NIT Karnataka Recruitment 2023: ರಾಜ್ಯದ ಏಕೈಕ ಎನ್‌ಐಟಿಯಲ್ಲಿ ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಜ್ಯದ ಏಕೈಕ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ
ಬೆಂಗಳೂರು (ಜೂ.2): ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿರುವ ರಾಜ್ಯದ ಏಕೈಕ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ಪ್ರಾಧ್ಯಾಪಕ (ಗ್ರೇಡ್-2), ಸಹಾಯಕ ಪ್ರಾಧ್ಯಾಪಕ (ಗ್ರೇಡ್-1) ಹುದ್ದೆಗಳು ಸೇರಿ ಒಟ್ಟು 107 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 23 ಕೊನೆಯ ದಿನವಾಗಿದೆ. ಅರ್ಜಿಯ ಹಾರ್ಡ್ ಕಾಪಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ ತಾಣ https://www.nitk.ac.in/ ಗೆ ಭೇಟಿ ನೀಡಲು ಕೋರಲಾಗಿದೆ.
ಒಟ್ಟು 107 ಹುದ್ದೆಯ ವಿವರಗಳು
ಸಹಾಯಕ ಪ್ರಾಧ್ಯಾಪಕ-54
ಅಸೋಸಿಯೇಟ್ ಪ್ರೊಫೆಸರ್-46
ಪ್ರಾಧ್ಯಾಪಕರು-07
ಶೈಕ್ಷಣಿಕ ವಿದ್ಯಾರ್ಹತೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಪಿಎಚ್‌ಡಿ ಜೊತೆಗೆ M.Sc, B.Tech, M.E,B.E, ಮಾಡಿರಬೇಕು.
ಕೆಮಿಕಲ್ ಇಂಜಿನಿಯರಿಂಗ್ (CH): ಸಂಬಂಧಿತ ವಿಭಾಗಗಳಲ್ಲಿ ವಿಶೇಷತೆ ಮತ್ತು ಸಂಬಂಧಿಸಿದ ಪದವಿಗಳಲ್ಲಿ Ph.D ಮಾಡಿರಬೇಕು
ರಸಾಯನಶಾಸ್ತ್ರ (CY): ಸಂಬಂಧಿತ ವಿಭಾಗಗಳಲ್ಲಿ ವಿಶೇಷತೆ ಮತ್ತು ಸಂಬಂಧಿಸಿದ ಪದವಿಗಳಲ್ಲಿ ಪಿಎಚ್‌ಡಿ ಮಾಡಿರಬೇಕು.
ಸಿವಿಲ್ ಎಂಜಿನಿಯರಿಂಗ್ (CV): ಭೂವಿಜ್ಞಾನದಲ್ಲಿ M.Sc ಜೊತೆಗೆ ಸಂಬಂಧಿಸಿದ ವಿಷಯದಲ್ಲಿ Ph.D ಮಾಡಿರಬೇಕು.
ಅನ್ವಯಿಕ ಭೂವಿಜ್ಞಾನ ಸಿವಿಲ್ ಇಂಜಿನಿಯರಿಂಗ್: ಬಿ.ಟೆಕ್. ಜೊತೆಗೆ ಸಂಬಂಧಿಸಿದ ವಿಷಯದಲ್ಲಿ Ph.D ಮಾಡಿರಬೇಕು.ಬಿ.ಇ. ಎಂಇ ಅಥವಾ ಎಂಟೆಕ್‌ನೊಂದಿಗೆ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮಾಡಿರಬೇಕು.
ಈ ಕೆಳಗಂಡ ವಿಶೇಷತೆಗಳು:
ಜಿಯೋಟೆಕ್ನಿಕಲ್ ಇಂಜಿನಿಯರಿಂಗ್, ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್, ಕನ್ಸ್ಟ್ರಕ್ಷನ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ / ಕನ್ಸ್ಟ್ರಕ್ಷನ್ ಮ್ಯಾನೇಜ್ಮೆಂಟ್ / ಕನ್ಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ / ಕನ್ಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್ಮೆಂಟ್, ಸ್ಟ್ರಕ್ಚರಲ್ ಇಂಜಿನಿಯರಿಂಗ್, ಟ್ರಾನ್ಸ್ಪೋರ್ಟೇಶನ್ ಇಂಜಿನಿಯರಿಂಗ್.
ಆಯ್ಕೆ ಪ್ರಕ್ರಿಯೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಕರ್ನಾಟಕ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರಿತ ಕಿರುಪಟ್ಟಿ ತಯಾರಿಸಲಾಗುವುದು. ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.
ಅರ್ಜಿಯ ಹಾರ್ಡ್ ಕಾಪಿ ಸಲ್ಲಿಸಬೇಕಾದ ವಿಳಾಸ :
ದಿ ರಿಜಿಸ್ಟ್ರಾರ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ),
ಸುರತ್ಕಲ್, ಮಂಗಳೂರು - 575025, ಕರ್ನಾಟಕ, ಭಾರತ.
The Registrar,
National Institute of Technology Karnataka (NITK), Surathkal,
Mangaluru – 575 025, Karnataka, India.