ಕಸ್ಟಡಿಯಲ್ಲಿದ್ದ ರೇಪ್ ಕೇಸ್ ಆರೋಪಿ ಆತ್ಮಹತ್ಯೆ : ಐವರು ಪೊಲೀಸ್ ಸಸ್ಪೆಂಡ್
- ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಆತ್ಮಹತ್ಯೆ
- ಠಾಣೆಯ ಪಿಎಸ್‌ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿ ಅಮಾನತು
ವಿಜಯಪುರ (ಆ.31): ಅತ್ಯಾಚಾರ ಪ್ರಕರಣದ ಆರೋಪಿ ಅನುಮಾನಾಸ್ಪದವಾಗಿ ಸಿಂದಗಿ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಿಂದಗಿ ಠಾಣೆಯ ಪಿಎಸ್‌ಐ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿಜಯಪುರ: ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ರೇಪ್ ಕೇಸ್ ಆರೋಪಿ ಆತ್ಮಹತ್ಯೆ
ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಪಿಎಸ್‌ಐ ಸಂಗಮೇಶ ಹೊಸಮನಿ, ಪೊಲೀಸ್ ಸಿಬ್ಬಂದಿ ಎಸ್.ಬಿ.ನಾದ, ಗುರುರಾಜ ಮಾಶ್ಯಾಳ, ಆನಂದ ಪಾಟೀಲ, ಪಿ.ಎಲ್.ಪಟ್ಟೇದ ಅಮಾನತುಗೊಂಡಿದ್ದಾರೆ.
ಡಾಬಾವೊಂದರ ಮಾಲೀಕ ದೇವಿಂದ್ರ ಸಂಗೋಗಿಯನ್ನು ಅಪ್ರಾಪ್ತೆ ಮೇಲೆ ಅತ್ಯಾಚಾರ ಕೇಸಲ್ಲಿ ಬಂಧಿಸಲಾಗಿತ್ತು. ಆತ ಮೂತ್ರ ವಿಸರ್ಜನೆ ನೆಪದಲ್ಲಿ ಶೌಚಾಲಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದ