ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್‌ ದೇಶದಲ್ಲಿ ಡ್ರೈವರ್‌ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮಂಗಳೂರು (ಜೂನ್ 2): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಯುರೋಪ್‌ ದೇಶದಲ್ಲಿ ಡ್ರೈವರ್‌ಗಳ ನೇಮಕಾತಿಗೆ ಆಸಕ್ತ ಪುರುಷ ಹಾಗೂ ಮಹಿಳಾ ಡ್ರೈವರ್‌ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರಿ ಟ್ರಕ್‌ ಡ್ರೈವಿಂಗ್‌ ಉದ್ಯೋಗಕ್ಕೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಜೂನ್‌ 11ರೊಳಗೆ ನಗರದ ಅಶೋಕ ನಗರದಲ್ಲಿರುವ ಉರ್ವ ಮಾರುಕಟ್ಟೆಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಜೂ. 20 ಹಾಗೂ 21ರಂದು ಉದ್ಯೋಗದಾತರಿಂದ ನೇರ ಸಂದರ್ಶನ ನಡೆಯಲಿದೆ. ಮೂಲವೇತನ 1,07,000 ರು.ಗಳಿಂದ 1,34,000 ರು.ಗಳು (1,200-1,500 ಯುರೋಗಳು) ಪ್ರತಿ ತಿಂಗಳಿಗೆ ನೀಡಲಾಗುವುದು. ವಸತಿ, ವಿಮೆ ಇತ್ಯಾದಿ ಸವಲತ್ತಿನೊಂದಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಲಾಗುವುದು ಹಾಗೂ ಇಂಗ್ಲಿಷ್‌ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಸಲಹೆಗಾರರು ಮೊಬೈಲ್‌ ಸಂಖ್ಯೆ 911024845, 9141584259ಗೆ ಕರೆ ಮಾಡಿ ಸಂರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇಲ್ವಿಚಾರಕಿ ಹುದ್ದೆ ಕೊಡಿಸುವುದಾಗಿ ಅಂಗನವಾಡಿ ಕಾರ್ಯಕರ್ತೆಗೆ ವಂಚನೆ!
ಕಾರ್ಕಳ: ಮೇಲ್ವಿಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಆಮಿಷವೊಡ್ಡಿದ ವ್ಯಕ್ತಿಯೊಬ್ಬ ಅಂಗನವಾಡಿ ಕಾರ್ಯಕರ್ತೆಗೆ ಲಕ್ಷಾಂತರ ರುಪಾಯಿ ವಂಚಿಸಿದ ಘಟನೆ ಕಾರ್ಕಳ ತಾಲೂಕಿನ ಸಚ್ಚೇರಿಪೇಟೆಯಲ್ಲಿ ನಡೆದಿದೆ.

ವರ್ಕ್ ಫ್ರಮ್‌ ಆಫೀಸ್‌ ಕುರಿತಾಗಿ ಎಚ್ಚರಿಕೆ ನೀಡಿಲ್ಲ: ಟಿಸಿಎಸ್‌ ಸ್ಪಷ್ಟನೆ

ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬವರಿಗೆ ಬೆಂಗಳೂರಿನ ವೇಣುಗೋಪಾಲ ಎಂಬಾತ ಅಂಗನವಾಡಿ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿ 2 ಲಕ್ಷ ಹಣ ಕೇಳಿದ್ದ. ಅದರಂತೆ ಶಶಿಕಲಾ ಅವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ 80,000 ಹಣವನ್ನು ಆರೋಪಿ ವೇಣುಗೋಪಾಲನ ಅಣ್ಣ ವಿಶ್ವನಾಥ ಎಂಬಾತನ ಖಾತೆಗೆ ವರ್ಗಾಯಿಸಿದ್ದರು. ಬಳಿಕ ವಿವಿಧ ದಿನಗಳಂದು 1ಲಕ್ಷ, 25,000 ರು., 55,003 ರು. ಎರಡು ಬಾರಿ 10 ಸಾವಿರು ರು. ಸೇರಿದಂತೆ ಹೀಗೇ ಒಟ್ಟು 2,80,003 ರು. ನಗದನ್ನು ವೇಣುಗೋಪಾಲನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿದ್ದರು.

NIT KARNATAKA RECRUITMENT 2023: ರಾಜ್ಯದ ಏಕೈಕ ಎನ್‌ಐಟಿಯಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದಲ್ಲದೆ ತನ್ನ ಮಗಳಿಗೆ ಅಪಘಾತವಾಗಿದ್ದು ಚಿಕಿತ್ಸೆಗಾಗಿ ಸಾಲರೂಪದಲ್ಲಿ 2,20,000 ರು. ಹಣವನ್ನು ವೇಣಗೋಪಾಲ ಶಶಿಕಲಾ ಅವರಲ್ಲಿ ಕೇಳಿದ್ದು, ಅವರಿಗೆ ಹಣ ನೀಡಿದ್ದರು. ಇದುವೆರಗೂ ಮೇಲ್ವಿಚಾರಕಿ ಹುದ್ದೆಯನ್ನೂ ಕೊಡಿಸದೆ, ಕೊಟ್ಟಹಣವನ್ನೂ ವಾಪಸ್‌ ನೀಡದೆ ವಂಚಿಸಿದ್ದು, ಈ ಬಗ್ಗೆ ಶಶಿಕಲಾ ಅವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.