ಬೆಂಗ್ಳೂರಿನಲ್ಲಿವೆ ಬರೋಬ್ಬರಿ 2.8 ಲಕ್ಷ ಬೀದಿ ನಾಯಿಗಳು..!
ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ಕಳೆದ ಜುಲೈನಲ್ಲಿ ನಗರದಲ್ಲಿ ಬೀದಿ ನಾಯಿಗಳ ಅಂದಾಜು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ಮಾಹಿತಿಯನ್ನು ಕ್ರೂಢೀಕರಿಸಲಾಗಿದ್ದು, ನಗರದ 225 ವಾರ್ಡಗಳಲ್ಲಿ ಒಟ್ಟು 2.78 ಲಕ್ಷ ಬೀದಿ ನಾಯಿಗಳಿವೆ. ಈ ಪೈಕಿ 1.65 ಲಕ್ಷ ಗಂಡು, 82 ಸಾವಿರ ಹೆಣ್ಣು ನಾಯಿಗಳಿವೆ ಎಂದು ಧೃಢಪಡಿಸಲಾಗಿದೆ. ಇನ್ನುಳಿದ 31 ಸಾವಿರ ಬೀದಿ ನಾಯಿಗಳು ಗಂಡು ನಾಯಿಯೋ ಅಥವಾ ಹೆಣ್ಣು ನಾಯಿಯೋ ಎಂಬುದನ್ನು ಸ್ಪಷ್ಟವಾಗಿಲ್ಲ.

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.14): ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಕೈಗೊಂಡ ಬೀದಿ ನಾಯಿಗಳ ಅಂದಾಜು ಸಮೀಕ್ಷೆ ಪೂರ್ಣಗೊಂಡಿದ್ದು, ನಗರದಲ್ಲಿ 2.78 ಲಕ್ಷ ಬೀದಿ ನಾಯಿಗಳಿವೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷದಲ್ಲಿ ನಗರದಲ್ಲಿ 31 ಸಾವಿರಕ್ಕೂ ಅಧಿಕ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗಿದೆ!
ಬಿಬಿಎಂಪಿ ಪಶುಪಾಲನೆ ವಿಭಾಗದಿಂದ ಕಳೆದ ಜುಲೈನಲ್ಲಿ ನಗರದಲ್ಲಿ ಬೀದಿ ನಾಯಿಗಳ ಅಂದಾಜು ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ಮಾಹಿತಿಯನ್ನು ಕ್ರೂಢೀಕರಿಸಲಾಗಿದ್ದು, ನಗರದ 225 ವಾರ್ಡಗಳಲ್ಲಿ ಒಟ್ಟು 2.78 ಲಕ್ಷ ಬೀದಿ ನಾಯಿಗಳಿವೆ. ಈ ಪೈಕಿ 1.65 ಲಕ್ಷ ಗಂಡು, 82 ಸಾವಿರ ಹೆಣ್ಣು ನಾಯಿಗಳಿವೆ ಎಂದು ಧೃಢಪಡಿಸಲಾಗಿದೆ. ಇನ್ನುಳಿದ 31 ಸಾವಿರ ಬೀದಿ ನಾಯಿಗಳು ಗಂಡು ನಾಯಿಯೋ ಅಥವಾ ಹೆಣ್ಣು ನಾಯಿಯೋ ಎಂಬುದನ್ನು ಸ್ಪಷ್ಟವಾಗಿಲ್ಲ.
ಬೆಂಗಳೂರಲ್ಲೊಂದು ಅಮಾನವೀಯ ಘಟನೆ: ಆಹಾರದಲ್ಲಿ ವಿಷ ಬೆರೆಸಿ 7 ನಾಯಿಗಳ ಹತ್ಯೆ!
ಈ ಹಿಂದೆ 2019ರಲ್ಲಿ ನಡೆಸಿದ ಬೀದಿ ನಾಯಿ ಸಮೀಕ್ಷೆಯಲ್ಲಿ ನಡೆಸಿದ 3.10 ಲಕ್ಷ ಬೀದಿ ನಾಯಿಗಳು ಇವೆ ಎಂದು ತಿಳಿದು ಬಂದಿತ್ತು. ಇದೀಗ ನಡೆಸಲಾದ ಸಮೀಕ್ಷೆಯಲ್ಲಿ 2.79 ಲಕ್ಷದಷ್ಟು ಬೀದಿ ನಾಯಿಗಳು ಇವೆ. ಕಳೆದ ನಾಲ್ಕು ವರ್ಷದಲ್ಲಿ ನಗರದಲ್ಲಿ ಬರೋಬ್ಬರಿ 31 ಸಾವಿರಕ್ಕೂ ಅಧಿಕ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.
ಕೇಂದ್ರ ವಲಯದಲ್ಲಿ ಹೆಚ್ಚು ಬೀದಿ ನಾಯಿಗಳು
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಪೂರ್ವ ವಲಯ, ಪಶ್ವಿಮ ವಲಯ ಹಾಗೂ ದಕ್ಷಿಣ ವಲಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಬೀದಿ ನಾಯಿಗಳಿವೆ ಎಂದು ತಿಳಿದು ಬಂದಿದೆ. ಮೂಲಗಳ ಮಾಹಿತಿ ಪ್ರಕಾರ ಪೂರ್ವ ವಲಯ ಬೀದಿ ನಾಯಿಗಳ ಸಂಖ್ಯೆಯಲ್ಲಿ ಒಂದನೇ ಸ್ಥಾನದಲ್ಲಿದೆ. ದಕ್ಷಿಣ ವಲಯ ಎರಡನೇ ಸ್ಥಾನದಲ್ಲಿದ್ದು, ಕೊನೆಯ ಸ್ಥಾನದಲ್ಲಿ ಯಲಹಂಕ ವಲಯವಿದೆ.ಬಾ
ಶೇ.70 ಸಂತಾನಹರಣ ಚಿಕಿತ್ಸೆ
2019ರಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಶೇ.54 ರಷ್ಟು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಆಗಿತ್ತು. ಇದೀಗ ನಗರದ ಬೀದಿ ನಾಯಿಗಳ ಪೈಕಿ ಶೇ.70ರಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ನಾಲ್ಕು ವರ್ಷದಲ್ಲಿ ಶೇ.16 ಶಸ್ತ್ರ ಚಿಕಿತ್ಸೆ ಪ್ರಮಾಣದಲ್ಲಿ ಏರಿಕೆ ಆಗಿದೆ. ಇನ್ನು ಶೇ.3೦ರಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಬಾಕಿ ಇದೆ. ಮುಂದಿನ ಎರಡ್ಮೂರು ವರ್ಷದಲ್ಲಿ ಬಾಕಿ ಇರುವ ಶೇ.30ರಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು. ಬಳಿಕ ನಾಯಿಗಳ ಸಂಖ್ಯೆ ಇನ್ನಷ್ಟು ಕಡಿಮೆ ಆಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ನಾಯಿ ಸಂಖ್ಯೆ ಇಳಿಕೆಗೆ ಕಾರಣ ಏನು?
ಬಿಬಿಎಂಪಿ ಪಶುಪಾಲನೆ ವಿಭಾಗವು ಪ್ರತಿ ವರ್ಷ 50 ಸಾವಿರಕ್ಕೂ ಅಧಿಕ ನಾಯಿಗಳ ಸಂತಾನಹರಣ ಹಾಗೂ 1.50 ಲಕ್ಷ ನಾಯಿಗಳಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡುವುದು ಸೇರಿದಂತೆ ಮೊದಲಾದ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಇಳಿಕೆ ಆಗಿದೆ. ಜತೆಗೆ, ಕೊರೋನಾ ಸೋಂಕಿನ ಸಂದರ್ಭದಲ್ಲಿ ಲಾಕ್‌ಡೌನ್ ನಿಂದ ಬೀದಿ ನಾಯಿಗಳಿಗೆ ಉಂಟಾದ ಆಹಾರದ ಕೊರತೆಯೂ ಮತ್ತೊಂದು ಕಾರಣ ಎನ್ನಲಾಗುತ್ತಿದೆ.
ಬೆಂಗ್ಳೂರಿನ ಬೀದಿ ನಾಯಿಗಳಿಗೆ ಮೈಕ್ರೋ ಚಿಪ್..!
ವಾರಾಂತ್ಯಕ್ಕೆ ನಾಯಿ ಗಣತಿ ವರದಿ ಬಿಡುಗಡೆ
ನಾಲ್ಕು ವರ್ಷದ ಬಳಿಕ ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿಗಳ ಗಣತಿ ನಡೆಸಲಾಗಿದೆ. ರಾಜ್ಯ ಸರ್ಕಾರದ ಪಶುಪಾಲನೆ ವಿಭಾಗದಿಂದ ೫೦ ಸಿಬ್ಬಂದಿ ಮತ್ತು ಬಿಬಿಎಂಪಿಯ ೫೦ ಸಿಬ್ಬಂದಿ ಸೇರಿದಂತೆ ಒಟ್ಟು ೧೦೦ ಮಂದಿಯನ್ನು ನಿಯೋಜಿಸಲಾಗಿತ್ತು. ಬೈಕ್‌ನಲ್ಲಿ ಬೀದಿ ಬೀದಿ ಸುತ್ತಿ ಗಣತಿ ನಡೆಸಿದ್ದಾರೆ. ಒಬ್ಬ ಸಿಬ್ಬಂದಿಯು ಬೈಕ್ ಚಾಲನೆ ಮಾಡಿದ್ದಾರೆ, ಮತ್ತೊಬ್ಬರು ಮೊಬೈಲ್‌ನಲ್ಲಿ ಬೀದಿ ನಾಯಿ ಫೋಟೋ ತೆಗೆದು ಆ್ಯಪ್ ಮೂಲಕ ದಾಖಲಿಸಿ ಗಣತಿ ಕಾರ್ಯ ನಡೆಸಿದ್ದಾರೆ. ಗಣತಿಯ ಮಾಹಿತಿಯನ್ನು ಕ್ರೂಢೀಕರಣ ಮಾಡಲಾಗುತ್ತಿದೆ. ವಾರ್ಡ್‌ವಾರು ಎಷ್ಟು ಗಂಡು, ಎಷ್ಟು ಹೆಣ್ಣು ನಾಯಿ, ಎಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಆಗಿದೆ. ಇಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಆಗಿಲ್ಲ ಎಂಬ ಮಾಹಿತಿಯನ್ನು ಒಳಗೊಂಡ ಸಂಪೂರ್ಣ ವರದಿ ಸಿದ್ಧವಾಗಿದೆ. ಶುಕ್ರವಾರ ಬಿಡುಗಡೆ ಮಾಡುವುದಾಗಿ ಮೂಲಗಳು ತಿಳಿಸಿವೆ.
ಬೀದಿ ನಾಯಿಗಳ ವಿವರ
ಲಿಂಗ.
202..
2019
ಗಂಡು
1.65 ಲಕ್ಷ..
2.06 ಲಕ್ಷ
ಹೆಣ್ಣು..
82 ಸಾವಿರ..
1.03 ಲಕ್ಷ
ಲಿಂಗ ಪತ್ತೆ ಆಗದ ನಾಯಿಗಳು..
31 ಸಾವಿರ
ಒಟ್ಟು: 2.79 ಲಕ್ಷ.
3.09 ಲಕ್ಷ