ಪಡುಬಿದ್ರೆ (ಮೇ.23): ಇಲ್ಲಿನ ಪೊಲೀಸ್‌ ಠಾಣೆಯ ಎಸ್‌ಐ ಸಹಿತ 10 ಮಂದಿ ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ವಾರದ ಹಿಂದೆ ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬದ ಪ್ರಯುಕ್ತ ಔತಣಕೂಟವನ್ನು ಆಚರಿಸಲಾಗಿತ್ತು, ಇದರಿಂದ ಸೋಂಕು ಪರಸ್ಪರ ಹರಡಿರಬಹುದು ಎಂಬ ಸಂಶಯ ಕೂಡ ವ್ಯಕ್ತವಾಗಿದೆ. 

ನ್ಯೂಸ್ ಅವರ್; ಮಕ್ಕಳಲ್ಲಿ ಹೆಚ್ಚಾಗ್ತಿದೆ ಸೋಂಕು, ರಾಯಚೂರಿನಲ್ಲಿ ವೈಟ್ ಫಂಗಸ್ ಮಂಕು ..

ಮೊದಲಿಗೆ ಒಬ್ಬ ಸಿಬ್ಬಂದಿಗೆ ಜ್ವರ ಕಾಣಿಸಿಕೊಂಡಿತ್ತು, ಅವರನ್ನು ಪರೀಕ್ಷಿಸಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು. ನಂತರ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಸ್‌ಐ ಸೇರಿದಂತೆ ಇತರ ಸಹೋದ್ಯೋಗಿಗಳನ್ನು ಪರೀಕ್ಷೆಗೊಳಪಡಿಸಿದಾಗ ಒಟ್ಟು 10 ಮಂದಿಗೆ ಸೋಂಕು ದೃಢಪಟ್ಟಿದೆ. 

ತಕ್ಷಣ ಠಾಣೆಯನ್ನು 24 ಗಂಟೆಗಳ ಕಾಲ ಸೀಲ್‌ಡೌನ್‌ ಮಾಡಿ ಸ್ಯಾನಿಟೈಜೇಶನ್‌ಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿವರೆಗೆ ಠಾಣೆಯ ಕಾರ್ಯಕಲಾಪಗಳನ್ನು ಪಕ್ಕದ ಬೋರ್ಡ್‌ ಶಾಲೆಗೆ ಸ್ಥಳಾಂತರಿಸಲಾಗಿದೆ.