Selfie Tragedy: ಸೆಲ್ಫಿ ಹುಚ್ಚಿಗೆ ಯುವಕ ಹೊಗೇನಕಲ್‌ ಜಲಪಾತದಲ್ಲಿ ನೀರುಪಾಲು

*  ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದ ಯುವಕ
*  80 ಅಡಿಗಿಂತಲೂ ಆಳವಾದ ಜಾಗಕ್ಕೆ ಬಿದ್ದು ಮೃತಪಟ್ಟ ಉಮಾಶಂಕರ್‌
*  ಸೆಲ್ಫಿ ಭರದಲ್ಲಿ ರೈಲಿಗೆ ಸಿಕ್ಕಿ ಬಾಲಕ ಸಾವು

19 Year Old Boy Dies While Taking Selfie in Hogenakkal Falls at Chamarajanagar grg

ಚಾಮರಾಜನಗರ(ಜ.28): ಸೆಲ್ಫಿ(Selfie) ಹುಚ್ಚಿನಿಂದ ಫೋಟೋ ಕ್ಲಿಕ್ಕಿಸಿಕೊಳ್ಳಲು ತೆರಳಿದ್ದ ವಿದ್ಯಾರ್ಥಿ(Student) ನೀರುಪಾಲಾದ ಘಟನೆ ಹೊಗೇನಕಲ್‌ ಜಲಪಾತದಲ್ಲಿ(Hogenakkal Falls) ನಡೆದಿದೆ.  ಮೈಸೂರು(Mysuru) ಮೂಲದ ಉಮಾಶಂಕರ್‌(19) ಎಂಬ ನರ್ಸಿಂಗ್‌ ವಿದ್ಯಾರ್ಥಿ ಮೃತ ಯುವಕ. ಸ್ನೇಹಿತರಾದ ರವಿಕುಮಾರ್‌, ಶಿವಪ್ರಸಾದ್‌ ಜತೆ ತೆರಳಿದ್ದ ಉಮಾಶಂಕರ್‌ ಸ್ನೇಹಿತರಿಗೆ ಫೋಟೋ ತೆಗೆಯುವಂತೆ ಹೇಳಿದ್ದಾನೆ.

ಸ್ನೇಹಿತರು ಪೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. 80 ಅಡಿಗಿಂತಲೂ ಆಳವಾದ ಜಾಗಕ್ಕೆ ಉಮಾಶಂಕರ್‌ ಬಿದ್ದು ಮೃತಪಟ್ಟಿದ್ದಾನೆ(Death).

Selfie Tragedy: ಡ್ಯಾಂನಿಂದ ಏಕಾಏಕಿ ನೀರು, ನಾಲ್ವರ ದುರ್ಮರಣ

ಸೆಲ್ಫಿ ಭರದಲ್ಲಿ ರೈಲಿಗೆ ಸಿಕ್ಕಿ ಬಾಲಕ ಸಾವು

ದಾವಣಗೆರೆ(Davanagere): ಗೆಳೆಯರೊಂದಿಗೆ ಆಟವಾಡಲು ಹೋಗಿದ್ದ ಬಾಲಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಚಲಿಸುವ ರೈಲಿಗೆ(Train) ಸಿಲುಕಿ ಮೃತಪಟ್ಟಿರುವ ಘಟನೆ ಭಾನುವಾರ ನಗರದ ಡಿಸಿಎಂ ಟೌನ್‌ಶಿಪ್‌ ಬಳಿ ನಡೆದಿದೆ. 

ಇಲ್ಲಿನ ಭಗತ್‌ ಸಿಂಗ್‌ ನಗರದ ಡೇವಿಡ್‌ ಎಂಬುವರ ಮಗ ಸಚಿನ್‌(15) ಮೃತ ಬಾಲಕ. ಜ. 23 ರಂದು ರಜೆ ಇದ್ದುದರಿಂದ ಗೆಳೆಯರ ಜೊತೆ ಸುತ್ತಾಡಲು ಹೋಗಿದ್ದ ಸಚಿನ್‌ ರೈಲು ಬರುತ್ತಿದ್ದಾಗಲೇ ಹಳಿ ದಾಟಲು ಮುಂದಾಗಿದ್ದರಿಂದ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ದಾವಣಗೆರೆ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲು ಬರುವಾಗ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರಿಂದ ದುರ್ಘಟನೆ ಸಂಭವಿಸಿದೆ. ಒಂದು ಹಳಿಯಲ್ಲಿ ಸಚಿನ್‌ ನಿಂತುಕೊಂಡು ಮತ್ತೊಂದು ಹಳಿಯಲ್ಲಿ ರೈಲು ಬರುವಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಆದರೆ ದುರದೃಷ್ಟವಶಾತ್‌ ರೈಲು ಪಕ್ಕದ ಹಳಿಯ ಬದಲಿಗೆ ಬಾಲಕನಿದ್ದ ಹಳಿಯಲ್ಲಿ ಬಂದು ಡಿಕ್ಕಿ ಹೊಡೆದಿದೆ ಎಂಬ ಮಾತುಗಳೂ ಕೇಳಿಬಂದಿವೆ.

ಬಸ್‌- ಕ್ಯಾಂಟರ್‌ ಡಿಕ್ಕಿ: 8 ಮಂದಿಗೆ ಗಾಯ

ಚಿಕ್ಕಬಳ್ಳಾಪುರ(Chikkaballapur): ಕೆಎಸ್‌ಆರ್‌ಟಿಸಿ(KSRTC) ಬಸ್‌ ಹಾಗೂ ಕ್ಯಾಂಟರ್‌ ನಡುವೆ ಮುಖಾಮುಖಿ ಡಿಕ್ಕಿ(Collision) ಸಂಭವಿಸಿದ ಪರಿಣಾಮ ಹಲವು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಕಡೆಯಿಂದ ಗೌರಿಬಿದನೂರಿಗೆ ತೆರಳುತ್ತಿದ್ದ ಪುತ್ತೂರು ಘಟಕದ ಕೆ.ಎ.19:ಎಫ್‌: 3344 ವಾಹನ ಗೌರಿಬಿದನೂರು ಕಡೆಯಿಂದ ಚಿಕ್ಕಬಳ್ಳಾಪುರದ ಕಡೆಗೆ ಕಬ್ಬಿಣದ ರಾಡುಗಳನ್ನ ಹೊತ್ತು ಆಗಮಿಸುತ್ತಿದ್ದ ಕ್ಯಾಂಟರ್‌ ನಡುವೆ ಡಿಕ್ಕಿ ಸಂಭವಿಸಿದೆ.

Selfie Tragedy| ಕಾರಿನ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕ್ಯಾಂಟರ್‌ ಡಿಕ್ಕಿ: ಇಬ್ಬರ ಸಾವು

ಅಪಘಾದತ(Accident) ಪರಿಣಾಮ ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕ್ಯಾಂಟರ್‌ ನಲ್ಲಿದ್ದವರು ಹಾಗೂ ಬಸ್‌ ಚಾಲಕ ನಿರ್ವಾಹಕ ಸೇರಿ ಒಟ್ಟು 7-8 ಮಂದಿ ಪ್ರಯಾಣಿಕರು(Passengers) ಸಣ್ಣ ಪುಟ್ಟಗಾಯಗಳಿಂದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಅಪಘಾತಕ್ಕೆ ಕ್ಯಾಂಟರ್‌ ಚಾಲಕನ ಅತಿವೇಗ ಹಾಗೂ ಅಜಾಗೃಕತೆಯೆ ಕಾರಣ ಎಂದು ತಿಳಿದು ಬಂದಿದೆ.

ನೆಗುದಿಗೆ ಬಿದ್ದ ರಸ್ತೆ ಅಗಲೀಕರಣ:

ಗೌರಿಬಿದನೂರು-ಚಿಕ್ಕಬಳ್ಳಾಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 234 ರ ಕಾಮಗಾರಿ ಇನ್ನೂ ಅರ್ಧಕ್ಕೆ ಅರ್ಧ ನೆನಗುದಿಗೆ ಬಿದ್ದಿದೆ. ಅದರಲ್ಲೂ ಕಣಿವೆ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾರ್ಯ ಮೊಟಕುಗೊಂಡಿದ್ದು ಕಿಷ್ಕಿಂದೆಯಂತಹ ಕಣಿವೆ ಪ್ರದೇಶದಲ್ಲಿ ಸುಗಮ ಸಂಚಾರ ಸಾಧ್ಯವಾಗದೇ ಪದೇ ಪದೇ ವಾಹನಗಳ ನಡುವೆ ಈ ರೀತಿ ಅಪಘಾತಗಳು ಸಂಭವಿಸಿ ಪ್ರಯಾಣಿಕರು ಸಂಕಷ್ಟ ಎದುರಿಸಬೇಕಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೆನಗುದಿಗೆ ಬಿದ್ದಿರುವ ಹೆದ್ದಾರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿದರೆ ಇತಂಹ ಅವಘಡೆಗಳಿಗೆ ಬ್ರೇಕ್‌ ಹಾಕಬಹುದಾಗಿದೆ.
 

Latest Videos
Follow Us:
Download App:
  • android
  • ios