Asianet Suvarna News Asianet Suvarna News

ಕೋರ್ಟ್ ವಿಚಾರಣೆಗೆ ಹಾಜರಾದ ಯತ್ನಾಳ್.. ಯಾವ ಪ್ರಕರಣ?

* ಕೋರ್ಟ್ ಗೆ ಹಾಜರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ್
* 2014 ಮೇ 26 ರಂದು ವಿಜಯಪುರ ಗಾಂಧಿ ಚೌಕ್ ನಲ್ಲಿ ಆದ ಗಲಭೆಗೆ ಸಂಬಂಧಿಸಿದಂತೆ ನಡೆದ ವಿಚಾರಣೆ
*  ವಿಶೇಷ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾದ ಯತ್ನಾಳ್
*  ವಿಜಯಪುರದ ಚಿಂತನ ಹಾಲ್ ನಲ್ಲಿ ನಡೆದ  ವಿಡಿಯೋ ಕಾನ್ಫರನ್ಸ್  ವಿಚಾರಣೆ

2014 riots BJP MLA Basanagouda patil yatnal appears before court mah
Author
Bengaluru, First Published Sep 2, 2021, 9:24 PM IST
  • Facebook
  • Twitter
  • Whatsapp

ವಿಜಯಪುರ(ಸೆ. 02) ಗಲಭೆ ಪ್ರಕರಣವೊಂದರ ವಿಚಾರಣೆ ಸಂಬಂಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.  2014 ಮೇ 26 ರಂದು ವಿಜಯಪುರ ಗಾಂಧಿ ಚೌಕ್ ನಲ್ಲಿ ಆದ ಗಲಭೆಗೆ ಸಂಬಂಧಿಸಿದಂತೆ ನಡೆದ ವಿಚಾರಣೆಗೆ ಹಾಜರಾಗಿದ್ದರು.

ವಿಶೇಷ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಿತು.  ವಿಜಯಪುರದ ಚಿಂತನ ಹಾಲ್ ನಲ್ಲಿ ವಿಡಿಯೋ ಕಾನ್ಫರನ್ಸ್ ಕಲಾಪ ನಡೆಯಿತು. 

ಶನಿವಾರ , ಭಾನುವಾರ ಕೊರೋನಾ ಎಲ್ಲಿಗೆ ಹೋಗುತ್ತದೆ? ಯತ್ನಾಳ್ ಲೇವಡಿ

ವಿಚಾರಣೆ ಬೆಂಗಳೂರಿನ ಹೈಕೋರ್ಟ್ ನಲ್ಲಿ ನಡೆಯಬೇಕಿತ್ತು. ಕೋವಿಡ್ ಹಿನ್ನೆಲೆ ವಿಜಯಪುರದ ಪೊಲೀಸ್ ಇಲಾಖೆಯ ಚಿಂತನ ಹಾಲ್ ನಲ್ಲಿ ವಿಡಿಯೋ ಮುಖಾಂತರ ವಿಚಾರಣೆಗೆ ಅವಕಾಶ ಮಾಡಿಕೊಡಲಾಗಿತ್ತು.  ಯತ್ನಾಳ್ ಹಾಗೂ ಬೆಂಬಲಿಗರು ಹಾಜರಾಗಿದ್ದರು. ಸುದೀರ್ಘ 3 ಗಂಟೆ ಕಾಲ ವಿಚಾರಣೆ ನಡೆಯಿತು.

ಬಿಜೆಪಿಯ ರೆಬೆಲ್ ನಾಯಕ ಎಂದೇ ಗುರುತಿಸಿಕೊಂಡಿದ್ದ ಯತ್ನಾಳ್ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಗುಡುಗುತ್ತಿದ್ದರು. ನಾಯಕತ್ವ ಬದಲಾವಣೆ ವಿಚಾರವನ್ನು ಮುನ್ನೆಲೆಗೆ ತಂದಿದ್ದೆ ಯತ್ನಾಳ್ ಎಂದು ಹೇಳಲಾಗಿತ್ತು. ಬಿಜೆಪಿ ನಾಯಕರ ನಡುವಿನ ವಾಕ್ ಸಮರಕ್ಕೆ ಯತ್ನಾಳ್ ಕಾರಣವಾಗಿದ್ದರು. 

Follow Us:
Download App:
  • android
  • ios