ಶಿವಮೊಗ್ಗ: ಹೋರಿ ಬೆದರಿಸುವ ಹಬ್ಬದಲ್ಲಿ ಓರ್ವ ವ್ಯಕ್ತಿ ಸಾವು, ಗೂಳಿ ಕಾಲ್ತುಳಿತ ವಿಡಿಯೋ ವೈರಲ್‌...!

ಹೋರಿಯ ಕಾಲ್ತುಳಿತಕ್ಕೆ ಗ್ರಾಮದ ಕೃಷಿ ಕಾರ್ಮಿಕ ಪ್ರಶಾಂತ ಕುಮಾರ್ ಸಾವು, ಹೋರಿಯ ಕಾಲ್ತಳಿತಕ್ಕೆ ವ್ಯಕ್ತಿ ಸಾವನಪ್ಪಿದ ವಿಡಿಯೋ ವೈರಲ್ 

36 Year Old Man Dies During Bull Race in Shivamogga grg

ಶಿವಮೊಗ್ಗ(ಅ.30):  ಹೋರಿ ಬೆದರಿಸುವ ಹಬ್ಬದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆ ಶಿಕಾರಿಪುರ ತಾಲೂಕಿನ ಗಾಮಾ ಗ್ರಾಮದಲ್ಲಿ ನಡೆದಿದೆ. ಹೋರಿಯ ಕಾಲ್ತುಳಿತಕ್ಕೆ ಗ್ರಾಮದ ಕೃಷಿ ಕಾರ್ಮಿಕ ಪ್ರಶಾಂತ ಕುಮಾರ್ (36) ಸಾವಿಗೀಡಾಗಿದ್ದಾರೆ. ಹೋರಿಯ ಕಾಲ್ತುಳಿತಕ್ಕೆ ವ್ಯಕ್ತಿ ಸಾವನಪ್ಪಿದ ವಿಡಿಯೋ ವೈರಲ್ ಆಗಿದೆ. 

ಕಿಚ್ಚು ಹಾಯಿಸುವಾಗ ಓಡುತ್ತಿದ್ದ ಹೋರಿ ದಿಢೀರನೇ ಜನರತ್ತ ನುಗ್ಗಿದೆ. ಈ ವೇಳೆ ಅಲ್ಲಿ ನಿಂತಿದ್ದ ಪ್ರಶಾಂತ ಕುಮಾರ್‌ಗೆ ಗುದ್ದಿ ನೆಲಕ್ಕೆ ಬಿದ್ದ ಪ್ರಶಾಂತ್ ನನ್ನ ತುಳಿದು ಮುಂದೆ ಹೋಗಿದೆ. ತೀವ್ರವಾಗಿ ಗಾಯಗೊಂಡ ಪ್ರಶಾಂತ ಕುಮಾರ್‌ನಿಗೆ ಶಿಕಾರಿಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗಿನ ಜಾವ ಪ್ರಶಾಂತ್ ಸಾವನ್ನಪ್ಪಿದ್ದಾರೆ.  

CBI ಗೆ ಒಂದೂ ಪ್ರಕರಣ ವಹಿಸದ ಬಿಜೆಪಿ; ಸಿದ್ದರಾಮಯ್ಯ ಕಿಡಿ

ಈ ಘಟನೆಯ ಸಂಬಂಧ ಇದುವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಗ್ರಾಮಸ್ಥರಿಂದಲೇ ಮನೆವಂತಿಕೆ ಪಡೆದು ಪ್ರಶಾಂತ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ನಿರ್ಧಾರಿಸಲಾಗಿದೆ ಅಂತ ತಿಳಿದು ಬಂದಿದೆ. ಇದುವರೆಗೆ ಹೋರಿ ಬೆದರಿಸುವ ಸ್ಪರ್ಧೆಗೆ ಶಿಕಾರಿಪುರ ಮತ್ತು ಆನವಟ್ಟಿ ಭಾಗದಲ್ಲಿ ಇಬ್ಬರು ಬಲಿಯಾಗಿದ್ದಾರೆ. 
 

Latest Videos
Follow Us:
Download App:
  • android
  • ios