Asianet Suvarna News Asianet Suvarna News

ಉಳ್ಳಾ​ಲ: ಕುಟುಂಬದ ಎಲ್ಲ 17 ಮಂದಿಗೆ ಪಾಸಿ​ಟಿ​ವ್‌!

ಉಳ್ಳಾಲದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸಾಮುದಾಯಿಕವಾಗಿ ಹಬ್ಬುತ್ತಿದ್ದು, ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲ 16 ಮಂದಿಗೆ ಸೋಂಕು ತಗು​ಲಿದ್ದು, ಈ ಮೂಲಕ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢಪ​ಟ್ಟಿದೆ.

17 from same family found covid19 postive in Ullal
Author
Bangalore, First Published Jun 28, 2020, 7:13 AM IST

ಉಳ್ಳಾ​ಲ(ಜೂ.28): ಉಳ್ಳಾಲದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಸಾಮುದಾಯಿಕವಾಗಿ ಹಬ್ಬುತ್ತಿದ್ದು, ಉಳ್ಳಾಲದ ಪ್ರಥಮ ಸೋಂಕಿತೆಯ ಮನೆಯಲ್ಲಿದ್ದ ಎಲ್ಲ 16 ಮಂದಿಗೆ ಸೋಂಕು ತಗು​ಲಿದ್ದು, ಈ ಮೂಲಕ ಒಂದೇ ಮನೆಯ 17 ಸದಸ್ಯರಿಗೆ ಸೋಂಕು ದೃಢಪ​ಟ್ಟಿದೆ.

ಇನ್ನುಳಿದಂತೆ ಉಳ್ಳಾಲ ವ್ಯಾಪ್ತಿಯಲ್ಲಿ ಪೊಲೀ​ಸರು ಸೇರಿದಂತೆ ಒಟ್ಟು 22 ಪ್ರಕ​ರ​ಣ​ಗಳು ಶನಿ​ವಾರ ಪತ್ತೆ​ಯಾ​ಗಿದೆ. ಈ ಮೂಲಕ ಉಳ್ಳಾಲ, ದೇರಳಕಟ್ಟೆ, ಅಸೈಗೋಳಿ ವ್ಯಾಪ್ತಿ​ಯ​ಲ್ಲಿ ಸೋಂಕಿತರ ಸಂಖ್ಯೆ 29ಕ್ಕೇರಿದೆ. ಈ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ದಿನ ಭವಿಷ್ಯ: ಈ ರಾಶಿಯವರು ತಪ್ಪದೇ ಶಾಂತಿ ಮಂತ್ರ ಪಠಿಸಿ!

ಉಳ್ಳಾಲ ಆಝಾದ್‌ ನಗರದ 57ರ ಹರೆಯದ ಮಹಿಳೆಗೆ ಆರಂಭದಲ್ಲಿ ಸೋಂಕು ತಗುಲಿತ್ತು. ಅವರು ನಗರದ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಮನೆಯಲ್ಲಿದ್ದ ಒಟ್ಟು 16 ಮಂದಿ ಸದಸ್ಯರಿಗೆ ಶನಿವಾರ ಸೋಂಕು ದೃಢವಾಗಿದೆ. ಈ ಮೂಲಕ ಒಂದೇ ಕುಟುಂಬದ 17 ಜನರಿಗೆ ಸೋಂಕು ತಗು​ಲಿದೆ. ಈ ಮನೆಯ ಇನ್ನಿ​ಬ್ಬರು ಸದಸ್ಯರು ಸೌದಿಯಿಂದ ಆಗಮಿಸಿದ್ದು ಅವರು ಖಾಸಗಿ ಕ್ವಾರಂಟೈನ್‌ನಲ್ಲಿದ್ದಾರೆ.

ಧಾರವಾಡದಲ್ಲಿ ಮತ್ತೆ 19 ಕೊರೋನಾ ಪ್ರಕ​ರಣ ಪತ್ತೆ

ಉಳ್ಳಾಲ ಠಾಣೆಯ ಇಬ್ಬರು ಪೆಲೀಸ್‌ ಅಧಿಕಾರಿಗಳಿಗೆ ಈ ಹಿಂದೆ ಸೋಂಕು ತಗುಲಿತ್ತು ಇವರ ಸಂಪರ್ಕದಲ್ಲಿದ್ದ ಇಬ್ಬರು ಸಿಬ್ಬಂದಿಗಳಿಗೆ ಶನಿವಾರ ಸೋಂಕು ಪತ್ತೆ​ಯಾ​ಗಿ​ದೆ. ಉಳಿದಂತೆ ವಿದೇಶದಿಂದ ಆಗಮಿಸಿ ಉಳ್ಳಾಲದ ಖಾಸಗಿ ರೆಸಾರ್ಟ್‌ನಲ್ಲಿ ಕ್ವಾರಂಟೈ​ನ್‌​ಲ್ಲಿದ್ದ ಕೃಷ್ಣಾಪುರ ಮೂಲದ ಇಬ್ಬರಿಗೆ ಸೋಂಕು ತಗು​ಲಿದೆ.

ಧಾರವಾಡದಲ್ಲಿ ಕೊರೋನಾ ಸ್ಫೋಟ: 30 ಕೋವಿಡ್‌ ಪಾಸಿಟಿವ್‌ ಕೇಸ್‌

ದೇರಳಕಟ್ಟೆಯ ಖಾಸಗಿ ಆಹಾರ ತಯಾರಿಕ ಸಂಸ್ಥೆಯ ಇಬ್ಬರಿಗೆ ಸೋಂಕು ದೃಢಪ​ಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಯು.ಟಿ. ಖಾದರ್‌ ಸೀಲ್ಡೌನ್‌ ಆಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಸಭೆ ನಡೆಸಿ, ಸೋಂಕಿ​ನಿಂದ ರಕ್ಷಿ​ಸಿ​ಕೊ​ಳ್ಳಲು ಕೈಗೊ​ಳ್ಳ​ಬೇ​ಕಾದ ಸುರ​ಕ್ಷತಾ ಕ್ರಮ​ಗಳ ಬಗ್ಗೆ ತಿಳಿ​ಸಿ​ದ್ದಾ​ರೆ.

Follow Us:
Download App:
  • android
  • ios