ಐಟಿ ಕಂಪನಿಯ ಎಲ್ಲ ಉದ್ಯೋಗಿಗಳಿಗೂ ಎಣ್ಣೆ ಫ್ರೀ.. ಹ್ಯಾಂಗೋವರ್ ರಜೆ ಸೌಲಭ್ಯವೂ ಉಂಟು..
ಇಲ್ಲಿನ ಐಟಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಉಚಿತ ಮದ್ಯ ಮತ್ತು ಹ್ಯಾಂಗೋವರ್ ರಜೆ ನೀಡುತ್ತಿದೆ. ಹೊಸ ಉದ್ಯೋಗಿಗಳನ್ನು ಆಕರ್ಷಿಸಲು ಮತ್ತು ಕೆಲಸದ ವಾತಾವರಣವನ್ನು ಸುಧಾರಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಸಾಮಾನ್ಯವಾಗಿ ಯಾವುದೇ ಕೆಲಸ ಮಾಡುವ ಸ್ಥಳದಲ್ಲಿ ಮದ್ಯಪಾನ ಸೇವನೆ ಕಡ್ಡಾಯವಾಗಿ ನಿಷೇಧ ಮಾಡಲಾಗಿರುತ್ತದೆ. ಜೊತೆಗೆ, ಕಚೇರಿ ಸ್ಥಳಗಳಲ್ಲಿ ಧೂಮಪಾನವನ್ನೂ ನಿಷೇಧಿಸಲಾಗಿರುತ್ತದೆ. ಆದರೆ, ಇಲ್ಲೊಂದು ಐಟಿ ಕಂಪನಿ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ಎಲ್ಲ ಉದ್ಯೋಗಿಗಳಿಗೂ ಉಚಿತವಾಗಿ ಮದ್ಯ ಸರಬರಾಜು ಮಾಡುತ್ತದೆ. ಜೊತೆಗೆ, ಮದ್ಯ ಸೇವನೆಯಿಂದ ಹ್ಯಾಂಗೋವರ್ ಆದರಲ್ಲಿ ಅವರಿಗೆ ಕೆಲವೊಂದಿಷ್ಟು ಗಂಟೆಗಳು ಅಥವಾ ಪೂರ್ಣ ದಿನದ ಹ್ಯಾಂಗೋವರ್ ರಜೆಯನ್ನೂ ನೀಡಲಾಗುತ್ತಿದೆ.. ಇದೀಗ ಈ ಐಟಿ ಕಂಪನಿ ಭಾರೀ ಸದ್ದು ಮಾಡುತ್ತಿದೆ..
ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಯಾವುದೇ ಕಚೇರಿ ಕೆಲಸದ ಸ್ಥಳಗಳಲ್ಲಿ ಮದ್ಯಪಾನವನ್ನು ಕಟ್ಟುನಿಟ್ಟಾಗಿ ನಿಷೇಧ ಮಾಡಲಾಗಿರುತ್ತದೆ. ಇದಲ್ಲದೆ, ಹೆಚ್ಚಿನ ಸಂಸ್ಥೆಗಳು ನೌಕರರು ಕುಡಿದಿರುವಾಗ ಕಚೇರಿ ಆವರಣಕ್ಕೆ ಪ್ರವೇಶಿಸಲು ಸಹ ಅನುಮತಿಸುವುದಿಲ್ಲ. ಆದರೆ, ಜಪಾನ್‌ನ ಒಂದು ಐಟಿ ಕಂಪನಿ ಇದಕ್ಕೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಇದೇ ವಿಷಯಕ್ಕಾಗಿ ಜಾಗತಿಕ ಮಟ್ಟದಲ್ಲಿಯೂ ಭಾರೀ ಸುದ್ದಿಯಾಗುತ್ತಿದೆ.
ಜಪಾನ್‌ನ ಒಸಾಕಾದಲ್ಲಿರುವ ಒಂದು ಸಣ್ಣ ಟೆಕ್ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೆಲಸ ಮಾಡುವಬ ಸ್ಥಳಕ್ಕೆ ನೀರನ್ನು ಸರಬರಾಜು ಮಾಡುವಂತೆ ಮದ್ಯ ಪೂರೈಸಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಟ್ಟದ ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಟ್ರಸ್ಟ್ ರಿಂಗ್ ಕಂಪನಿ ಲಿ. ಸಂಸ್ಥೆಯು ಕಂಪನಿಯು ತನ್ನ ಎಲ್ಲ ನೌಕರರಿಗೆ ಆಲ್ಕೋಹಾಲ್ ಉಚಿತ ಪೂರೈಕೆ ಮತ್ತು ಹ್ಯಾಂಗೊವರ್ ರಜೆಯನ್ನು ಒದಗಿಸುತ್ತದೆ. ಇದು ಹೊಸ ಉದ್ಯೋಗಿಗಳನ್ನು ತನ್ನ ಕಂಪನಿಗೆ ಸೆಳೆಯಲು ಈ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: ಕೆಲಸಕ್ಕೆ ಸೇರಿದ 10 ನಿಮಿಷದಲ್ಲಿ ರಾಜೀನಾಮೆ ಕೊಟ್ಟು ಹೊರಬಂದ ಯುವತಿ; ಕಾರಣ ಹೀಗಿದೆ..
ಸಾಮಾನ್ಯವಾಗಿ ಎಲ್ಲಾ ದೊಡ್ಡ ದೊಡ್ಡ ಐಟಿ ಕಂಪನಿಗಳು ಉತ್ತಮ ಸಂಬಳ ಮತ್ತು ಸೌಲಭ್ಯಗಳನ್ನು ನೀಡುವ ಮೂಲಕ ಬುದ್ಧಿವಂತ ಹೊಸ ಉದ್ಯೋಗಿಗಳನ್ನು ಆಕರ್ಷಿಸುತ್ತವೆ. ಅದೇ ರೀತಿ ಬುದ್ಧಿವಂತ ಹೊಸ ಉದ್ಯೋಗಿಗಳನ್ನು ತನ್ನತ್ತ ಸೆಳೆಯುವ ಜೊತೆಗೆ ಟ್ರಸ್ಟ್ ರಿಂಗ್ ಕಂಪನಿ ಲಿಮಿಟೆಡ್ ಭಿನ್ನವಾದ ಮಾರ್ಗವನ್ನು ತೆಗೆದುಕೊಂಡಿದೆ. ಎಲ್ಲರಿಗೂ ದೊಡ್ಡ ಸಂಬಳ ಅಥವಾ ಸವಲತ್ತುಗಳನ್ನು ನೀಡಲು ಸಾಧ್ಯವಾಗದ ಕಾರಣ, ಕಂಪನಿಯು ಉದ್ಯೋಗಿಗಳಿಗೆ ಉಚಿತವಾಗಿ ಮದ್ಯವನ್ನು ಒದಗಿಸಲು ನಿರ್ಧರಿಸಿದೆ.
ಈ ಐಟಿ ಕಂಪನಿಯ ಸಿಇಒ ಸ್ವತಃ ಕಂಪನಿಯನ್ನು ಉದ್ಯೋಗಿಗಳಿಗೆ, ವಿಶೇಷವಾಗಿ ಹೊಸದಾಗಿ ಆಗಮಿಸಿದ ಉದ್ಯೋಗಿಗಳಿಗೆ ಈ ಆಫರ್ ನೀಡುತ್ತಿದ್ದಾರೆ. ಮುಂದುವರೆದು ಉದ್ಯೋಗಿಗಳಲ್ಲಿ ಸ್ನೇಹಪರ ವಾತಾವರಣವನ್ನು ಬೆಳೆಸಲು ಮತ್ತು ಒಟ್ಟಾರೆ ಕೆಲಸವನ್ನು ಸುಧಾರಿಸಲು ಇದನ್ನು ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಒಂದು ವೇಳೆ ಉದ್ಯೋಗಿಗಳು ತುಂಬಾ ಕುಡಿದು ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಆಗ 'ಹ್ಯಾಂಗೋವರ್ ರಜೆ' ಕಾರ್ಯರೂಪಕ್ಕೆ ಬರುತ್ತದೆ. ಕುಡಿತದ ಅಮಲಿನಲ್ಲಿ ಕೆಲಸ ಮಾಡಲು ಸಾಧ್ಯವಾಗದ ಉದ್ಯೋಗಿಗಳಿಗೆ ಕಂಪನಿಯು 2-3 ಗಂಟೆಗಳ 'ಹ್ಯಾಂಗೋವರ್ ರಜೆ' ಅಥವಾ ದಿನದ ರಜೆಯನ್ನೂ ಸಹ ಅನುಮತಿಸುತ್ತದೆ.
ಇದನ್ನೂ ಓದಿ: ಮದುವೆಯಾಗದೆ ಸಿಂಗಲ್ಲಾಗಿರೋ ಪುರುಷರಿಗೆ ಪ್ರವೇಶ ನಿಷೇಧಿಸಿದ ಮೃಗಾಲಯ! ಕಾರಣವೇನು?
ಇನ್ನು ಈ ಸುದ್ದಿ ತಿಳಿದ ತಕ್ಷಣ ಭಾರತ ಸೇರಿದಂತೆ ವಿವಿಧ ದೇಶಗಳ ಅನೇಕ ಯುವಕರು ಜಪಾನ್‌ಗೆ ಹೋಗಬೇಕೇ ಎಂದು ಕೇಳುತ್ತಿದ್ದಾರೆ. ಜೊತೆಗೆ, ಅಂತಹ ಒಂದು ಕಂಪನಿ ಜಗತ್ತಿನಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವೇ ಎಂದು ಕೆಲವರು ಅಪನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ, ನೀವು ಅದನ್ನು ಉಚಿತವಾಗಿ ಪಡೆದರೂ ಅಥವಾ ಹಣ ಪಾವತಿಸಿ ಪಡೆದರೂ ಮದ್ಯವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ನೆನಪಿಡಿ.