Asianet Suvarna News Asianet Suvarna News

ಕರ್ನಾಟಕ ರಾಜಕೀಯ- ಒಂದು ಮನೋಜ್ಞ ಕಥೆ

ಈಗ್ಗೆ ಕೆಲವು ದಿನಗಳ ಹಿಂದೆ ಜೆಡಿಎಸ್ ಕಾರ್ಯಕರ್ತರೊಬ್ಬರಿಗೆ ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಅವರು ಆಹ್ವಾನಿಸಿದ್ದರು. ಆದರೆ, ಅವರು ಖಡಾಖಂಡಿತವಾಗಿ ಒಲ್ಲೆ ಎಂದಿದ್ದರು. ಕಾರ್ಯಕರ್ತನ ನಡೆಗೆ ಕುಮಾರಸ್ವಾಮಿ ಕರೆದು ಸನ್ಮಾನಿಸಿದ್ದರು. ಇದೀಗ ಸಿದ್ದರಾಮಯ್ಯ ಕರೆದ ಕೂಡಲೇ, ಕುಮಾರಸ್ವಾಮಿ ಹೋಗುತ್ತಿದ್ದಾರೆ. ಈ ಸಾಮಾನ್ಯ ಕಾರ್ಯಕರ್ತರ ಸ್ವಾಭಿಮಾನಕ್ಕೆ ಬೆಲೆ ಇಲ್ಲವೇ?

Karnataka politics makes strange bed fellows

ಈಗೊಂದು ಹದಿನೈದು ದಿನ ಕೆಳಗೆ ಚಾಮುಂಡೇಶ್ವರಿಯಲ್ಲಿ ಮರಿಸ್ವಾಮಿ ಅನ್ನೋ JDS ಕಾರ್ಯಕರ್ತನನ್ನು ಸಿದ್ದರಾಮಯ್ಯ 'ನಂಜೊತೆ ಬಾ' ಎಂದು ಕರೆದಿದ್ದರು. ಸ್ವಾಭಿಮಾನಿ ಮರಿಸ್ವಾಮಿ ಕಡಕ್ಕಾಗಿ 'ಆಗಲ್ಲ' ಅಂದಿದ್ರು. ಮಾರನೇ ದಿನ ಕುಮಾರಣ್ಣ ಮರಿಸ್ವಾಮಿಯವರನ್ನು ಹಾಡಿ ಹೊಗಳಿ ಇಂಥಾ ಲಾಯಲ್ ಕಾರ್ಯಕರ್ತರೇ 'ಜೆಡಿಎಸ್ ಶಕ್ತಿ' ಎಂದು, ಸನ್ಮಾನಿಸಿದ್ದರು. ಇದೀಗ ಕುಮಾರಸ್ವಾಮಿಯವರನ್ನು ಸಿದ್ದರಾಮಯ್ಯ ಅವರು, 'ನಂಜೊತೆ ಬಾ' ಎಂದು ಕರೆದಿದ್ದಾರೆ. 

ಕುಮಾರಸ್ವಾಮಿಯವರು 'ಜೆಡಿಎಸ್ ಶಕ್ತಿ' ಏನೆಂಬುದನ್ನೇ ಮರೆತು, ಸಿದ್ದರಾಮಯ್ಯ ಕೈ ಹಿಡಿಯಲು ಮುಂದಾಗಿದ್ದಾರೆ. ಈಗ ಮರಿಸ್ವಾಮಿಯಂಥಾ ಲಾಯಲ್ ಕಾರ್ಯಕರ್ತರ ಕತೆ ?!

ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.?

ಪಕ್ಷೇತರ ಅಭ್ಯರ್ಥಿಯನ್ನು ಹೈಜಾಕ್ ಮಾಡಿದ ಡಿಕೆಶಿ

ಶಾಸಕರ ಖರೀದಿ ಯತ್ನಕ್ಕೆ ರಮ್ಯಾ ಗರಂ

ಅತಿ ಕಡಿಮೆ, ಹೆಚ್ಚು ಮತಗಳ ಅಂತರದಲ್ಲಿ ಗೆದ್ದವರು

ಕಾಂಗ್ರೆಸ್‌ನಲ್ಲಿ ಡಿಸಿಎಂ ಹುದ್ದೆಗೆ ಪೈಪೋಟಿ

Follow Us:
Download App:
  • android
  • ios