ಧಾರವಾಡದಲ್ಲಿ ಕೊರೋನಾ ಸ್ಫೋಟ: 30 ಕೋವಿಡ್‌ ಪಾಸಿಟಿವ್‌ ಕೇಸ್‌

ಧಾರವಾಡ ಜಿಲ್ಲೆಯಲ್ಲಿ ಒಟ್ಟು 274 ಕ್ಕೇರಿದ ಪ್ರಕರಣಗಳ ಸಂಖ್ಯೆ| ಸಕ್ರಿಯ ಪ್ರಕರಣಗಳು-115| ಗುಣಮುಖರಾಗಿ ಬಿಡುಗಡೆ-155| ಕೊರೋನಾ ವೈರಸ್‌ಗೆ ಮತ್ತೊಂದು ಬಲಿ| ಧಾರವಾಡ ಜಿಲ್ಲೆಯಲ್ಲಿ ನಾಲ್ಕಕ್ಕೇರಿದ ಸಾವಿನ ಸಂಖ್ಯೆ|
 

30 New Coronavirus Positive Cases in Dharwad district

ಧಾರವಾಡ(ಜೂ. 27): ಜಿಲ್ಲೆಯಲ್ಲಿ ಶುಕ್ರವಾರ 30 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 274 ಪ್ರಕರಣಗಳು ವರದಿಯಾಗಿವೆ. 155 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ನಾಲ್ವರು ಮರಣ ಹೊಂದಿದ್ದಾರೆ. ಸದ್ಯ 115 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಪಿ- 10793 (19 ವರ್ಷ, ಪುರುಷ) ಹಳೆ ಹುಬ್ಬಳ್ಳಿ ಜಂಗ್ಲಿಪೇಟ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ- 10794 (30 ವರ್ಷ, ಮಹಿಳೆ) ಗಿರಣಿ ಚಾಳ ಐದನೇ ಕ್ರಾಸ್‌ ನಿವಾಸಿ. ಇವರು ದಾವಣಗೆರೆ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಪಿ-10795 (21 ವರ್ಷ, ಪುರುಷ ) ಶೋಧಾ ಟೊಯೋಟಾ, ನವನಗರ ಹತ್ತಿರದ ವ್ಯಕ್ತಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ದಿಂದ ಬಳಲುತ್ತಿದ್ದರು. ಪಿ -10796 (31 ವರ್ಷ, ಮಹಿಳೆ ) ಭವಾನಿಪಾರ್ಕ್ ಅಕ್ಕಮಹಾದೇವಿ ಲೇಔಟ್‌ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10797 (63 ವರ್ಷ, ಮಹಿಳೆ ), ಪಿ -10798 (61 ವರ್ಷ, ಮಹಿಳೆ ) ಇವರಿಬ್ಬರೂ ಹಳೆ ಹುಬ್ಬಳ್ಳಿ ಪಡದಯ್ಯನ ಹಕ್ಕಲ ನಿವಾಸಿಗಳು.

ಧಾರವಾಡ: ಮೊರಬ ಕೊರೋನಾ ಹಾಟ್‌ಸ್ಪಾಟ್‌, 41 ಪ್ರಕರಣ ದೃಢ

ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -10799 (53 ವರ್ಷ, ಮಹಿಳೆ ) ಮಿಚಿಗನ್‌ ಕಾಂಪೌಂಡ್‌, ಲೋಬೋ ಅಪಾರ್ಟ್‌ಮೆಂಟ್‌ ನಿವಾಸಿ. ಪಿ-9416 ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ. ಪಿ -10800 (25 ವರ್ಷ, ಮಹಿಳೆ ) ಹುಬ್ಬಳ್ಳಿ ತಾಲೂಕು ಉಮಚಗಿ ಗ್ರಾಮದ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ದಿಂದ ಬಳಲುತ್ತಿದ್ದರು. ಪಿ -10801 (17 ವರ್ಷ, ಪುರುಷ) ಗಣೇಶಪೇಟೆ, ಶೆಟ್ಟರ್‌ ಓಣಿ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10802 (42 ವರ್ಷ, ಪುರುಷ) ಹಳೆಹುಬ್ಬಳ್ಳಿ, ಜಂಗ್ಲಿಪೇಟ, ಬಸವಣ್ಣ ದೇವಸ್ಥಾನ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10803 (27 ವರ್ಷ, ಪುರುಷ) ಅಂಚಟಗೇರಿಯ ಶಿವಳ್ಳಿ ಓಣಿ ನಿವಾಸಿ. ಪಿ-8743 ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ.

ಪಿ -10804 (26 ವರ್ಷ, ಪುರುಷ) ಹಳೆಹುಬ್ಬಳ್ಳಿ ಸದರಸೋಫಾ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10805 (54 ವರ್ಷ, ಪುರುಷ) ಗಣೇಶಪೇಟೆ , ಬಿಂದರಗಿ ಓಣಿ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10806 (25 ವರ್ಷ, ಪುರುಷ ) ಕಮರಿಪೇಟ ನಾಲ್ಕನೇ ಕ್ರಾಸ್‌ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10807 (48 ವರ್ಷ, ಪುರುಷ) ಗಣೇಶ ಪೇಟ, ಕುಲಕರ್ಣಿ ಹಕ್ಕಲ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10808 (43 ವರ್ಷ, ಪುರುಷ) ನಾರಾಯಣ ಸೋಫಾ, ಕೊಲೆಕಾರ ಪ್ಲಾಟ್‌ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು. ಪಿ -10809 (23 ವರ್ಷ, ಪುರುಷ) ಉಣಕಲ್‌ ಕಲ್ಮೇಶ್ವರ ದೇವಸ್ಥಾನ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ)ದಿಂದ ಬಳಲುತ್ತಿದ್ದರು.ಪಿ -10810 (23 ವರ್ಷ, ಮಹಿಳೆ) ಹಳೆಹುಬ್ಬಳ್ಳಿ ಅಲ್ತಾಫ ನಗರ ಕೊನೆಯ ಕ್ರಾಸ್‌ ನಿವಾಸಿ.

ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -10811 (07 ವರ್ಷ, ಬಾಲಕ ) ಕೌಲಪೇಟ ಪಿ.ಬಿ. ರಸ್ತೆಯ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ. 10812 (20 ವರ್ಷ, ಮಹಿಳೆ ) ರಾಯನಾಳ ಓಂ ಸರ್ಕಲ್‌ ನಿವಾಸಿ. ಪಿ-8743 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -10813 (46 ವರ್ಷ, ಮಹಿಳೆ ) ಕಮರಿಪೇಟ ನ್ಯೂ ಇಂಗ್ಲಿಷ್‌ ಶಾಲೆ ಹತ್ತಿರದ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -10814 (23 ವರ್ಷ, ಮಹಿಳೆ) ಇವರು ಪಶ್ಚಿಮ ಬಂಗಾಳದಿಂದ ಹಿಂದಿರುಗಿದವರು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದರು. ಪಿ -10815 (24 ವರ್ಷ, ಮಹಿಳೆ ) ಹಳೆಹುಬ್ಬಳ್ಳಿ ಬೀರಬಂದ್‌ ಓಣಿ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -10816 (42 ವರ್ಷ, ಮಹಿಳೆ) ಅಂಚಟಗೇರಿಯ ಗಾಣಿಗೇರ ಓಣಿ ನಿವಾಸಿ. ಪಿ-9417 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಪಿ -10817 (25 ವರ್ಷ, ಮಹಿಳೆ) ಆನಂದ ನಗರದ ಶಿಮ್ಲಾ ನಗರ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -10818 ( 09 ವರ್ಷ, ಬಾಲಕ ) ಧಾರವಾಡ ಹಳೆ ಬಸ್‌ ನಿಲ್ದಾಣ ಹತ್ತಿರ ನಗರ ಪೊಲೀಸ್‌ ಠಾಣೆ ಹಿಂಭಾಗದ ಪೊಲೀಸ್‌ ಕ್ವಾರ್ಟರ್ಸ್‌ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ ದಿಂದ ಬಳಲುತ್ತಿದ್ದರು.

ಪಿ -10819 (19 ವರ್ಷ, ಪುರುಷ ) ಆನಂದನಗರದ ಶಿಮ್ಲಾನಗರ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -10820 ( 42 ವರ್ಷ, ಪುರುಷ ) ಹುಬ್ಬಳ್ಳಿ ಅಂಚಟಗೇರಿ ಓಣಿ ನಿವಾಸಿ. ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -10821 ( 07 ವರ್ಷ,ಬಾಲಕ ) ಧಾರವಾಡ ಜನ್ನತನಗರ ನಿವಾಸಿ. ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಕೊರೋನಾ ವೈರಸ್‌ಗೆ ಮತ್ತೊಂದು ಬಲಿ

ಕೋವಿಡ್‌-​19, ಎಚ್‌ಐವಿ ಏಡ್ಸ್‌ ಹಾಗೂ ಇತರ ಅನಾರೋಗ್ಯ ಲಕ್ಷಣಗಳಿಂದ ಬಳಲುತ್ತಿದ್ದ ಪಿ-8753 (42 ವರ್ಷ, ಪುರುಷ) ಜೂ. 24ರ ರಾತ್ರಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ.
ಒಣಕೆಮ್ಮು, ಆಹಾರ ನುಂಗಲು ತೊಂದರೆ, ನಿಶ್ಯಕ್ತಿ ಮತ್ತಿತರ ಲಕ್ಷಣಗಳಿಂದ ಬಳಲುತ್ತಿದ್ದರು ಹಾಗೂ ಪಿ- 6839 ಅವರೊಂದಿಗೆ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಜೂ. 21ರಂದು ಕೋವಿಡ್‌ ದೃಢಪಟ್ಟಿತ್ತು. ಶ್ವಾಸಕೋಶದ ಸಮಸ್ಯೆ ಮೊದಲಾದ ಕಾರಣಗಳಿಂದ ಜೂ. 24ರಂದು ರಾತ್ರಿ 11.15ಕ್ಕೆ ಕೊನೆಯುಸಿರೆಳೆದರು. ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಅಣ್ಣಿಗೇರಿ ತಾಲೂಕಿನ ಸಾಸ್ವಿಹಳ್ಳಿಯಲ್ಲಿ ಜೂ. 25ರಂದು ಜರುಗಿತು. ಜಿಲ್ಲೆಯಲ್ಲಿ ಇದುವರೆಗೆ 4 ಜನ ಕೋವಿಡ್‌ ಪಾಸಿಟಿವ್‌ ರೋಗಿಗಳು ಮರಣ ಹೊಂದಿದ್ದಾರೆ.
 

Latest Videos
Follow Us:
Download App:
  • android
  • ios