ಬೆಂಗಳೂರು: 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅದೂ ಕನ್ನಡದಲ್ಲಿಯೇ!

ಇದೇನಿದು? ರಾಹುಲ್ ಗಾಂಧಿಯಲ್ಲಿ ಇಂಥ ಬದಲಾವಣೆ ಆಗಿದೆ. ಕರುನಾಡಲ್ಲಿ ಪ್ರಚಾರ ಕೈಗೊಂಡು, ಇಂಥ ಆಶಯ ಹುಟ್ಟಿ ಕೊಂಡಿದೆಯೇ, ಎಂದು ಆಶ್ಚರ್ಯವಾಗುತ್ತಿದೆಯೇ? ಹೌದು. ಮೇ 9 ರಂದು ಕಂಠೀರವ ಸ್ಟುಡಿಯೋದಲ್ಲಿರುವ ಕರ್ನಾಟಕ ರತ್ನ ಡಾ.ರಾಜ್ ಸಮಾಧಿ ಭೇಟಿದ ರಾಹುಲ್ ಹೀಗೊಂದು ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಐಸ್ ಕ್ರೀಂ ಪಾರ್ಲರ್‌ಗೂ ಭೇಟಿ ನೀಡಿದ್ದ ರಾಹುಲ್, ಐಸಿ ಕ್ರೀಂ ರುಚಿಯನ್ನು ಸವಿದಿದ್ದಾರೆ. ಇದನ್ನೂ ಟ್ವೀಟ್ ಮಾಡಿದ ರಾಹುಲ್, ಟ್ವೀಟ್ ಮಾಡಿದ್ದಾರೆ

 

 

'ಕರ್ನಾಟಕದ ರತ್ನ ಡಾ. ರಾಜ್‍ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪುಷ್ಪಾರ್ಚನೆ ಸಮರ್ಪಿಸಿ ನನ್ನ ಗೌರವ ನಮನವನ್ನು ಸಲ್ಲಿಸಿದೆನು. ಅವರ ಜೀವನದ ಆದರ್ಶಗಳು ಪ್ರತಿಯೊಬ್ಬರಿಗೂ ಸದಾ ಸ್ಪೂರ್ತಿದಾಯಕ,' ಎಂದು ಕನ್ನಡದಲ್ಲಿಯೇ ಟ್ವೀಟ್ ಮಾಡಿದ್ದಾರೆ.

 

 

ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ರಾಜ್ಯ, ರಾಷ್ಟ್ರ ಮುಖಂಡರು ರಾಜ್ಯದ ಎಲ್ಲೆಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಮಂದಿರ, ಮಸೀದಿ, ಮಠಗಳಿಗೆ ಭೇಟಿ ನೀಡಿಯೂ ಮತಯಾಚಿಸಿದ್ದಾರೆ.  ಪ್ರಾದೇಶಿಕ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳನ್ನು ಉಲ್ಲೇಖಿಸಿ, ಭಾಷೆ, ಜಲ ವಿವಾದವನ್ನೂ ಚುನಾವಣಾ ಅಸ್ತ್ರವನ್ನಾಗಿ ಬಳಸಿದ್ದಾರೆ. ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸುವ ಮೂಲಕ ಮೋದಿ, ರಾಹುಲ್ ಕನ್ನಡಿಗರ ಮನ ಗೆಲ್ಲಲು ಯತ್ನಿಸಿದ್ದಾರೆ.