಿರಿಯ ಆರೋಗ್ಯ ಸಹಾಯಕಿ ಮೇಲೆ ಹಲ್ಲೆಗೆ ಮುಂದಾದ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘ ಅಧ್ಯಕ್ಷೆ ಪೂರ್ಣಿಮಾ ಬಸಪ್ಪ ಒತ್ತಾಯಿಸಿದ್ದಾರೆ.