ಧಾರವಾಡ(ಜೂ.28): ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೋನಾ ವೈರಸ್‌ ಧಾರವಾಡ ಜನತೆಯ ನಿದ್ದೆ ಕೆಡಿಸಿದೆ. ಶುಕ್ರವಾರವಷ್ಟೆ 30 ಪ್ರಕರಣಗಳಾಗಿದ್ದು, ಶನಿವಾರ ಮತ್ತೆ 19 ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು ಪ್ರಕರಣಗಳ ಸಂಖ್ಯೆ 259ಕ್ಕೆ ಏರಿದೆ. ಇದುವರೆಗೆ 159 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 129 ಪ್ರಕರಣಗಳು ಸಕ್ರಿಯವಾಗಿವೆ. ಐವರು ಮೃತಪಟ್ಟಿದ್ದಾರೆ.

ಪಿ- 11392 (40 ವರ್ಷ, ಪುರುಷ), ಪಿ- 11393 (43 ವರ್ಷ ಪುರುಷ ), ಪಿ-11394 (44 ವರ್ಷ, ಮಹಿಳೆ ), ಪಿ -11395 (14 ವರ್ಷ, ಬಾಲಕ ), ಪಿ -11396 (38 ವರ್ಷ, ಮಹಿಳೆ ), ಪಿ -11397(30 ವರ್ಷ, ಮಹಿಳೆ ), ಪಿ -11398 (56 ವರ್ಷ, ಪುರುಷ ), ಪಿ -11399 (31 ವರ್ಷ, ಪುರುಷ) ಪಿ -11400 (54 ವರ್ಷ, ಮಹಿಳೆ), ಪಿ -11401 (35 ವರ್ಷ, ಪುರುಷ ), ಪಿ -11402 (23 ವರ್ಷ, ಪುರುಷ), ಪಿ -11403 (63 ವರ್ಷ, ಪುರುಷ ), ಪಿ -11404 (66 ವರ್ಷ, ಮಹಿಳೆ ), ಪಿ -11405 (34 ವರ್ಷ ಮಹಿಳೆ), ಪಿ -11406 ( 73 ವರ್ಷ, ಪುರುಷ), ಪಿ -11407 (29 ವರ್ಷ ಪುರುಷ ), ಪಿ -11408 (47 ವರ್ಷ, ಮಹಿಳೆ ), ಪಿ -11409 ( 54 ವರ್ಷ, ಪುರುಷ ), ಪಿ -11410 (65 ವರ್ಷ, ಮಹಿಳೆ).

ಧಾರವಾಡದಲ್ಲಿ ಕೊರೋನಾ ಸ್ಫೋಟ: 30 ಕೋವಿಡ್‌ ಪಾಸಿಟಿವ್‌ ಕೇಸ್‌

ಓರ್ವ ವ್ಯಕ್ತಿ ಮರಣೋತ್ತರ ಕೋವಿಡ್‌ ದೃಢ..

ರಕ್ತವಾಂತಿ ಕಾಯಿಲೆಗೆ ಶಸ್ತ್ರ ಚಿಕಿತ್ಸೆಗಾಗಿ ಹುಬ್ಬಳ್ಳಿ ತಾಲೂಕು ಛಬ್ಬಿಯ 73 ವರ್ಷದ ವ್ಯಕ್ತಿ ಜೂನ್‌ 22ರಂದು ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದರು. 24ರಂದು ಮೃತಪಟ್ಟಿದ್ದರು. ಶಸ್ತ್ರಚಿಕಿತ್ಸೆಗೆ ಮುನ್ನ ಮೂಗು ಮತ್ತು ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಮೃತ ವ್ಯಕ್ತಿಯಲ್ಲಿ ಕೋವಿಡ್‌ ದೃಢಪಟ್ಟಿದೆ.