ಅಬ್ಬಬ್ಬಾ! ಜಿಟಿ ದೇವೇಗೌಡ ಪರಾಕ್ರಮ ನೋಡಿದ್ರೆ ಮುಡಾ ಫಲಾನುಭವಿ ಇರಬೇಕು: ಹೆಚ್. ವಿಶ್ವನಾಥ್!
ಮೈಸೂರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಮುಖ್ಯಮಂತ್ರಿಗಳನ್ನು ಹೊಗಳಿದ ಶಾಸಕ ಜಿ.ಟಿ. ದೇವೇಗೌಡ ಕೂಡ ಮುಡಾ ಫಲಾನುಭವಿ ಇರಬೇಕೆಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆರೋಪಿಸಿದ್ದಾರೆ.
ಮೈಸೂರು (ಅ.04): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಗಳಿದ ಪರಾಕ್ರಮವನ್ನು ನೋಡಿದರೆ ಶಾಸಕ ಜಿ.ಟಿ. ದೇವೇಗೌಡ ಕೂಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಫಲಾನುಭವಿ ಇರಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ವಿಖ್ಯಾದ ಮೈಸೂರು ದಸರಾ ಸಭೆಯ ಪಾವಿತ್ರ್ಯಾತೆ ಹಾಳಾಗಿದೆ. ನಿನ್ನೆ ಅದು ರಾಜಕೀಯ ನಾಯಕರ ವೇದಿಕೆ ಆಗಿತ್ತು. ದಸರಾ ಉದ್ಘಾಟಕರು ಕೂಡ ರಾಜಕೀಯ ಭಾಷಣ ಮಾಡಿದ್ದಾರೆ. ಇಡೀ ಕಾರ್ಯಕ್ರಮ ಹೊಲಸು ಕಾರ್ಯಕ್ರಮ ಆಗಿ ಹೋಯ್ತು. ನಾಡ ದೇವತೆ ಚಾಮುಂಡೇಶ್ವರಿ ಮಹಿಮೆ, ದಸರಾ ಮಹೋತ್ಸವದ ಬಗ್ಗೆ ಜನರ ಸಹಕಾರದ ಮಾತುಗಳೇ ಇರಲಿಲ್ಲ. ಇನ್ನೆಂದು ದಸರಾ ಉದ್ಘಾಟನೆ ಕಾರ್ಯಕ್ರಮವೇ ಬೇಡ ಅನಿಸಿದೆ ಎಂದು ಬೇಸರವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಿಎಂ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್: ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ ವ್ಯಂಗ್ಯ
ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇನು ತಪ್ಪೇ ಮಾಡಿಲ್ಲ ಅಂತಾ ಹೇಳಿದ್ದಾರೆ. ಇನ್ನು ಶಾಸಕ ಜಿ.ಟಿ. ದೇವೇಗೌಡ ಭಾಷಣ ಅಬ್ಬಾ ಅಅಬ್ಬಾ! ಈ ಪರಾಕ್ರಮವನ್ನು ನೋಡಿದರೆ ಶಾಸಕ ಜಿ.ಟಿ. ದೇವೇಗೌಡ ಕೂಡ ಮುಡಾ ಫಲನುಭಾವಿ ಇರಬೇಕು ಅನ್ನಿಸುತ್ತದೆ. ಇಡೀ ಕಾರ್ಯಕ್ರಮವನ್ನು ಜಿ.ಟಿ. ದೇವೇಗೌಡನೇ ಹಾಳು ಮಾಡಿದ. ಇಡೀ ದಸರಾ ಕಾರ್ಯಕ್ರಮವನ್ನು ರಾಜಕೀಯ ಡೊಂಬರಾಟಗಳು ನುಂಗಿ ಹಾಕಿದೆ. ರಾಜ್ಯದಲ್ಲಿ ಸರ್ಕಾರ ಬೀಳಿಸುವ ಮಾತು ಯಾರು ಆಡಿದ್ದಾರೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷದವರೇ ಮೇಲೆಳೆದುಕೊಂಡು ಕುಣಿಯುತ್ತಿರುವುದು ಎಂದು ಹೇಳಿದರು.
ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆಂದರೆ ಎಚ್‌ಡಿಕೆಯೂ ಕೊಡಲಿ: ಶಾಸಕ ಜಿ.ಟಿ.ದೇವೇಗೌಡ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ಸೈಟ್ ಹಂಚಿಕೆ ವಿಚಾರವು ರಾಜಭವನ, ಹೈಕೋರ್ಟ್, ಲೋಕಾಯುಕ್ತ ಎಲ್ಲವನ್ನೂ ಬಳಸಿ ಸುತ್ತಾಡಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಪೀಠವು ನೀಡಿದಂತಹ ತೀರ್ಪುನ್ನು ಒಮ್ಮೆ ಎಲ್ಲರೂ ಓದಿ. ಇನ್ನು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಪ್ರವೇಶ ಮಾಡಿದ ಮೇಲೆ ಬಾವನತ್ಮಾಕ ಕಾಗದ ಮೂಲಕ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರು ಸೈಟ್ ಹಿಂದುರಿಗಿಸಿದ್ದಾರೆ ಎಂದು ಹೆಚ್. ವಿಶ್ವನಾಥ್ ಕುಟುಕಿದರು.