Asianet Suvarna News Asianet Suvarna News

ಬಿಜೆಪಿಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರ ಹೈಜಾಕ್

ಕರ್ನಾಟಕ ರಾಜಕೀಯ ನಾಟಕ ಕ್ಷಣ ಕ್ಷಣವೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನೇ ಬಿಜೆಪಿ ಹೈಜಾಕ್ ಮಾಡುತ್ತಿದೆ.

BJP hijacks congress jds mlas to form new government

ಬೆಂಗಳೂರು: ಕರ್ನಾಟಕ ರಾಜಕೀಯ ನಾಟಕ ಕ್ಷಣ ಕ್ಷಣವೂ ರೋಚಕ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನೇ ಬಿಜೆಪಿ ಹೈಜಾಕ್ ಮಾಡುತ್ತಿದೆ.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚಿಸುವಲ್ಲಿ ವಿಫಲವಾದ ಬಿಜೆಪಿಗೆ ಆಪರೇಷನ್ ಕಮಲಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಈ ಕಾರಣದಿಂದ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಸೇರಿರುವ ಶಾಸಕರನ್ನೇ ಹೈಜಾಕ್ ಮಾಡಲು ಮುಂದಾಗಿದೆ.

ಕರಾವಳಿಯಲ್ಲಿ ಬುಡು ಭದ್ರಕೊಡಿಸಿಕೊಂಡ ಬಿಜೆಪಿ

ಈಗಾಗಲೇ ಉತ್ತರ ಕರ್ನಾಟಕ ಭಾಗದ 16 ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದ್ದು, ರಾಜ್ಯ ರಾಜಕೀಯ ಡ್ರಾಮಾದ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. 

ಅತ್ತ ಜೆಡಿಎಸ್-ಕಾಂಗ್ರೆಸ್ ಒಂದಾಗಿ, ಸರಕಾರ ರಚಿಸಲು ಮುಂದಾಗಿದೆ. ರಾಜ್ಯಪಾಲರ ಬಳಿ ಸರಕಾರ ರಚಿಸಲು ಹಕ್ಕು ಮಂಡನೆಗೆ ಮುಂದಾಗಿದೆ. ಇತ್ತ ಬಿಜೆಪಿಯೂ ತನ್ನದೇ ರೀತಿಯಲ್ಲಿ ಸರಕಾರ ರಚಿಸಲು ಅಗತ್ಯ ಅಡಿಪಾಯ ಹಾಕಿಕೊಳ್ಳುತ್ತಿದೆ.

ಸರಕಾರ ರಚನೆ: ಜೆಡಿಎಸ್‌‌ಗೆ ಕಾಂಗ್ರೆಸ್ ವಿಧಿಸಿದ ಶರತ್ತುಗಳೇನು?

222 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ 104, ಕಾಂಗ್ರೆಸ್‌ಗೆ 78 ಹಾಗೂ ಜೆಡಿಎಸ್ 38 ಸ್ಥಾನಗಳನ್ನು ಗೆದ್ದಿದೆ. ಇತರೆ ಅಭ್ಯರ್ಥಿಗಳು ಎರಡು ಸ್ಥಾನಗಳನ್ನು ಪಡೆದಿದ್ದಾರೆ. ಸರಕಾರ ರಚಿಸಲು 112 ಮ್ಯಾಜಿಕ್ ನಂಬರ್ ಆಗಿದೆ.
 

Follow Us:
Download App:
  • android
  • ios