ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಸ್ಟೇಷನ್ ಮಾಸ್ಟರ್, ಸಹಾಯಕ ಲೋಕೋ ಪೈಲಟ್, ಮತ್ತು ಎಂಜಿನಿಯರಿಂಗ್ ಸೇರಿದಂತೆ 201 ವಿವಿಧ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ, ಅಥವಾ ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಖಾಲಿ ಇರುವ ಸ್ಟೇಷನ್ ಮಾಸ್ಟರ್, ಸಹಾಯಕ ಲೋಕೋ ಪೈಲಟ್ ಹಾಗೂ ಎಂಜಿನಿಯರಿಂಗ್ ವಿಭಾಗದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ ಹಾಗೂ ಮಾಹಿತಿ
ಸಂಸ್ಥೆಯ ಹೆಸರು: ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL)
ಒಟ್ಟು ಹುದ್ದೆಗಳ ಸಂಖ್ಯೆ: 201
ಉದ್ಯೋಗ ಸ್ಥಳ: ಅಖಿಲ ಭಾರತ
ವೇತನ ಶ್ರೇಣಿ: ₹18,000 - ₹44,900 (ಪ್ರತಿ ತಿಂಗಳು)
ಹುದ್ದೆ ಮತ್ತು ಸಂಖ್ಯೆಗಳ ವಿವರ:
ಜೂನಿಯರ್ ಎಂಜಿನಿಯರ್ (ಸಿವಿಲ್) 25
ಟ್ರ್ಯಾಕ್ ನಿರ್ವಹಣೆ 57
ಹಿರಿಯ ವಿಭಾಗ ಎಂಜಿನಿಯರ್ (ಎಸ್ &ಟಿ) 5
ಇಎಸ್‌ಟಿಎಂ 15
ವಿಭಾಗ ನಿಯಂತ್ರಕ 9
ಸ್ಟೇಷನ್ ಮಾಸ್ಟರ್ 15
ಸರಕು ರೈಲು ವ್ಯವಸ್ಥಾಪಕ 10
ಸಹಾಯಕ ಲೋಕೋ ಪೈಲಟ್ 30
ಹಿರಿಯ ವಿಭಾಗ ಎಂಜಿನಿಯರ್ (ಯಾಂತ್ರಿಕ) 6
ಜೂನಿಯರ್ ಎಂಜಿನಿಯರ್ (ಮೆಕ್ಯಾನಿಕಲ್) 7
ತಂತ್ರಜ್ಞ-III (ಯಾಂತ್ರಿಕ) 15
ವಾಣಿಜ್ಯ ಮೇಲ್ವಿಚಾರಕ 7
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಹುದ್ದೆಗೆ ಅನುಗುಣವಾಗಿ 10 ನೇ ತರಗತಿ, ITI, ಡಿಪ್ಲೊಮಾ, ಅಥವಾ ಯಾವುದೇ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ:
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ:
ಮಾಜಿ ಸೈನಿಕರು (UR & EWS) ಅಭ್ಯರ್ಥಿಗಳಿಗೆ: 03 ವರ್ಷ
ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ: 05 ವರ್ಷ
ಮಾಜಿ ಸೈನಿಕರು (ಎಸ್‌ಸಿ&ಎಸ್‌ಟಿ) ಅಭ್ಯರ್ಥಿಗಳಿಗೆ: 08 ವರ್ಷ
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 10 ವರ್ಷ
ಅರ್ಜಿ ಶುಲ್ಕ:
ಯುಆರ್/ಒಬಿಸಿ-ಎನ್‌ಸಿಎಲ್ ಸಾಮಾನ್ಯ ಅಭ್ಯರ್ಥಿಗಳು: 1,180 ರು.
ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕರು/ಮಹಿಳೆಯರು/ಅಲ್ಪಸಂಖ್ಯಾತರು/ EBC/ PwBD: ಯಾವುದೆ ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT)/OMR ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್
(ಸೆಕ್ಷನ್ ಕಂಟ್ರೋಲರ್, ಸ್ಟೇಷನ್ ಮಾಸ್ಟರ್, ಅಸಿಸ್ಟೆಂಟ್ ಲೋಕೋ ಪೈಲಟ್‌ಗಳಿಗೆ ಮಾತ್ರ)
ದಾಖಲೆ ಪರಿಶೀಲನೆ (DV)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ) - ಟ್ರ್ಯಾಕ್ ನಿರ್ವಹಣೆ ಮಾಡುವವರಿಗೆ ಮಾತ್ರ
ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ ಜುಲೈ 31-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್-31-2026


