ಕೆಲಸಕ್ಕೆ ಸೇರಿದ 10 ನಿಮಿಷದಲ್ಲಿ ರಾಜೀನಾಮೆ ಕೊಟ್ಟು ಹೊರಬಂದ ಯುವತಿ; ಕಾರಣ ಹೀಗಿದೆ..
100ಕ್ಕೂ ಹೆಚ್ಚು ಅರ್ಜಿಗಳ ನಂತರ ಕೆಲಸ ಪಡೆದ ಯುವತಿ ಕೇವಲ 10 ನಿಮಿಷಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಆಕೆಗೆ ಸಿಕ್ಕಿದ್ದ ಕೆಲಸವಾದರೂ ಏನು? ಆಕೆ ಕೆಲಸ ಬಿಟ್ಟಿದ್ದೇಕೆ ಎಂಬ ಮಾಹಿತಿ ಇಲ್ಲಿದೆ ನೋಡಿ..

ಇಲ್ಲೊಬ್ಬ ಯುವತಿ ದುಡಿದು ಸ್ವಂತ ಕಾಲಮೇಲೆ ನಿಂತುಕೊಳ್ಳಬೇಕೆಂದು ಕೆಲಸಕ್ಕಾಗಿ ಸುಮಾರು 100ಕ್ಕೂ ಅಧಿಕ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾಳೆ. ನೂರು ಅರ್ಜಿಗಳ ಸಲ್ಲಿಕೆ ನಂತರ ಕೊನೆಗೂ ಒಂದು ಉದ್ಯೋಗ ಸಿಕ್ಕಿತು. ಆದರೆ, ಈ ಕೆಲಸಕ್ಕೆ ಸೇರಿ ಕೇವಲ 10 ನಿಮಿಷದಲ್ಲಿ ಯುವತಿ ಕೆಲಸಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿ ಅಲ್ಲಿಂದ ಹೊರಗೆ ಹೋಗಿದ್ದಾಳೆ.
ಹೌದು, ನೂರಾರು ಉದ್ಯೋಗ ಅರ್ಜಿಗಳನ್ನು ಸಲ್ಲಿಸಿ, ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿ ನಿರಾಶೆಗೊಂಡಿದ್ದ ಸೋಫಿ ವಾರ್ಡ್ ಎಂಬ ಯುವತಿಗೆ ಕೊನೆಗೂ ಒಂದು ಕೆಲಸ ಸಿಕ್ಕಿತು. ಆದರೆ, ಆ ಕೆಲಸದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ ಎಂದು ಯುವತಿ ಹೇಳಿಕೊಂಡಿದ್ದಾರೆ. news.com.au ವರದಿ ಮಾಡಿರುವ ಪ್ರಕಾರ, 32 ವರ್ಷದ ಯುವತಿಗೆ ಮಕ್ಕಳ ಆರೈಕೆ ಕೇಂದ್ರದಲ್ಲಿ ಕೆಲಸ ಸಿಕ್ಕಿತ್ತು. ಮಕ್ಕಳ ಅಳುವಿಕೆಯನ್ನು ಸಹಿಸಲಾಗದ ಕಾರಣ ಕೆಲಸವನ್ನು ಕೇವಲ 10 ನಿಮಿಷದಲ್ಲಿ ತೊರೆದಿದ್ದಾಗಿ ಯುವತಿ ತಿಳಿಸಿದ್ದಾರೆ.
ಯುಕೆಯ ಸೋಫಿ ವಾರ್ಡ್ ತಮ್ಮ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ದಿನಸಿ ಅಂಗಡಿಗಳಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಟ್ಟೆ ಅಂಗಡಿ, ಹೋಟೆಲ್ ಸೇರಿ ಹಲವಾರು ಚಿಲ್ಲರೆ ಅಂಗಡಿಗಳಿಗೂ ತಮ್ಮ ರೆಸ್ಯೂಮ್ ಅನ್ನು ನೀಡಿದ್ದರೂ ಕೆಲಸ ಸಿಕ್ಕಿರಲಿಲ್ಲ. ಹಲವು ಕೆಲಸಗಳಿಗೆ ಸಂದರ್ಶನಕ್ಕೆ ಹೋದರೂ, ಮೊದಲ ಸುತ್ತಿನ ನಂತರ ಕರೆ ಮಾಡುವುದಾಗಿ ಹೇಳಿ ಮನೆಗೆ ಕಳುಹಿಸುತ್ತಾರೆ. ನಾನು ಎಷ್ಟೇ ಆತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ ಕೆಲಸ ಸಿಗುವ ಭರವಸೆಯಿಂದ ಉದ್ಯೋಗದಾತರಿಂದ ಕರೆ ನಿರೀಕ್ಷೆ ಮಾಡುತ್ತಿದ್ದೆ. ಆದರೆ, ಯಾರೂ ಕರೆ ಮಾಡಿರಲಿಲ್ಲ ಎಂದು ಸೋಫಿ ವಾರ್ಡ್ ಹೇಳಿದ್ದಾರೆ.
ಇದನ್ನೂ ಓದಿ: ಜನ್ಮತಾಳಿದ ಬಳಿಕ ಮತ್ತೆ ಎಂದಾದರೂ 'ಅದನ್ನ' ನೋಡಿದ್ದೀಯಾ ಎಂದಿದ್ದ ಅಪೂರ್ವ ಮಖೀಜಾಗೂ ಪೊಲೀಸ್ ಕ್ಲಾಸ್!
ಹೀಗಾಗಿ, ಕೊನೆಗೆ ಮಕ್ಕಳ ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಲಾಯಿತು. ಸಂದರ್ಶನದ ನಂತರ ನಿಗದಿ ಮಾಡಿದಂತೆ ಮೊದಲ ದಿನ ಕೆಲಸಕ್ಕೆ ಹೋಗಿ ಮಕ್ಕಳ ಆರೈಕೆಯನ್ನು ಆರಂಭಿಸಿದೆ. ಆದರೆ, ಮಕ್ಕಳು ಕೂಗುತ್ತಿರುವುದನ್ನು ಕೇಳಿದಾಗ 10 ನಿಮಿಷಗಳಿಗಿಂತ ಹೆಚ್ಚು ಕಾಲ ಅಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ತಕ್ಷಣವೇ ಅಲ್ಲಿಂದ ಕೆಲಸ ಬಿಟ್ಟು ಹೊರಟೆ ಎಂದು ಯುವತಿ ಹೇಳಿದ್ದಾರೆ. ಇನ್ನು ಊಟಕ್ಕೆ ತೆಗೆದುಕೊಂಡು ಹೋಗಿದ್ದ ಡಬ್ಬಿಯನ್ನು ಕೂಡ ತೆಗೆದುಕೊಳ್ಳದೇ ವಾಪಸ್ ಮನೆಯ ಕಡೆಗೆ ಹೊರಟುಬಿಟ್ಟೆ ಎಂದು ಯುವತಿ ಹೇಳಿಕೊಂಡಿದ್ದಾರೆ.
ಇನ್ನು ಯುವತಿಯ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಆರೈಕೆ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೆ ವಿಶೇಷ ಕೌಶಲ್ಯ ಬೇಕು ಎಂದು ಹಲವರು ಸಲಹೆಯನ್ನು ನೀಡಿದ್ದಾರೆ. ಜೊತೆಗೆ, ಯುವತಿಗೆ ಅದು ಸಾಧ್ಯವಾಗದಿದ್ದರೆ ಕೆಲಸ ಬಿಟ್ಟಿದ್ದು ಒಳ್ಳೆಯದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಭಾರತವೇ ವಿರೋಧಿಸುತ್ತಿರುವ ರಣವೀರ್ ಅಲ್ಲಾಬಾದಿಯಾಗೆ ಸಪೋರ್ಟ್ ಮಾಡಿದ ನಟಿ ಊರ್ಫಿ ಜಾವೇದ್