ಕರ್ನಾಟಕ ವೋಟಿಂಗ್: ಶೇ.70ರಷ್ಟು ಮತದಾನ, ಶಾಂತಿಯುತ

Karnataka assembly Election 70 percent voting recorded
Highlights

ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ 2,636 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರು ಅಧಿಕಾರದ ಗದ್ದುಗೆ ಏರಬೇಕೆಂಬುದನ್ನು ತಿಳಿಯಲು ಮಂಗಳವಾದರದವರೆಗೆ ಕಾಯಬೇಕು.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದೆ. 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ 2,636 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಯಾರು ಅಧಿಕಾರದ ಗದ್ದುಗೆ ಏರಬೇಕೆಂಬುದನ್ನು ತಿಳಿಯಲು ಮಂಗಳವಾದರದವರೆಗೆ ಕಾಯಬೇಕು.

ರಾಜ್ಯದ ಹಲವೆಡೆ ಬಿಜೆಪಿ-ಕಾಂಗ್ರೆಸ್‌ಗೆ ನೇರ ಹಣಾಹಣಿ ಇದ್ದರೂ, ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಜೆಡಿಎಸ್ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 

ಈವರೆಗೆ ಬಂದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಶೇ.74ರಷ್ಟು ಮತದಾನವಾಗಿದ್ದು, ಪ್ರತಿ ಬಾರಿಯಂತೆ ಈ ವರ್ಷವೂ ಗ್ರಾಮೀಣ ಭಾಗದಲ್ಲಿ ಮತದಾನ ಪ್ರಮಾಣ ಉತ್ತಮವಾಗಿದೆ. ಶೇ.80ರಷ್ಟು ಮತದಾನದ ಗುರಿ ಇಟ್ಟುಕೊಂಡ ಚುನಾವಣಾ ಆಯೋಗ ಸಾಕಷ್ಟು ಪ್ರಯೋಗಗಳನ್ನು ಮಾಡಿದರೂ, ನಿರೀಕ್ಷಿಸಿದ ಮಟ್ಟದಲ್ಲಿ ಫಲ ನೀಡಿಲ್ಲ.

EXIT POLL

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲೊಟ್ಟೆಗೊಲ್ಲಹಳ್ಳಿಯಲ್ಲಿ ವಿದ್ಯುನ್ಮಾನ ಮತಯಂತ್ರ ಕೈ ಕೊಟ್ಟಿದ್ದರಿಂದ ಸೋಮವಾರ ಮರು ಮತದಾನ ನಡೆಯಲಿದೆ.

ಒಟ್ಟು ಕ್ಷೇತ್ರಗಳು: 222
ಅಭ್ಯರ್ಥಿಗಳು: 2,636
ಪುರುಷ ಅಭ್ಯರ್ಥಿಗಳು: 2,419
ಮಹಿಳಾ ಅಭ್ಯರ್ಥಿಗಳು: 217
ಪಕ್ಷೇತರ ಅಭ್ಯರ್ಥಿಗಳು: 1,146

loader