ಆನಂದ್ ಸಿಂಗ್ ಕಾಂಗ್ರೆಸಿಗೆ ಗುಡ್ ಬೈ?

Hosakote MLA  Anand Singh Quit Congress May join BJP
Highlights

ನನ್ನನ್ನು ಈ ಬಾರಿ ಕ್ಷಮಿಸಿಬಿಡಿ. ಎರಡು ದಿನಗಳಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್'ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ

ಬೆಂಗಳೂರು(ಮೇ.17): ಬಹುಮತ ಸಾಬೀತು ಪಡಿಸುವ ನಿಟ್ಟಿನಲ್ಲಿ ಬಿಜೆಪಿಯವರು ಆರಂಭಿಕ ಯಶಸ್ಸು ಕಂಡಿದ್ದು  ಕಾಂಗ್ರೆಸ್ ಪಕ್ಷಕ್ಕೆ ಹೊಸಪೇಟೆ ಶಾಸಕ ಆನಂದ್ ಸಿಂಗ್  ಗುಡ್ ಬೈ ಹೇಳಿದ್ದಾರೆ ಎಂದು ಮಾಹಿತಿ ವ್ಯಕ್ತವಾಗುತ್ತಿದೆ.
ಆದರೆ ರಾಜೀನಾಮೆ ಬಗ್ಗೆ ಖಚಿತ ಮಾಹಿತಿ ಇಲ್ಲ. ಹೊಸಪೇಟೆ ಕ್ಷೇತ್ರದಿಂದ ಜಯಗಳಿಸಿರುವ ಆನಂದ್ ಸಿಂಗ್ ಫಲಿತಾಂಶ ಬಂದಾಗಿನಿಂದಲೂ ಕಾಣಿಸಿಕೊಂಡಿರಲಿಲ್ಲ.  ಕಾಂಗ್ರೆಸಿಗೆ ರಾಜೀನಾಮೆ ನೀಡಿದ್ದಾರೆಂದು ಸುದ್ದಿ ಹರಿದಾಡುತ್ತಿದೆ. ನಾನು ಯಾವುದೇ ಪಕ್ಷಕ್ಕೂ ಬೆಂಬಲ ಕೊಡಲ್ಲ. ನನ್ನನ್ನು ಈ ಬಾರಿ ಕ್ಷಮಿಸಿಬಿಡಿ. ಎರಡು ದಿನಗಳಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದೇನೆ ಎಂದು ಡಿಕೆ ಶಿವಕುಮಾರ್'ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

    ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಿಎಸ್'ವೈ

   ಜೂನ್ 11ರಂದು ಜಯನಗರ ಕ್ಷೇತ್ರಕ್ಕೆ ಚುನಾವಣೆ
loader