ಮೇ 2025 ರಲ್ಲಿ ಭಾರತದ ನಿರುದ್ಯೋಗ ದರ 5.6% ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಮಹಿಳೆಯರಲ್ಲಿ ಮತ್ತು ಯುವಜನರಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಋತುಮಾನ ಬದಲಾವಣೆ, ಗ್ರಾಮೀಣ ಉದ್ಯೋಗ ಇಳಿಕೆ, ಕೃಷಿ ಚಟುವಟಿಕೆಗಳ ಕುಂಠಿತ ಮತ್ತು ಬೇಸಿಗೆಯಿಂದಾಗಿ ನಿರುದ್ಯೋಗ ಹೆಚ್ಚಾಗಿದೆ.
ಭಾರತದ ನಿರುದ್ಯೋಗ ದರ ಮೇ 2025 ರಲ್ಲಿ 5.6% ಕ್ಕೆ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ ಇದು 5.1% ಆಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಮಹಿಳೆಯರಲ್ಲಿಯೂ ನಿರುದ್ಯೋಗ ಹೆಚ್ಚಾಗಿದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಸಿಕ ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ವರದಿಯ ಪ್ರಕಾರ, ಋತುಮಾನ ಬದಲಾವಣೆ, ಗ್ರಾಮೀಣ ಉದ್ಯೋಗ ಇಳಿಕೆ, ಕೃಷಿ ಚಟುವಟಿಕೆಗಳ ಕುಂಠಿತ ಮತ್ತು ಬೇಸಿಗೆಯಿಂದಾಗಿ ನಿರುದ್ಯೋಗ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಯುವಜನರಲ್ಲಿ ನಿರುದ್ಯೋಗ ಏರಿಕೆ
- 15-29 ವರ್ಷದವರಲ್ಲಿ ನಿರುದ್ಯೋಗ 15% (ಏಪ್ರಿಲ್‌ನಲ್ಲಿ 13.8%)
- ಯುವತಿಯರಲ್ಲಿ 16.3% (ಏಪ್ರಿಲ್‌ನಲ್ಲಿ 14.4%)
- ಯುವಕರಲ್ಲಿ 14.5% (ಏಪ್ರಿಲ್‌ನಲ್ಲಿ 13.6%)
ಮಹಿಳೆಯರ ಮೇಲೆ ಪರಿಣಾಮ, ನಗರಗಳಲ್ಲೂ ಆತಂಕ
- ರಾಷ್ಟ್ರೀಯ ಮಹಿಳಾ ನಿರುದ್ಯೋಗ: 5.8% (ಪುರುಷರ 5.6% ಗಿಂತ ಹೆಚ್ಚು)
- ಗ್ರಾಮೀಣ ಮಹಿಳೆಯರ WPR: 35.2% (ಏಪ್ರಿಲ್‌ನಲ್ಲಿ 36.8%)
- ನಗರ ಮಹಿಳೆಯರ WPR: 23% (ಏಪ್ರಿಲ್‌ನಲ್ಲಿ 23.5%)
- ಮಹಿಳಾ LFPR ಇಳಿಕೆ: ಗ್ರಾಮೀಣ 38.2% ರಿಂದ 36.9%, ನಗರ 25.7% ರಿಂದ 25.3%
ಗ್ರಾಮೀಣ ಭಾರತಕ್ಕೆ ಹೆಚ್ಚು ಪೆಟ್ಟು
- ಗ್ರಾಮೀಣ ನಿರುದ್ಯೋಗ: 13.7% (ಏಪ್ರಿಲ್‌ನಲ್ಲಿ 12.3%)
- ಗ್ರಾಮೀಣ ಯುವಜನರಲ್ಲಿ ನಿರುದ್ಯೋಗ: 10.7% ರಿಂದ 13%
- ನಗರ ನಿರುದ್ಯೋಗ: 17.9% (ಏಪ್ರಿಲ್‌ನಲ್ಲಿ 17.2%)
ಭಾರತದಲ್ಲಿ ಮಳೆಗಾಲದ ರಬಿ ಬೆಳೆ ಮುಗಿದು, ಬೇಸಿಗೆ ಕಾಲದಲ್ಲಿ ಆರಂಭವಾಗುವ ಕೃಷಿ ಕೆಲಸ ಮಾಡಲು ಕಷ್ಟವಾದ್ದರಿಂದ ಗ್ರಾಮೀಣ ಉದ್ಯೋಗ ಇಳಿಕೆಯಾಗಿದೆ. ಸರ್ಕಾರದ ಕೆಲವು ಯೋಜನೆಗಳು ಕೂಡ ಗ್ರಾಮೀಣ ಜನರ ಉದ್ಯೋಗ ತೊಡಗುವಿಕೆ ಪ್ರಮಾಣವನ್ನು ಕುಸಿಯುವಂತೆ ಮಾಡಿವೆ. ಇದರಿಂದಾಗಿ ಭಾರತದಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ (LFPR) ಮತ್ತು ಕಾರ್ಮಿಕರ ಜನಸಂಖ್ಯಾ ಅನುಪಾತ (WPR) ಇಳಿಕೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
ಕಾರ್ಮಿಕ ಪಡೆ ಭಾಗವಹಿಸುವಿಕೆ ದರ (LFPR): 54.8% (ಏಪ್ರಿಲ್‌ನಲ್ಲಿ 55.6%)
- ಗ್ರಾಮೀಣ: 56.9% (ಏಪ್ರಿಲ್‌ನಲ್ಲಿ 58%)
- ನಗರ: 50.4% (ಏಪ್ರಿಲ್‌ನಲ್ಲಿ 50.7%)
ಕಾರ್ಮಿಕರ ಜನಸಂಖ್ಯಾ ಅನುಪಾತ (WPR): 51.7% (ಏಪ್ರಿಲ್‌ನಲ್ಲಿ 52.8%)
- ಗ್ರಾಮೀಣ: 54.1%
- ನಗರ: 46.9%
ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ವ್ಯಾಪ್ತಿ ಮತ್ತು ಮಾಹಿತಿ
ಜನವರಿ 2025 ರಿಂದ ಜಾರಿಯಾಗಿರುವ ಮಾಸಿಕ PLFS ವ್ಯವಸ್ಥೆಯಡಿ ಮೇ 2025 ರಲ್ಲಿ 7,511 ಮಾದರಿ ಘಟಕಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಒಟ್ಟು 89,372 ಕುಟುಂಬಗಳು (ಗ್ರಾಮೀಣ: 49,267, ನಗರ: 40,105) ಸಮೀಕ್ಷೆಯಲ್ಲಿ ಭಾಗವಹಿಸಿವೆ. 3.79 ಲಕ್ಷ ಜನರು (ಗ್ರಾಮೀಣ: 2.16 ಲಕ್ಷ, ನಗರ: 1.63 ಲಕ್ಷ) ಸಮೀಕ್ಷೆಯಲ್ಲಿದ್ದಾರೆ.
ದೀರ್ಘಕಾಲೀನ ಸೂಚನೆಗಳೇ?
ಈ ಮಾಸಿಕ ಅಂಕಿಅಂಶಗಳು ಋತುಮಾನ, ಹವಾಮಾನ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಬದಲಾವಣೆಗಳಿಂದ ಏರಿಳಿತವಾಗಬಹುದು. ಹಾಗಾಗಿ ಇವುಗಳನ್ನು ದೀರ್ಘಕಾಲೀನ ನಿರುದ್ಯೋಗ ಪ್ರವೃತ್ತಿಯ ಅಂತಿಮ ಸೂಚಕಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
