ಬಿಜೆಪಿಗೆ ಮೂಗುದಾರ ಹಾಕಲು ಮುಂದಾಗಿದೆ ಕಾಂಗ್ರೆಸ್; ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ

Congress thinking to go to Supreme Court
Highlights

ಶತಾಯ ಗತಾಯ ಬಿಜೆಪಿ ಸರ್ಕಾರ ರಚನೆ ತಡೆಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. 3 ಆಯ್ಕೆಗಳ ಕುರಿತು ಕಾಂಗ್ರೆಸ್ ನಾಯಕರ ಟೀಂ ಚಿಂತನೆ ನಡೆಸುತ್ತಿದೆ.  ಬಿಜೆಪಿ ಸರ್ಕಾರ ರಚಿಸಲು ಅವಕಾಶ ನೀಡಿದರೆ ಸುಪ್ರೀಂಕೋರ್ಟ್ ಮೊರೆ 
ಹೋಗುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದೆ. 

ಬೆಂಗಳೂರು (ಮೇ. 16): ಶತಾಯ ಗತಾಯ ಬಿಜೆಪಿ ಸರ್ಕಾರ ರಚನೆ ತಡೆಯಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. 3 ಆಯ್ಕೆಗಳ ಕುರಿತು ಕಾಂಗ್ರೆಸ್ ನಾಯಕರ ಟೀಂ ಚಿಂತನೆ ನಡೆಸುತ್ತಿದೆ.

ಕಾಂಗ್ರೆಸ್ ಪಕ್ಷದ ಮೊದಲ ಆಯ್ಕೆ  ಬಿಜೆಪಿ ಸರ್ಕಾರ ರಚಿಸಲು ಅವಕಾಶ ನೀಡಿದರೆ  ಸುಪ್ರೀಂಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸುತ್ತಿದೆ.  ರಾಜ್ಯಪಾಲರ ನಡೆ ಪ್ರಶ್ನಿಸಿ ಸುಪ್ರೀಂಕೋರ್ಟ್’ಗೆ ಹೋಗುವುದಕ್ಕೆ ಗಂಭೀರ ಚಿಂತನೆ ನಡೆಸುತ್ತಿದೆ.  ಶಾಸಕರನ್ನು ತೆಗೆದುಕೊಂಡು  ಹೋಗಿ ರಾಜ್ಯಪಾಲರ ಮುಂದೆ ಪರೇಡ್ ನಡೆಸುವುದು,  ರಾಷ್ಟ್ರಪತಿ ಮುಂದೆಯೇ ಪರೇಡ್ ನಡೆಸುವ ಬಗ್ಗೆ ಕಾಂಗ್ರೆಸ್ ಆಲೋಚಿಸುತ್ತಿದೆ.  

ಶಾಸಕಾಂಗ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿದ್ದಾರೆ. ಕುದುರೆ ವ್ಯಾಪಾರಕ್ಕೆ ಮೋದಿ ಕುಮ್ಮಕ್ಕು ನೀಡಿದ್ದಾರೆ. ಎಲ್ಲಾ ಕಾಂಗ್ರೆಸ್  ಶಾಸಕರು ಒಗ್ಗಟ್ಟಾಗಿದ್ದೇವೆ. ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ಕೊಡಬೇಕು ಎಂದು  ಸಿದ್ದರಾಮಯ್ಯ  ಹೇಳಿದ್ದಾರೆ. 

ರಾಜಭವನದಲ್ಲಿ ಮುಂದಿನ ನಡೆ ಏನಾಗಬಹುದು ಎಂದು ಕುತೂಹಲ ಮೂಡಿಸಿದೆ. 

 

ಬಿಜೆಪಿಯಿಂದ 15 ಮಂದಿ ಜೆಡಿಎಸ್ ಗೆ ಬರಲು ತಯಾರಿದ್ದಾರೆ ಎಂದ ಕುಮಾರಸ್ವಾಮಿ 

 

ಸಿದ್ದರಾಮಯ್ಯ ವಿರುದ್ಧ ಕೋಳಿವಾಡ ಏಕವಚನದಲ್ಲೇ ವಾಗ್ದಾಳಿ 

 

loader