Asianet Suvarna News Asianet Suvarna News

ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರ ಗೈರು, ಬಿಜೆಪಿ ಸಂಪರ್ಕದಲ್ಲಿ ?

ಇನ್ನು ಕೆಲವು ಶಾಸಕರು ಗೈರು ಹಾಜರಿ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ ಶಾಸಕಾಂಗ ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.        

13 Congress MLAs Not attending Party Legislative meeting

ಬೆಂಗಳೂರು(ಮೇ.16): ಕಾಂಗ್ರೆಸ್ ಕರೆದಿರುವ ಶಾಸಕಾಂಗ  ಸಭೆಗೆ 78ರಲ್ಲಿ  13 ಶಾಸಕರು ಗೈರು ಹಾಜರಾಗಿದ್ದು ಮೈತ್ರಿ ಸರ್ಕಾರ ರಚನೆಗೆ ಆತಂಕ ಶುರುವಾಗಿದೆ. 
ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅನಾರೋಗ್ಯದ ನಿಮಿತ್ತ , ಕಂಪ್ಲಿ ಗಣೇಶ್ ಕಾರಣಾಂತರಗಳಿಂದ ಬರಲಾಗಿಲ್ಲ ಎಂದು ತಿಳಿಸಿದ್ದಾರೆ. ಭೀಮಾ ನಾಯ್ಕ್ ಕೆಲ ಹೊತ್ತಿನಲ್ಲಿ ಶಾಸಕ ಸಭೆಗೆ ಹಾಜರಾಗುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕೆಲವು ಶಾಸಕರು ಗೈರು ಹಾಜರಿ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಸ್ಪಷ್ಟನೆ ನೀಡಿದ್ದಾರೆ.
ಜೆಡಿಎಸ್ ಶಾಸಕಾಂಗ ಸಭೆಗೆ ಬಹುತೇಕ ಶಾಸಕರು ಹಾಜರಾಗಿದ್ದು, ಜೆಡಿಎಸ್ ಕಾರ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.        
ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶಾಸಕಾಂಗ ಈಗಾಗಲೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಅವರು ಸರ್ಕಾರ ರಚನೆಗೆ ಒಂದು ವಾರ ಕಾಲಾವಕಾಶ ಅವಕಾಶ ಕೋರಿದ್ದಾರೆ. ಶೀಘ್ರದಲ್ಲಿಯೇ ರಾಜ್ಯ ರಾಜಕಾರಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಅಹಮದ್ ಪಟೇಲ್  ಪ್ರವೇಶಿಸಲಿದ್ದಾರೆ.

ಬೆಳಗಾವಿ 18 : ಬಿಜೆಪಿ 10, ಕಾಂಗ್ರೆಸ್ 8 222 ರಲ್ಲಿ 7 ಸ್ತ್ರೀಯರು ಮಾತ್ರ ಗೆಲುವು
Follow Us:
Download App:
  • android
  • ios