ಸರ್ಕಾರಿ ಕೆಲಸ ಹುಡುಕುತ್ತಿರುವಿರಾ? 10ನೇ ಕ್ಲಾಸ್ ಪಾಸಾದ್ರೂ ರೈಲ್ವೆಯಲ್ಲಿ 1007 ಉದ್ಯೋಗ-ಡಿಟೇಲ್ಸ್ ಇಲ್ಲಿದೆ..
ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ಇಲಾಖೆ ಗುಡ್ನ್ಯೂಸ್ ಕೊಟ್ಟಿದೆ. 1007 ಹುದ್ದೆಗಳಿಗೆ ಎಸ್ಎಸ್ಎಸ್ಸಿ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆಗಳಿಗೆ ಅರ್ಜಿ ಕರೆದಿದೆ. ಡಿಟೇಲ್ಸ್ ಇಲ್ಲಿದೆ...

ನೀವು 10 ನೇ ತರಗತಿ ಪಾಸಾಗಿದ್ದು, ಸರ್ಕಾರಿ ಉದ್ಯೋಗ ಹುಡುಕುತ್ತಿದ್ದರೆ, ಇದೀಗ ಕೇಂದ್ರ ಸರ್ಕಾರದ ರೈಲ್ವೆಯಲ್ಲಿ ಉತ್ತಮ ಅವಕಾಶವಿದೆ. ಆಗ್ನೇಯ ಮಧ್ಯ ರೈಲ್ವೆ (SECR) ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದ್ದು, ಅರ್ಜಿ ಕರೆದಿದೆ. ರೈಲ್ವೆಯ ಈ ನೇಮಕಾತಿಯ ಮೂಲಕ ಒಟ್ಟು 1007 ಹುದ್ದೆಗಳನ್ನು ಹೊಂದಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಮೇ 4 ರಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದರ ಸಂಪೂರ್ಣ ವಿವರವನ್ನು ಈ ಕೆಳಗೆ ನೀಡಲಾಗಿದೆ.
ಮಹಾರಾಷ್ಟ್ರದ ನಾಗ್ಪುರ ಮತ್ತು ವರ್ಕ್‌ಶಾಪ್ ಮೋತಿ ಬಾಗ್ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು, ಯಾವ ರಾಜ್ಯದವರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ. ನಾಗ್ಪುರ ವಿಭಾಗದಲ್ಲಿ 919 ಹುದ್ದೆಗಳು ಹಾಗೂ ವರ್ಕ್‌ಶಾಪ್ ಮೋತಿ ಬಾಗ್: 88 ಹುದ್ದೆಗಳು ಇವೆ.
ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಅರ್ಹತೆ
- ರೈಲ್ವೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ ಕನಿಷ್ಠ 50% ಅಂಕಗಳೊಂದಿಗೆ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ವಯಸ್ಸಿನ ಮಿತಿ 15 ವರ್ಷದಿಂದ 24 ವರ್ಷಗಳ ನಡುವೆ ಇರಬೇಕು.
- ರೈಲ್ವೆಯ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದು ಅಭ್ಯರ್ಥಿಗಳ ಮೆಟ್ರಿಕ್ಯುಲೇಷನ್ ಮತ್ತು ಐಟಿಐ ಅಂಕಗಳ ಶೇಕಡಾವಾರು ಪ್ರಮಾಣವನ್ನು ಆಧರಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು SECR ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಫಾರಿನ್ ಕೆಲಸದ ಕನಸಿದ್ಯಾ? ಹಾಗಿದ್ರೆ ವಿದೇಶದ ನೆಲದಲ್ಲಿ ಮೋಸದ ಸುಳಿಗೆ ಸಿಕ್ಕ ಸಹಸ್ರಾರು ಈ ಯುವಕರ ಕಥೆ ಕೇಳಿ...
ವಿಶೇಷ ಸೂಚನೆ;
-ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅಪ್ಲೋಡ್ ಮಾಡಲು ಮೊದಲೇ ಸಿದ್ಧಪಡಿಸಿಟ್ಟುಕೊಳ್ಳಿ- ಶೈಕ್ಷಣಿಕ ಅರ್ಹತೆ, ID ಪುರಾವೆ, ವಿಳಾಸ ವಿವರಗಳು, ಮೂಲ ವಿವರಗಳು.
-ನೇಮಕಾತಿ ಫಾರ್ಮ್‌ಗೆ ಸಂಬಂಧಿಸಿದ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ - ಫೋಟೋ, ಚಿಹ್ನೆ, ID ಪುರಾವೆ, ಇತ್ಯಾದಿ.
- ಅರ್ಜಿ ನಮೂನೆಯನ್ನು ಸಲ್ಲಿಸುವ ಮೊದಲು ಎಲ್ಲಾ ಕಾಲಮ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
- ಅಂತಿಮವಾಗಿ ಸಲ್ಲಿಸಿದ ಫಾರ್ಮ್‌ನ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ: https://www.apprenticeshipindia.gov.in/candidate-login
ಮೀಸಲಾತಿ ಕುರಿತು ಅಧಿಸೂಚನೆಯನ್ನು ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ:
https://doc.sarkariresults.org.in/Railway_SECR_Apprentice_Nagpur_Notice_Apr2025.pdf
1.50 ಲಕ್ಷ ಐಟಿ ಉದ್ಯೋಗಿಗಳ ಕೆಲಸಕ್ಕೆ ಕತ್ತರಿ, ಬೆಂಗಳೂರಲ್ಲೇ 50 ಸಾವಿರ! ಯಾವ ಕಂಪೆನಿ ಎಷ್ಟು? ಡಿಟೇಲ್ಸ್ ಇಲ್ಲಿದೆ