ಆರೋಪದಲ್ಲಿ ಹುರುಳಿಲ್ಲ ಮುಡಾದಲ್ಲಿ ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ಸ್ನೇಹಮಯಿ ಕೃಷ್ಣಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಪ್ಪಾಗಿದ್ದರೆ ಯಾರಾದರೂ ಶಿಕ್ಷೆ ಅನುಭವಿಸ್ಟೇಕು ಎಂದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ 

ಮೈಸೂರು(ನ.17): ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಕುಟುಂಬದ ವಿರುದ್ದವೂ ಇದೀಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಆರೋಪ ಕೇಳಿಬಂದಿದೆ. ಜಿ.ಟಿ.ದೇವೇಗೌಡರ ಸ್ವಗ್ರಾಮದಲ್ಲಿ ರುವ ಅವರ ಸೋದರಿ ಪುತ್ರ ಮಹೇಂದ್ರ ಎಂಬುವರಿಗೆ 50:50ರ ಅನುಪಾತದಲ್ಲಿ ಮುಡಾದಿಂದ 19 ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಈ ಪ್ರಕರಣದಲ್ಲಿ ಭೂ ಮಾಲೀಕನೇ ಅಲ್ಲದ ವ್ಯಕ್ತಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. 

ಪ್ರಕರಣ ಬೇನಾಮಿ ಕಾಯ್ದೆ ಯಡಿ ತನಿಖೆ ನಡೆಸಬೇಕು. ಇದರೆ ಬಗ್ಗೆಯೂ ಮುಡಾ ಸಂಬಂಧ ನೀಡಿದ ನನ್ನ ದೂರಿನಲ್ಲಿ ಉಲ್ಲೇಖ ಮಾಡಿದ್ದೇನೆ. ಎಲ್ಲದರ ಬಗ್ಗೆ ತನಿಖೆ ನಡೆದಾಗ ಮಹೇಂದ್ರ ಅವರು ಶಾಸಕ ಜಿ.ಟಿ.ದೇವೇಗೌಡರ ಬೇನಾಮಿ ಹೌದೋ, ಅಲ್ಲವೋಎಂಬುದುಗೊತ್ತಾಗಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಜಮೀನು ಮಾರಾಟ ಮಾಡದೆ ಮಕ್ಕಳ ಭವಿಷ್ಯಕ್ಕೆ ಉಳಿಸಿಕೊಳ್ಳಿ: ಶಾಸಕ ಜಿ.ಟಿ.ದೇವೇಗೌಡ

ದೇವನೂರು ಗ್ರಾಮದ ಗುಂಗ್ರಾಲ್ ಛತ್ರದ ಸರ್ವೆ ನಂ.81/2 ರಲ್ಲಿದ್ದ ಮಹೇಂದ್ರಗೆ ಸೇರಿದ 2.22 ಎಕರೆ ಭೂಮಿಯನ್ನು ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ ಯಾವಾಗ ಆ ಭೂಮಿ ವಶಪಡಿಸಿಕೊಂಡು ಅಭಿವೃದ್ಧಿಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3ನೇ ಹಂತದಲ್ಲಿ ಬದಲಿ ನಿವೇಶನ ಮಂಜೂರು ಕೂಡ ಮಾಡಲಾಗಿದೆ. ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವಇಚ್ಛೆಯಿಂದ ಭೂಮಿ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದು ಆಗಿದ್ದು, ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ ಗಳು ಮಾತ್ರ. ಅದರಂತೆ 4060 ಮತ್ತು 4030ರ 3600 ಚದರ ಅಡಿ ಮಾತ್ರ ಪರಿಹಾರವಾಗಿ ಸಿಗಬೇಕಾಗಿತ್ತು. ಆದರೆ, ಅವರಿಗೆ ಪರಿಹಾರವಾಗಿ 19 ನಿವೇಶನಗಳನ್ನು ನೀಡಲಾಗಿದೆ ಆರೋಪಿಸಿದ್ದಾರೆ.

ಆರೋಪದಲ್ಲಿ ಹುರುಳಿಲ್ಲ ಮುಡಾದಲ್ಲಿ ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ಸ್ನೇಹಮಯಿ ಕೃಷ್ಣಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ತಪ್ಪಾಗಿದ್ದರೆ ಯಾರಾದರೂ ಶಿಕ್ಷೆ ಅನುಭವಿಸ್ಟೇಕು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. 

ಅಬ್ಬಬ್ಬಾ! ಜಿಟಿ ದೇವೇಗೌಡ ಪರಾಕ್ರಮ ನೋಡಿದ್ರೆ ಮುಡಾ ಫಲಾನುಭವಿ ಇರಬೇಕು: ಹೆಚ್. ವಿಶ್ವನಾಥ್!

ನನ್ನ ಸಂಬಂಧಿ ಕಾನೂನು ಮೀರಿದ್ದರೆ ಶಿಕ್ಷೆಯಾಗಲಿ: ಜಿ.ಟಿ.ದೇವೇಗೌಡ 

ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನನ್ನ ಪ್ರಭಾವ ಬಳಸಿ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ನೇಹಮಯಿ ಕೃಷ್ಣ ಬುದ್ದಿವಂತ ಅವರಲ್ಲಿ ಶಕ್ತಿ ಇದೆ. 1 ಎಕರೆ ಭೂಮಿ ಸ್ವಾಧೀನಪಡಿಸಿ ದುಡ್ಡಿನ ಪರಿಹಾರ ನೀಡಿದರೆ 1 ಸೈಟ್ ಕೊಡುತ್ತಾರೆ. ಆ ಜಮೀನಿಗೆ ಪರಿಹಾರ ಕೊಡದೇ ಇದ್ದರೆ 50:50ನಲ್ಲಿ ಸೈಟ್ ಕೊಡಬೇಕು. ಭೂಮಿ ನೀಡಿದ ರೈತರಿಗೆ ಇದನ್ನು ಕಾನೂನು ಬದ್ದವಾಗಿ ಕೊಡಬೇಕು. ಹೀಗೆ ಮಾಡುವಾಗ ಕೆಲವು ನ್ಯೂನತೆಗಳಾಗಿವೆ. ಸೈಟ್ ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ ಯಾರೇ ಆಗಲಿ ಕಾನೂನಿನ ವಿರುದ್ದವಾಗಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದರು.