ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದೆದೆ. ಯಾವ ಪಕ್ಷಕ್ಕೂ ಬಹುಮತ ಸಿಗೋದು ಕಷ್ಟ. ಹಾಗಾದರೆ ಜೆಡಿಎಸ್ ಕಿಂಗ್ ಮೇಕರ್ ಆಗುವುದು ಗ್ಯಾರಂಟಿಯೇ?

ಬಹುತೇಕ ಸಮೀಕ್ಷೆಗಳನ್ನು ಗಮನಿಸಿದಾಗ, ಸರಕಾರ ರಚಿಸುವಲ್ಲಿ ಜೆಡಿಎಸ್ ಪ್ರಮುಖ ಪಾತ್ರ ವಹಿಸುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲಿಯೂ ಹಳೇ ಮೈಸೂರು ಭಾಗದಲ್ಲಿ ಶೇಕಡವಾರು ಮತದಾನ ಹೆಚ್ಚಿದ್ದು, ಜೆಡಿಎಸ್ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದು ಸ್ಪಷ್ಟವಾಗಿದೆ. 

ರಾಜ್ಯದಲ್ಲಿ ಶೇ.74ರಷ್ಟು ಮತದಾನ

ಹಾಗಾದರೆ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೆ ಜೆಡಿಎಸ್? ಬಿಜೆಪಿಯೊಂದಿಗೆ ಕೈ ಜೋಡಿಸುವ ಹಂಬಲ ಮಗ ಕುಮಾರಸ್ವಾಮಿಯವರಿಗಿದ್ದರೆ, ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವ ಇರಾದೆ ಎಚ್.ಡಿ.ದೇವೇಗೌಡರಿಗಿದ್ದಂತೆ ಕಾಣಿಸುತ್ತೆ.

ಕಾಂಗ್ರೆಸ್‌ನೊಂದಿಗೆ ಜೆಡಿಎಸ್ ಕೈ ಜೋಡಿಸಿದರೆ, ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನಿರಬಹುದು?