ಬೆಂಗಳೂರು (ಮೇ. 16):  ಒಂದು ಕಡೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ  ಸೂತ್ರದ ಬಗ್ಗೆ ಲೆಕ್ಕಾಚಾರ ಹಾಕುತ್ತಿದ್ದರೆ ಇತ್ತ  ಡಿಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಪೈಪೋಟಿ ಶುರುವಾಗಿದೆ.   ಡಿಸಿಎಂ ರೇಸ್’ನಲ್ಲಿ ಪರಮೇಶ್ವರ್, ಡಿ.ಕೆ ಶುವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ.  

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಡಿಸಿಎಂ ಹುದ್ದೆಗೆ  ಜಿ ಪರಮೇಶ್ವರ್,  ಡಿ.ಕೆ ಶಿವಕುಮಾರ್ ವಾದ ಮುಂದಿಟ್ಟಿದ್ದಾರೆ.  ಇಬ್ಬರ ನಡುವೆ ಮಧ್ಯಪ್ರವೇಶಿಸಿದ ಗುಲಾಂ ನಬಿ ಆಜಾದ್ ಈಗ ಆ ವಿಚಾರ ಬೇಡ ಎಂದಿದ್ದಾರೆ.  ಡಿಸಿಎಂ ಹುದ್ದೆಗೆ ಒಮ್ಮತ ಬರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಆಯ್ಕೆಯಾಗಿಲ್ಲ.  ಮತ್ತೆ ಸಭೆ ಸೇರಿ ನಾಯಕನ‌ ಆಯ್ಕೆ ಮಾಡೋಣ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. 

ಇನ್ನೊಂದಡೆ ಡಿಸಿಎಂ ಸ್ಥಾನಕ್ಕೆ  ದಲಿತರ ಬದಲು ಲಿಂಗಾಯತರಿಗೆ ಡಿಸಿಎಂ ಹುದ್ದೆ ನೀಡಿ ಲಿಂಗಾಯತ ವಿರೋಧಿ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಬಹುದು ಎಂದು ವಾದ ಮುಂದಿಟ್ಟಿದ್ದಾರೆ.