ಪ್ರತಿಷ್ಠಿತ ಐಐಟಿಗಳನ್ನು ಹಿಂದಿಕ್ಕಿ ಬೆಂಗಳೂರಿನ ಐಐಐಟಿ ವಿದ್ಯಾರ್ಥಿ 1.5 ಕೋಟಿ ರೂಪಾಯಿ ಪ್ಯಾಕೇಜ್ ಸ್ಯಾಲರಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ವಿಶೇಷ ಅಂದರೆ ಮತ್ತಿಬ್ಬರು 1.3 ಕೋಟಿ ರೂಪಾಯಿ ಪ್ಯಾಕೇಜ್ ಕೆಲಸ ಗಿಟ್ಟಿಸಿದ್ದಾರೆ.

ಬೆಂಗಳೂರು (ಜು.07) ದೇಶದಲ್ಲಿರುವ ಹಲವು ಪ್ರತಿಷ್ಠಿತ ಐಐಐಟಿಯಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಕೋಟಿ ಕೋಟಿ ರೂಪಾಯಿ ಪ್ಯಾಕೇಜ್ ಕೆಲಸ ಗಿಟ್ಟಿಸಿಕೊಂಡ ಹಲವು ಸಾಧಕರನ್ನು ದೇಶ ಕೊಂಡಾಡಿದೆ. ಇದೀಗ ಬೆಂಗಳೂರಿನ ಸರದಿ. ಬೆಂಗಳೂರಿನ ಐಐಐಟಿ ವಿದ್ಯಾರ್ಥಿ ಬರೋಬ್ಬರಿ 1.5 ಕೋಟಿ ರೂಪಾಯಿ ಪ್ಯಾಕೇಜ್ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ಮತ್ತಿಬ್ಬರು 1.3 ಕೋಟಿ ರೂಪಾಯಿ ಪ್ಯಾಕೇಜ್ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಬೆಂಗಳೂರಿನ IIIT-B ಹೊಸ ಸಂಚಲನ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ಐಐಐಟಿ ಸಾಧನೆ

ಬೆಂಗಳೂರು ಐಐಐಟಿ 26ನೇ ವರ್ಷಗ ಘಟಿಕೋತ್ಸವದಲ್ಲಿ ನಿರ್ದೇಶಕ ಡಾ.ದೆಬಬ್ರತಾ ದಾಸ್ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಸಂಸ್ಥೆಯಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಅತ್ಯುತ್ತಮ ಪ್ಯಾಕೇಜ್ ಸ್ಯಾಲರಿಗೆ ಆಯ್ಕೆಯಾಗಿದ್ದಾರೆ. ಕ್ಯಾಂಪಸ್ ಸೆಲೆಕ್ಷನ್‌ನಲ್ಲೇ ವಿದ್ಯಾರ್ಥಿಗಳು ಆಯ್ಕೆಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿರುವುದು ಐಐಐಟಿ ಬೆಂಗಳೂರಿನ ಹೆಮ್ಮೆಯಾಗಿದೆ ಎಂದಿದ್ದಾರೆ.ಇಂಟಿಗ್ರೇಟೆಡ್ ಎಂಟೆಕ್ (Integrated M.Tech) ವಿದ್ಯಾರ್ಥಿ 1.5 ಕೋಟಿ ಪ್ಯಾಕೇಜ್, ಇಬ್ಬರು ವಿದ್ಯಾರ್ಥಿಗಳು 1.3 ಕೋಟಿ ರೂಪಾಯಿ ಪ್ಯಾಕೇಜ್ ಪಡೆದಿದ್ದಾರೆ. ಇದು ನಮ್ಮ ಹೆಮ್ಮೆ ಎಂದು ದೇಬಬ್ರತಾ ದಾಸ್ ಹೇಳಿದ್ದಾರೆ.

ಕೋಟಿ ಕೋಟಿ ರೂಪಾಯಿ ಸಂಬಂಳ

ಪ್ರಸಕ್ತ ಸಾಲಿನಲ್ಲಿ 22ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 60 ಲಕ್ಷ ರೂಪಾಯಿ ಪ್ಯಾಕೇಜ್ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. 27 ವಿದ್ಯಾರ್ಥಿಗಳು 40 ರಿಂದ 60 ಲಕ್ಷ ರೂಪಾಯಿ ಪ್ಯಾಕೇಜ್, 110ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಾರ್ಷಿಕ 20 ಲಕ್ಷ ರೂಪಾಯಿ ಪ್ಯಾಕೇಜ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸಂಸ್ಥೆಯ ಬಹುತೇಕ ವಿದ್ಯಾರ್ಥಿಗಳು ಉತ್ತಮ ಸ್ಯಾಲರಿ ಪ್ಯಾಕೇಜ್‌ನೊಂದಿಗೆ ಕೆಲಸ ಗಿಟ್ಟಿಸಿಕೊಳ್ಳುತ್ತಿದಾರೆ ಎಂದು ದೇಬಬ್ರತಾ ದಾಸ್ ಹೇಳಿದ್ದಾರೆ.

ದೇಶದ ಹಲವು ಪ್ರತಿಷ್ಠಿತ ಐಐಐಟಿಗೆ ಹೋಲಿಸಿದರೆ ಬೆಂಗಳೂರು ಪ್ಯಾಕೇಜ್ ವಿಚಾರದಲ್ಲಿ ಅಗ್ರ ಸ್ಥಾನದಲ್ಲಿದೆ. ಐಐಟಿ ಮಂಡಿ ವಿದ್ಯಾರ್ಥಿ ಪಡೆದ ಗರಿಷ್ಠ ಪ್ಯಾಕೇಜ್ ವಾರ್ಷಿಕ 46.7 ಲಕ್ಷ ರೂಪಾಯಿ, ಇನ್ನು ಐಐಠಿ ಜೋಧಪುರ 56 ಲಕ್ಷ ರೂಪಾಯಿ, ಐಐಟಿ ಗೋವಾ, ಐಐಟಿ ಜಮ್ಮು ಸೇರಿದಂತೆ ಹಲವು ಸಂಸ್ಥೆಗಳಲ್ಲೂ ಲಕ್ಷ ರೂಪಾಯಿ ದಾಟಿಲ್ಲ.