Asianet Suvarna News Asianet Suvarna News

ಬೆಂಗಳೂರು: ಒಂದೇ ತಿಂಗಳಲ್ಲಿ 6 ಭೀಕರ ದುರಂತ, 24 ಮಂದಿ ಬಲಿ

*  ಬೆಂಗಳೂರು ಪಾಲಿಗೆ ಕರಾಳ ದಿನಗಳಾಗಿ ಪರಿಣಮಿಸಿದ ಆ.23ರಿಂದ ಸೆ.23 ಅವಧಿ 
*  ಸಾಲು ಸಾಲು ದುರಂತಗಳಲ್ಲಿ ಮಡಿದ 24 ಮಂದಿ
*  ನಾಗರಿಕರಲ್ಲಿ ಆತಂಕ ಮೂಡಿಸಿದ ಅವಘಡಗಳು
 

24 Killed in 6 Tragedy Incidents Last One Month in Bengaluru grg
Author
Bengaluru, First Published Sep 24, 2021, 1:29 PM IST

ಬೆಂಗಳೂರು(ಸೆ.24): ರಾಜಧಾನಿ ಬೆಂಗಳೂರು(Bengaluru) ಪಾಲಿಗೆ ಆ.23ರಿಂದ ಸೆ.23 ಅವಧಿಯೂ ಕರಾಳ ದಿನಗಳಾಗಿ ಪರಿಣಮಿಸಿದ್ದು, ಈ ದಿನಗಳಲ್ಲಿ ಅಗ್ನಿ ಅವಘಡ, ಅಪಘಾತ ಹಾಗೂ ಆತ್ಮಹತ್ಯೆ ಹೀಗೆ ಸಂಭವಿಸಿದ ಸಾಲು ಸಾಲು ದುರಂತಗಳಲ್ಲಿ(Tragedy) 24 ಮಂದಿ ಮಡಿದಿದ್ದಾರೆ. ಒಂದಾರೊಂದರಂತೆ ಎರಗುತ್ತಿರುವ ಅವಘಡಗಳು ನಾಗರಿಕರಲ್ಲಿ ಆತಂಕ ಮೂಡಿಸಿದೆ.

ಆ.23: ಬಾಯ್ಲರ್‌ ಸ್ಫೋಟಕ್ಕೆ ಐವರ ಸಾವು

ಮಾಗಡಿ ರಸ್ತೆಯ ಗೋಪಾಲಪುರದಲ್ಲಿ ಆ.23ರಂದು ಖಾದ್ಯ ತಿನಿಸು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಬಾಯ್ಲರ್‌ ಸ್ಫೋಟಗೊಂಡು ಮಾಲೀಕ ಸೇರಿದಂತೆ ಐವರು ಮೃತಪಟ್ಟಿದ್ದರು. ಈ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಜೀವ ದಹನವಾದರೆ, ಇನ್ನುಳಿದವರು ಚಿಕಿತ್ಸೆ ಫಲಿಸದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಬೆಂಗಳೂರು ತರಗುಪೇಟೆಯಲ್ಲಿ ನಿಗೂಢ ಸ್ಫೋಟ: ಮೂವರು ಸಾವು, ಗಾಯಾಳುಗಳ ಸ್ಥಿತಿ ಗಂಭೀರ

ಆ.31: ಶಾಸಕರ ಪುತ್ರ ಸೇರಿ 7 ಮಂದಿ ಬಲಿ

ತನ್ನ ಸ್ನೇಹಿತರ ಜೊತೆಯಲ್ಲಿ ಆ.31ರಂದು ಮಧ್ಯರಾತ್ರಿ ಜಾಲಿರೈಡ್‌ ಬಂದಿದ್ದಾಗ ಆಡಿ ಕಾರು ಭೀಕರವಾಗಿ ಅಪಘಾತಕ್ಕೀಡಾಗಿ ರಾಜ್ಯದ ಗಡಿಭಾಗದಲ್ಲಿರುವ ನೆರೆಯ ತಮಿಳುನಾಡಿನ ಹೊಸೂರು ಕ್ಷೇತ್ರದ ಆಡಳಿತಾರೂಢ ಡಿಎಂಕೆ ಪಕ್ಷದ ಶಾಸಕ ವೈ.ಪ್ರಕಾಶ್‌ ಅವರ ಏಕೈಕ ಪುತ್ರ ಕರುಣಾ ಸಾಗರ್‌ ಹಾಗೂ ಅವರ ಸ್ನೇಹಿತರು ಬಲಿಯಾಗಿದ್ದರು.

ಕೋರಮಂಗಲದಲ್ಲಿ ಭೀಕರ ಅಪಘಾತ: ಹೊಸೂರು ಶಾಸಕರ ಮಗ, ಸೊಸೆ ಸೇರಿ 7 ಸಾವು!

ಸೆ.15: ಕಾರು ಗುದ್ದಿ ಇಬ್ಬರ ದುರ್ಮರಣ

ಬೆಂಗ್ಳೂರಲ್ಲಿ ಮತ್ತೊಂದು ಭೀಕರ ಅಪಘಾತ: ಫ್ಲೈವ್‌ ಓವರ್‌ನಿಂದ ಬಿದ್ದು ಇಬ್ಬರ ದುರ್ಮರಣ

ಎಲೆಕ್ಟ್ರಾನಿಕ್ಸ್‌ ಸಿಟಿ ಮೇಲ್ಸೇತುವೆಯಲ್ಲಿ ಸೆ.15ರಂದು ರಾತ್ರಿ ಬೈಕ್‌ಗೆ ಕಾರು(Accident)ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರು. ಮೇಲ್ಸೇತುವೆಯಿಂದ 30 ಅಡಿ ಸರ್ವೀಸ್‌ ರಸ್ತೆಗೆ ಬಿದ್ದು ಕೊನೆಯುಸಿರೆಳೆದಿದ್ದರು. ಜೆ.ಪಿ.ನಗರ 8ನೇ ಹಂತದ ನಿವಾಸಿ ಪ್ರೀತಂಕುಮಾರ್‌ (30) ಹಾಗೂ ತಮಿಳುನಾಡು ಚೆನ್ನೈ ನಗರದ ಕೃತಿಕಾ ರಾಮ್‌ (28) ಮೃತ ದುರ್ದೈವಿಗಳು.

ಸೆ.11: ಒಂದು ಕುಟುಂಬದ ಐವರ ಆತ್ಮಹತ್ಯೆ

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!

ಆಂದ್ರಹಳ್ಳಿ ಮುಖ್ಯರಸ್ತೆಯ ತಿಗಳರಪಾಳ್ಯದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ರಕರ್ತ ಶಂಕರ್‌ ಕುಟುಂಬದ ಪತ್ನಿ ಹಾಗೂ ಮೂವರು ಮಕ್ಕಳು ಸೇರಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಲ್ಲಿ ನಾಲ್ಕು ದಿನಗಳು ಅನ್ನಾಹಾರವಿಲ್ಲದೆ ಉಪವಾಸದಿಂದ 9 ತಿಂಗಳ ಗಂಡು ಮಗು ಸಾವನ್ನಪ್ಪಿದ್ದು ಮನಕಲುಕುವಂತೆ ಇತ್ತು. ಅದೃಷ್ಟವಾಶಾತ್‌ ಐದು ದಿನಗಳ ಕಾಲ ಮೃತದೇಹಗಳ ಜೊತೆಯಲ್ಲೇ ಇದ್ದ ಎರಡೂವರೆ ವರ್ಷದ ಹೆಣ್ಣು ಮಗು ಪ್ರಾಣಾಪಾಯದಿಂದ ಪಾರಾಯಿತು.

ಸೆ.17: ಗುಂಡು ಹೊಡೆದುಕೊಂಡ ವಿದ್ಯಾರ್ಥಿ

ಶೂಟ್ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ; ಮಾನಸಿಕ ಒತ್ತಡ ಶಂಕೆ.?

ತನ್ನ ತಂದೆಯ ಪರವಾನಿಗೆ ಹೊಂದಿದ್ದ ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆರ್ಮಿ ಪಬ್ಲಿಕ್‌ ಶಾಲೆಯ 12ನೇ ತರಗತಿ ವಿದ್ಯಾರ್ಥಿ ಹಾಗೂ ನಿವೃತ್ತ ಸೇನಾ ಹವಾಲ್ದಾರ್‌ ಪುತ್ರ ರಾಹುಲ್‌ ಭಂಡಾರಿ (17) ಆತ್ಮಹತ್ಯೆಗೆ ಶರಣಾದ ಘಟನೆ ಸಂಜಯನಗರ ರಸ್ತೆಯ ಇಂಡಿಯನ್‌ ಏರ್‌ ಪೋರ್ಸ್‌ ಹೆಡ್‌ ಕ್ವಾಟ್ರರ್ಸ್‌ ಸಮೀಪ ನಡೆಯಿತು.

ಸೆ.21: ಬೆಂಕಿಗೆ ತಾಯಿ-ಮಗಳ ಪ್ರಾಣ ಹರಣ

ಬೆಂಗಳೂರು;  ಬಿಟಿಎಂನಲ್ಲಿ ಅಗ್ನಿ ದುರಂತ,  ನೋಡ ನೋಡುತ್ತಿದ್ದಂತೆ ಮಹಿಳೆಯರು ಭಸ್ಮ

ಬನ್ನೇರುಘಟ್ಟ ರಸ್ತೆಯ ದೇವರ ಚಿಕ್ಕನಹಳ್ಳಿಯಲ್ಲಿ ಆಶ್ರಿತ ಅಪಾರ್ಟ್‌ಮೆಂಟ್‌ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ತಾಯಿ-ಮಗಳು ಸಜೀವ ದನಹವಾಗಿದ್ದರು. ಫ್ಲ್ಯಾಟ್‌ನಲ್ಲಿ ಅಪಾಯ ಸಿಲುಕಿದ್ದವರ ರಕ್ಷಿಸಲಾಗದೆ ಜನರ ಕಣ್ಮುಂದೆಯೇ ಅವರು ಅಗ್ನಿಗೆ ಆಹುತಿಯಾದರು. ಅಮೆರಿಕದಿಂದ ಮರಳಿದ್ದ ಮಗಳ ನೋಡಲು ಬಂದು ತಾಯಿ ಮೃತಪಟ್ಟರು.
 

Follow Us:
Download App:
  • android
  • ios