ಬೆಂಗಳೂರು :  ಮಾಜಿ ಶಾಸಕ ಕೆ.ಬಿ ಕೋಳಿವಾಡ,  ಸಿದ್ದರಾಮಯ್ಯ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸೋಲಿಗೆ ಅವರೇ ಕಾರಣ ಎಂದು  ಹೇಳಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ‌ ನಡೆಸಿ ಮಾತನಾಡಿದ ಅವರು ನಾನು ಅಪ್ಪಟ ಕಾಂಗ್ರೆಸ್ಸಿಗ. ಸ್ಪೀಕರ್ ಆಗಿ ಸರಿಯಾಗಿ ಪಕ್ಷತೀತವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಈ ಚುನಾವಣೆಯಲ್ಲಿ  ಕಾಂಗ್ರೆಸ್ ನ ಈ ಸೋಲಿಗೆ ಸಿದ್ದರಾಮಯ್ಯ ನೇ ಕಾರಣ‌ ಎಂದಿದ್ದಾರೆ.

ಪರಿಸ್ಥಿತಿ ಬದಲಾದಂತೆ ಪಕ್ಷ ಹೈ ಕಮಾಂಡ್ ನ್ನು ಬಳಕೆ ಮಾಡಿಕೊಂಡವನು ಸಿದ್ದರಾಮಯ್ಯ.  ವಿಧಾನಸಭೆಯಲ್ಲಿ ಕಾಂಗ್ರೆಸ್ ನ ನಿರ್ಧಾರಗಳ ಪರವಾಗಿ ನಾನು ನಿಲ್ಲುತ್ತಿದ್ದೆ. ಕಾಂಗ್ರೆಸ್ ‌ನ ರಕ್ತ ಸಿದ್ದರಾಮಯ್ಯ ನಲ್ಲಿ ಇಲ್ಲ.  ಹಿಂದೆ ಪರಮೇಶ್ವರ್ ಸೋಲಿಗೆ ಇವನೇ ಕಾರಣವಾಗಿದ್ದ.  ಕಳೆದ ಬಾರಿ ಇನಮದಾರ್ ಹಾಗೂ ನನ್ನನ್ನು ಸೊಲೀಸೋಕೆ ಇವನು ಪ್ರಯತ್ನ ಪಟ್ಟ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

ಈಗ ಕೆಪಿಜೆಪಿ ಅಭ್ಯರ್ಥಿ ಆರ್ ಶಂಕರ್ ಗೆ ಸಿದ್ದರಾಮಯ್ಯ ಸಪೋರ್ಟ್ ಮಾಡಿದ್ದಾನೆ‌. ಈ ಚುನಾವಣೆಯಲ್ಲಿ ನನ್ನನ್ನೇ ಮರೆತು ಅವನಿಗೆ ಸಪೋರ್ಟ್ ಮಾಡಿ ಗೆಲ್ಲಿಸಿದ.  ಈ ಮನುಷ್ಯನನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳಬಾರದು. 

ಇವನನ್ನು ಕೆಪಿಸಿಸಿ ಅಧ್ಯಕ್ಷನಾಗಿ  ಮಾಡಿದರೆ ಕಾಂಗ್ರೆಸ್ ಉಳಿಯುವುದಿಲ್ಲ. ನಾನು ಈ ಸಂಬಂಧ ಹೈ ಕಮಾಂಡ್ ಗೆ ಮನವಿ ಮಾಡುತ್ತೇವೆ. ಪರಮೇಶ್ವರ್, ಒಕ್ಕಲಿಗನಾಗಿ ಡಿಕೆಶಿ ಅಥವಾ ಲಿಂಗಾಯಿತ ನಾಯಕರನ್ನು ಯಾರನ್ನಾದರೂ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳುವುದಾಗಿ ಕೋಳಿ ವಾಡ ಹೇಳಿದ್ದಾರೆ. 

ಅಲ್ಲದೇ ಸಿದ್ದರಾಮಯ್ಯಗೆ ಜಾತಿ ಮತ್ತು ಅಧಿಕಾರ ಇದ್ದರೆ  ಏನು ಬೇಕಾದರೂ ಮಾಡುತ್ತಾನೆ. ನನ್ನ ಎದುರಲ್ಲಿ ಅವನು ಚೋಟ ಎಂದು ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.