ರಾಮನಗರಕ್ಕೆ ಅಣ್ಣಾಮಲೈ ವರ್ಗಾವಣೆ : ಈಗಲ್ಟನ್ ಮೇಲೆ ಕಣ್ಣು ?

First Published 17, May 2018, 6:40 PM IST
Annamalai Transferred to Ramanagara as SP
Highlights

ಈ ನಡುವೆ ಎಸ್ಪಿ ಅಣ್ಣಾಮಲೈ ವರ್ಗಾವೆಣೆಗೆ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ಬಹುಮತ ಸಾಬೀತುಪಡಿಸದೇ ವರ್ಗಾವಣೆ ಕೈಹಾಕಿದೆ. ರಾಜಕೀಯ ಕಾರಣಕ್ಕಾಗಿಯೇ ಅಣ್ಣಾಮಲೈ ವರ್ಗಾವಣೆ ಮಾಡಲಾಗಿದೆ. ಯಡಿಯೂರಪ್ಪ ಆಡಳಿತವನ್ನು ನೋಡಿ ಜನತೆ ನಗಲು ಶುರುಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

ಬೆಂಗಳೂರು(ಮೇ.17): ದಕ್ಷ ಅಧಿಕಾರಿ ಎಂದು ಖ್ಯಾತಿ ಗಳಿಸಿರುವ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಅವರನ್ನು ರಾಮನಗರ ಎಸ್ಪಿಯಾಗಿ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದೆ. 
ಬಹುಮತ ಸಾಬೀತುಪಡಿಸುವ ನಿಟ್ಟಿನಲ್ಲಿ ಹಾಗೂ ಮೈತ್ರಿ ಶಾಸಕರನ್ನು ಸೆಳೆಯುವ ಸಲುವಾಗಿ  ಸಿಎಂ ಬಿಎಸ್'ವೈ  ತಮ್ಮ ಆಪ್ತಬಳಗದಲ್ಲಿ ಗುರುತಿಸಿಕೊಂಡವರಿಗೆ ಆಯಕಟ್ಟಿನ ಸ್ಥಳಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಎಸ್ಪಿ ಅಣ್ಣಾಮಲೈ ವರ್ಗಾವೆಣೆಗೆ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಜೆಪಿ ಬಹುಮತ ಸಾಬೀತುಪಡಿಸದೇ ವರ್ಗಾವಣೆ ಕೈಹಾಕಿದೆ. ರಾಜಕೀಯ ಕಾರಣಕ್ಕಾಗಿಯೇ ಅಣ್ಣಾಮಲೈ ವರ್ಗಾವಣೆ ಮಾಡಲಾಗಿದೆ. ಯಡಿಯೂರಪ್ಪ ಆಡಳಿತವನ್ನು ನೋಡಿ ಜನತೆ ನಗಲು ಶುರುಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಕೊಚ್ಚಿಗೆ ಶಿಫ್ಟ್
ಈಗಲ್ಟನ್ ರೆಸಾರ್ಟ್'ನಲ್ಲಿ ತಂಗಿರುವ ಕಾಂಗ್ರೆಸ್ ಶಾಸಕರು ರಾತ್ರಿ 10 ಗಂಟೆಗೆ ವಿಶೇಷ ವಿಮಾನದಲ್ಲಿ ಕಾಂಗ್ರೆಸ್ ಶಾಸಕರು ಕೊಚ್ಚಿಗೆ ಶಿಫ್ಟ್ ಆಗಲಿದ್ದಾರೆ. ರೆಸಾರ್ಟ್'ನಿಂದ 7 ಗಂಟೆಗೆ ಬಸ್'ನಲ್ಲಿ ಹೊರಡಲು ತಯಾರಿ ನಡೆಸಿದ್ದಾರೆ. ಸುಮಾರು 70ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಕೊಚ್ಚಿಗೆ ತೆರಳುವುದಕ್ಕೆ ಸಿದ್ಧತೆ ನಡೆಸಿದ್ದಾರೆ.  ಕೊಚ್ಚಿ ರೆಸಾರ್ಟ್'ಗೆ ಡಿ.ಕೆ.ಶಿವಕುಮಾರ್ ನೇತೃತ್ವ ವಹಿಸಲಿದ್ದಾರೆ.

ರಾಷ್ಟ್ರಕ್ಕೆ ರಾಜ್ಯದಿಂದ ತಲ್ಲಣ:ಸರ್ಕಾರಕ್ಕಾಗಿ ಹಲವು ರಾಜ್ಯಗಳ ಮನವಿ

ಜೂನ್ 11ರಂದು ಜಯನಗರ ಕ್ಷೇತ್ರಕ್ಕೆ ಚುನಾವಣೆ

loader