ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಸೇರಿದಂತೆ ಒಟ್ಟು 233 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಈ ಲೇಖನವು ಹುದ್ದೆಗಳ ವಿವರ, ಅರ್ಹತಾ ಮಾನದಂಡಗಳು, ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಫಾರ್ಮಸಿ ಆಫೀಸರ್ ಮತ್ತು ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಒಟ್ಟು ಹುದ್ದೆಗಳು: 233
ಹುದ್ದೆಗಳ ಹೆಸರು: ಫಾರ್ಮಸಿ ಆಫೀಸರ್, ನರ್ಸಿಂಗ್ ಆಫೀಸರ್
ಉದ್ಯೋಗ ಸ್ಥಳ: ಕರ್ನಾಟಕ
ವೇತನ ಶ್ರೇಣಿ: ತಿಂಗಳಿಗೆ ₹44,425 ರಿಂದ ₹99,400
ವಿಭಾಗವಾರು ಹುದ್ದೆಗಳ ವಿವರಣೆ
ಫಾರ್ಮಸಿ ಆಫೀಸರ್ಸ್ ಉಳಿಕೆ ಮೂಲ ವೃಂದ (RPC)98
ನರ್ಸಿಂಗ್ ಆಫೀಸರ್ಸ್ ಉಳಿ ಮೂಲ ವೃಂದ (RPC)90
ಫಾರ್ಮಸಿ ಆಫೀಸರ್ಸ್ ಕಲ್ಯಾಣ ಕರ್ನಾಟಕ (KK)11
ನರ್ಸಿಂಗ್ ಆಫೀಸರ್ಸ್ ಕಲ್ಯಾಣ ಕರ್ನಾಟಕ (KK)34
ಅರ್ಹತಾ ಮಾನದಂಡಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ಪಿಯುಸಿ (12ನೇ), ಜಿಎನ್‌ಎಂ (GNM), ಬಿ.ಎಸ್ಸಿ ನರ್ಸಿಂಗ್ (B.Sc Nursing) ಅಥವಾ ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷಗಳು.
ವಯೋಮಿತಿ ಸಡಿಲಿಕೆ:
ಪ್ರವರ್ಗ 2A, 2B, 3A, 3B: 3 ವರ್ಷಗಳು
SC / ST / ಪ್ರವರ್ಗ-1: 5 ವರ್ಷಗಳು
ಅರ್ಜಿ ಶುಲ್ಕ ವಿವರ
SC / ST / ಪ್ರವರ್ಗ-1 / ಮಾಜಿ ಸೈನಿಕರು: ₹500
ವಿಕಲಚೇತನ (PH) ಅಭ್ಯರ್ಥಿಗಳು: ₹250
ಇತರ ಎಲ್ಲಾ ವರ್ಗದ ಅಭ್ಯರ್ಥಿಗಳು: ₹750
ಪಾವತಿ ವಿಧಾನ: ಆನ್‌ಲೈನ್ ಮೂಲಕ ಮಾತ್ರ
ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ/ಲಿಖಿತ ಪರೀಕ್ಷೆ
ದಾಖಲೆಗಳ ಪರಿಶೀಲನೆ ಹಾಗೂ ಸಂದರ್ಶನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸುವ ಮುನ್ನ KEA ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
- ಸಕ್ರಿಯವಾಗಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ಸಿದ್ಧವಿಟ್ಟುಕೊಳ್ಳಿ.
- ಗುರುತಿನ ಚೀಟಿ, ವಯಸ್ಸಿನ ಪುರಾವೆ, ಶೈಕ್ಷಣಿಕ ಅಂಕಪಟ್ಟಿಗಳು, ಅನುಭವ ಪ್ರಮಾಣಪತ್ರ (ಇದ್ದಲ್ಲಿ) ಮತ್ತು ಇತ್ತೀಚಿನ ಭಾವಚಿತ್ರದ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ರೆಡಿ ಇಟ್ಟುಕೊಳ್ಳಿ.
- KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 07 ಆಗಸ್ಟ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಆಗಸ್ಟ್ 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026


