ಐಐಟಿ/ಐಐಎಂ ಪದವಿ ಇಲ್ಲದೆಯೂ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಕೇವಲ ಆರು ವರ್ಷಗಳಲ್ಲಿ ತಮ್ಮ ವೇತನವನ್ನು 6 ಲಕ್ಷದಿಂದ 68 ಲಕ್ಷಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಒಂದು ವರ್ಷದ ವಿರಾಮದ ನಂತರವೂ, ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉನ್ನತ ಹುದ್ದೆಗೇರಿದ ಅವರ ಯಶೋಗಾಥೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದೆ.

ವೇತನ 6 ಲಕ್ಷದಿಂದ 68 ಲಕ್ಷಕ್ಕೆ ಏರಿಕೆಯಾಗಿದ್ದು ಹೇಗೆ?

ಪ್ರಸ್ತುತ ಜಾಗತಿಕ ವಾತಾವರಣ, ಬೆಳೆಯುತ್ತಿರುವ ಎಐ ತಂತ್ರಜ್ಞಾನದಿಂದಾಗಿ ಇಂದು ಸ್ಥಿರವಾದ ಉದ್ಯೋಗ ಇರೋದೇ ಒಂದು ಒಂದು ದೊಡ್ಡ ಸಾಹಸವಾಗಿದೆ. ಅನೇಕರು ಹಠಾತ್ ಉದ್ಯೋಗ ಕಡಿತದಿಂದ ಆರ್ಥಿಕ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಉದ್ಯೋಗದ ಅನಿಶ್ಚಿತತೆಯು ಉದ್ಯೋಗಿಗಳನ್ನು ಚಿಂತೆಗೀಡು ಮಾಡುತ್ತಿರುವ ಈ ಸಮಯದಲ್ಲಿ ಉದ್ಯೋಗ ಅರ್ಹತೆಯ ಜೊತೆ ಸಾಕಷ್ಟು ಸ್ಕಿಲ್‌ಗಳನ್ನು ಹೊಂದಿರುವುದು ಬಹಳ ಅಗತ್ಯವಾಗಿದೆ. ಐಐಟಿ ಐಐಎಂನಲ್ಲಿ ಓದಿದವರಿಗೆ ಮಾತ್ರ ಈ ಸಂದರ್ಭದಲ್ಲೂ ಕೆಲಸವಿರುತ್ತದೆ ಎಂಬ ನಂಬಿಕೆ ಅನೇಕರಿಗಿದೆ. ಆದರೆ ಐಐಟಿ ಐಐಎಂನಲ್ಲಿ ಯಾವುದೇ ಪದವಿ ಪಡೆಯದೆಯೂ ಕೇವಲ ಆರು ವರ್ಷದಲ್ಲಿ ತನ್ನ ವೇತನ 6 ಲಕ್ಷದಿಂದ 68 ಲಕ್ಷವಾಗಿ ಬದಲಾಗಿರುವ ಬಗ್ಗೆ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಸೋಶಿಯಲ್ ಮೀಡಿಯಾ ರೆಡಿಟ್‌ನಲ್ಲಿ ಹೇಳಿಕೊಂಡಿದ್ದು, ಅವರ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

ಕೇವಲ ಆರು ವರ್ಷಗಳಲ್ಲಿ ತನ್ನ ವಾರ್ಷಿಕ ವೇತನ 6 ಲಕ್ಷ ರೂ.ಗಳಿಂದ 68 ಲಕ್ಷ ರೂ.ಗಳಿಗೆ ಹೇಗೆ ಏರಿತು ಎಂಬುದನ್ನು ವಿವರಿಸುವ ಮೂಲಕ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಯ ಪೋಸ್ಟ್ ಭಾರಿ ವೈರಲ್

ರೆಡ್ಡಿಟ್‌ನ ಡೆವಲಪರ್ಸ್ ಇಂಡಿಯಾ ಫೋರಂನಲ್ಲಿ ಹಂಚಿಕೊಳ್ಳಲಾದ ಈ ಪೋಸ್ಟ್, ಸ್ಥಿರ ಬೆಳವಣಿಗೆ, ವೃತ್ತಿಜೀವನದ ವಿರಾಮ ಮತ್ತು ಹೆಚ್ಚು ಸ್ಪರ್ಧಾತ್ಮಕ ತಂತ್ರಜ್ಞಾನ ಉದ್ಯಮದಲ್ಲಿ ಬಲವಾದ ಪುನರಾಗಮನವನ್ನು ಎತ್ತಿ ತೋರಿಸುತ್ತದೆ. ಮಧ್ಯಮ ಹಂತದ ಎಂಜಿನಿಯರಿಂಗ್ ಕಾಲೇಜಿನಿಂದ ಪದವಿ ಪಡೆದ ನಂತರ ಈ ಸಾಫ್ಟ್‌ವೇರ್ ಎಂಜಿನಿಯರ್ 2019 ರಲ್ಲಿ ತಮ್ಮ ವೃತ್ತಿಪ ಜೀವನ ಪ್ರಾರಂಭಿಸಿದರು. ಸೇವಾ ಆಧಾರಿತ ಕಂಪನಿಯಲ್ಲಿ ಅವರ ಮೊದಲ ಕೆಲಸಕ್ಕೆ ವಾರ್ಷಿಕ 6 ಲಕ್ಷ ರೂ.ವೇತನವಿತ್ತು. ಅವರ ಆರಂಭದ ಉದ್ಯೋಗವು ಸಾಧಾರಣ ಉದ್ಯೋಗ ಎನಿಸಿದರೂ ಅವರು ಪ್ರಾಯೋಗಿಕ ಅನುಭವವನ್ನು ಗಳಿಸುವ ಮತ್ತು ತಮ್ಮ ತಾಂತ್ರಿಕ ಅಡಿಪಾಯವನ್ನು ಬಲಪಡಿಸುವತ್ತ ಗಮನಹರಿಸಿದರು. ಆದರೆ ಸೆಪ್ಟೆಂಬರ್ 2020 ರಲ್ಲಿ ಅವರು ಉತ್ಪನ್ನ ಆಧಾರಿತ ಸಂಸ್ಥೆಗೆ ಕೆಲಸ ಬದಲಾಯಿಸಿದಾಗ ಅವರ ಬದುಕಿನಲ್ಲಿ ಒಂದು ಪ್ರಮುಖ ತಿರುವು ಸಿಕ್ಕಿತು. ಈ ಉದ್ಯೋಗ ಅವರ ವಾರ್ಷಿಕ ಗಳಿಕೆಯನ್ನು ಗಮನಾರ್ಹವಾಗಿ 13 ಲಕ್ಷ ರೂ.ಗಳಿಗೆ ಹೆಚ್ಚಿಸಿತು. ಅಲ್ಲದೇ ಭವಿಷ್ಯದ ಬೆಳವಣಿಗೆಗೆ ವೇದಿಕೆ ಸಿದ್ಧಪಡಿಸಿತು.

ಅವರ ಸ್ಥಿರ ಕಾರ್ಯಕ್ಷಮತೆ ಮತ್ತು ಕೌಶಲ್ಯ ಅಭಿವೃದ್ಧಿಯು 2022ರ ಆರಂಭದಲ್ಲಿ ಫಲ ನೀಡಿದ್ದು, ಅವರು ಉನ್ನತ ಎಂಜಿನಿಯರಿಂಗ್ ಹುದ್ದೆಗೆ ಬಡ್ತಿ ಪಡೆದಾಗ ಅವರ ವಾರ್ಷಿಕ ವೇತನ 23 ಲಕ್ಷ ರೂ.ಗೆ ಏರಿಕೆಯಾಯ್ತು. ವೃತ್ತಿ ಜೀವನ ಮೇಲ್ಮುಖವಾಗಿ ಸಾಗುತ್ತಿರುವಾಗಲೇ ಅವರು ವೈಯಕ್ತಿಕ ಕೌಟುಂಬಿಕ ಕಾರಣದಿಂದಾಗಿ ಡಿಸೆಂಬರ್ 2022ರಲ್ಲಿ ಅವರು ಉದ್ಯೋಗ ತೊರೆದಿದ್ದರಿಂದ ಅವರ ಉದ್ಯೋಗಕ್ಕೆ ಬ್ರೇಕ್ ಬಿದ್ದಿತ್ತು. ಅವು ಉದ್ಯೋಗದಿಂದ ವರ್ಷದ ಕಾಲ ವಿರಾಮ ತೆಗೆದುಕೊಳ್ಳುವಂತಾಗಿತ್ತು. ಇದರಿಂದ ಮತ್ತೆ ಉದ್ಯೋಗ ಪಡೆಯುವುದು ಸವಾಲಿನ ವಿಚಾರವಾಗಿತ್ತು.

ಇದನ್ನೂ ಓದಿ: ಬೋನಿಗೆ ಬಿದ್ದ ಹೆಣ್ಣು ಹುಲಿ ಜೊತೆ ಸೆಲ್ಫಿಗೆ ಮುಗಿಬಿದ್ದ ಗಂಡುಗಲಿಗಳು

ಅದರೂ ವಿಚಲಿತರಾಗದೇ ಮತ್ತೆ ಉದ್ಯೋಗ ಕ್ಷೇತ್ರಕ್ಕೆ ಕಾಲಿರಿಸುವ ಕಠಿಣ ಬಯಕೆಯೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ನಾಲ್ಕು ತಿಂಗಳುಗಳಲ್ಲಿ, ಅವರು ಡೇಟಾ ರಚನೆಗಳು, ಅಲ್ಗಾರಿದಮ್‌ಗಳು ಮತ್ತು ಸಿಸ್ಟಮ್ ವಿನ್ಯಾಸದಂತಹ ಪ್ರಮುಖ ತಾಂತ್ರಿಕ ಕ್ಷೇತ್ರಗಳನ್ನು ಪುನಃ ಪರಿಶೀಲಿಸಿದರು. ಅವರ ಶಿಸ್ತಿ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಅಂತಿಮವಾಗಿ 2024 ರ ಆರಂಭದಲ್ಲಿ ಅವರಿಗೆ ಹೊಸ ಉದ್ಯೋಗ ಸಿಕ್ತು ಬರೀ ಇಷ್ಟೇ ಅಲ್ಲ ಅವರಿಗೆ ವಾರ್ಷಿಕವಾಗಿ 48 ಲಕ್ಷ ರೂ.ಗಳ ಗಣನೀಯ ಪ್ಯಾಕೇಜ್ ಕೂಡ ಈ ಉದ್ಯೋಗದಿಂದ ಸಿಕ್ಕಿದೆ.

ಇದನ್ನೂ ಓದಿ: ನುಡಿದಂತೆ ನಡೆದ ಅಮಿತ್ ಷಾ: 10 ವರ್ಷದಲ್ಲಿ 10,000 ನಕ್ಸಲರು ಶರಣು: ದೇಶ ನಕ್ಸಲ್ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆ

ಮಾರ್ಚ್ 2026 ರ ಹೊತ್ತಿಗೆ, ಅವರು ವಾರ್ಷಿಕ 68 ಲಕ್ಷ ರೂ.ಗಳ ಪ್ರಭಾವಶಾಲಿ ಸಂಬಳದೊಂದಿಗೆ ಪ್ರಮುಖ ತಂತ್ರಜ್ಞಾನ ಸಂಸ್ಥೆಗೆ ಸೇರಿದರು., ಇದು ಅವರ ವೃತ್ತಿಪರ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ತಮ್ಮ ಅನುಭವವನ್ನು ಹೇಳುತ್ತಾ ತನ್ನ ಮೊದಲ ಉದ್ಯೋಗ ಬದಲಾವಣೆ ಅತ್ಯಂತ ಕಷ್ಟಕರವಾದ ಹಂತವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.