ಮತ ಚಲಾಯಿಸದ ರಮ್ಯಾ: ಬಿಜೆಪಿ ಸೇರಲು ಮನಸು ಬಂತಾ?

Ramya not turned out to vote for Karnataka Assembly Election social media criticises
Highlights

ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸದಾ ಹರಿಹಾಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮೇ 12 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಬೆಂಗಳೂರು (ಮೇ 12): ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಸದಾ ಹರಿಹಾಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮೇ 12 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜಕೀಯದಲ್ಲಿ ರಮ್ಯಾ ಬದ್ಧತೆಯನ್ನು ವಿಧ ವಿಧವಾಗಿ ಟೀಕಿಸಿದ್ದಾರೆ.

ಮತದಾನದ ಹಿಂದಿನ ದಿನ ರಮ್ಯಾ ಕ್ರಮ ಸಂಖ್ಯೆ 420 ಎಂಬ ಸುದ್ದಿ ಪ್ರಕಟವಾಗಿದ್ದು, ನಿಜವಾಗಿಯೂ ಮತ ಹಾಕದೇ 420ಯಾದರೆಂಬ ಟೀಕೆಗಳು ವ್ಯಕ್ತವಾಗಿವೆ. 'ಬಹುಶಃ ಬಿಜೆಪಿ ಸೇರಲು ಮನಸ್ಸು ಬಂದಿರಬೇಕು,' ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು, 'ರಾಜಕಾರಣಿ ಎನ್ನಲು ನಾಚಿಕೆಯಾಗಲ್ವಾ? ಸುಖಾ ಸುಮ್ಮನೆ ಇನ್ನೊಬ್ಬರ ಮೇಲೆ ಆರೋಪಗಳನ್ನು ಮಾಡುವ ಮುನ್ನ, ಪ್ರಜ್ಞಾವಂತ ನಾಗರಿಕರಾಗಿ ತಮ್ಮ ಕರ್ತವ್ಯ ನಿಭಾಯಿಸಿ,' ಎಂದು ಬುದ್ಧಿ ಹೇಳಿದ್ದಾರೆ.

 

'ಏಕೋ ಏನೋ ರಮ್ಯಾ ಮನಸ್ಸು ಅಲ್ಲೋಲ ಕಲ್ಲೋಲವಾಗಿದೆ, ಕಾಂಗ್ರೆಸ್ ಸೋಲುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತಿರಬೇಕು,' ಎಂದೂ ಮಗದೊಬ್ಬರು ರಮ್ಯಾ ನಡೆಯನ್ನು ವಿರೋಧಿಸಿದ್ದಾರೆ.

'ಮತ ಹಾಕದವರು ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರಾ?,' ಎಂದೊಬ್ಬರು ಕೇಳಿದರೆ, 'ಇನ್ನು ಮುಂದೆ ಯಾವತ್ತೂ ರಾಜಕೀಯದ ಬಗ್ಗೆ ಮಾತನಾಡಬಾರದು, ಆ ಹಕ್ಕು ನಿಮಗಿಲ್ಲ,' ಎಂದು ವ್ಯಂಗ್ಯವಾಡಿದ್ದಾರೆ.

'ರಮ್ಯಕ್ಕೋ ನೀನೇಕೆ ವೋಟು ಹಾಕಿಲ್ಲ ಅಂತ ಕೇಳಿದ್ದಕ್ಕೆ, ನಿಮ್‌ ಮೋದಿ ಏನ್‌ ಬಂದ್‌ ಹಾಕ್ಬಿಟ್ಟಿದ್ದಾರಾ? ಅವರೇ ಹಾಕಿಲ್ಲ, ನಮ್‌ ಕೇಳಕ್‌ ಬಂದ್ಬುಟ್ರು ಅಂದ್ಲಂತೆ' ಎಂದು ಫೇಸ್‌ಬುಕ್‌ನಲ್ಲಿ ಟೀಕಿಸಲಾಗುತ್ತಿದೆ. 

ಪ್ರಚಾರಕ್ಕೂ ಬರಲಿಲ್ಲ

ಚುನಾವಣೆ ಪ್ರಚಾರಕ್ಕೂ ಬಾರದ ರಮ್ಯಾ, ಸಾಮಾಜಿಕ ಜಾಲತಾಣದಲ್ಲಿಯೇ ಮೊಳಕಾಲ್ಮೂರು ಕಾಂಗ್ರೆಸ್ ಅಭ್ಯರ್ಥಿ ನೆರವಿಗೆ ಹಣ ನೀಡುವಂತೆ ಮನವಿ ಮಾಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ರಮ್ಯಾ ಮಂಡ್ಯ ಕಡೆ ಮುಖ ಮಾಡಿಯೇ ಇಲ್ಲ. ಇದರಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ.

loader