ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು, ಕೇವಲ ಒಂದು HR ಕಾಲ್‌ನಿಂದ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಲೇಆಫ್ ಆದ ಬಗ್ಗೆ ಅವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಘಟನೆಯನ್ನು 'ದೇವರ ಸೂಚನೆ' ಎಂದು ಪರಿಗಣಿಸಿ ಹೊಸ ಆರಂಭಕ್ಕೆ ಸಿದ್ಧರಾಗಿದ್ದಾರೆ.
ಐದೂವರೆ ವರ್ಷದಿಂದ ಮಾಡುತ್ತಿದ್ದ ಕೆಲಸವೊಂದು ಕೇವಲ ಒಂದೇ ಒಂದು ಕಾಲ್‌ನಲ್ಲಿ ಹೋಗಿದ್ದರ ಬಗ್ಗೆ ಯುವತಿಯೊಬ್ಬರು ಹೇಳಿಕೊಂಡಿದ್ದಾರೆ. ಕೆಲಸ ಹೇಗೆ ಹೋಯ್ತು? ನಂತ್ರ ಏನಾಯ್ತು ಎಂಬುದರ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಸಾಲು ಸಾಲು ವಿಡಿಯೋಗಳನ್ನು ಮಾಡುತ್ತಿರುವ ದಿಢೀರ್ ಅಂತ ನಾಳೆಯಿಂದ ಕೆಲಸಕ್ಕೆ ಬರಬೇಡಿ ಅಂದಾಗ ಏನಾಯ್ತು? ಪೋಷಕರು ಕೆಲಸ ಸಿಕ್ಕಿದ್ದಾಗ ಅವರು ಹೇಗೆ ಖುಷಿ ವ್ಯಕ್ತಪಡಿಸಿದ್ದರು ಎಂಬುದನ್ನು ಯುವತಿ ವಿವರಿಸಿದ್ದಾರೆ. ಸದ್ಯ ಯುವತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅನುಕೃತಿ ಕೆಲಸ ಕಳೆದುಕೊಂಡ ದೆಹಲಿ ಮೂಲದ ಐಟಿ ಉದ್ಯೋಗಿ. ಅನುಕೃತಿ ಅವರು ಸುಮಾರು ಐದೂವರೆ ವರ್ಷಗಳಿಂದ ವಿಪ್ರೋ ಕಂಪನಿಯಲ್ಲಿ ಎಐ ಸೊಲ್ಯೂಷನ್ಸ್‌ನಲ್ಲಿ ಮಾರ್ಕೆಟಿಂಗ್ ಮತ್ತು ಸಂವಹನ ಸಂಯೋಜಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಎಂದಿನಂತರ ಮೀಟಿಂಗ್ ಲಿಂಕ್‌ವೊಂದನ್ನು ಅನುಕೃತಿ ಅವರಿಗೆ ಹೆಚ್‌ಆರ್ ಕಳುಹಿಸಿದ್ದರು. ಎಂದಿನಂತೆ ಮೀಟಿಂಗ್ ಇರಬಹುದು ಎಂದು ಅನುಕೃತಿ ಜಾಯಿನ್ ಆಗಿದ್ದರು. ಹೆಚ್‌ಆರ್ ಒಂದು ಕ್ಷಣವೂ ಯೋಚಿಸದೇ, ಇನ್ಮುಂದೆ ನೀವು ನಮ್ಮೊಂದಿಗೆ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ಎಕ್ಸಿಟ್ ಆಗುವಂತೆ ಹೇಳಿದ್ದಾರೆ.
ಇದು ದೇವರ ಸೂಚನೆ ಎಂದ ಅನುಕೃತಿ
ಮೀಟಿಂಗ್ ಜಾಯಿನ್ ಆದ ಕೆಲವೇ ನಿಮಿಷಗಳಲ್ಲಿ ತಾನು ಐದೂವರೆ ವರ್ಷಗಳಿಂದ ಮಾಡುತ್ತಿದ್ದ ಕೆಲಸ ಕಳೆದುಕೊಂಡಿದ್ದೇನೆ ಎಂದು ಅನುಕೃತಿ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಅನುಕೃತಿ ಭಾವುಕರಾಗಿರೋದು ಕಂಡು ಬಂದಿದೆ. ಈ ವಿಡಿಯೋದಲ್ಲಿ ಕೆಲಸಕ್ಕೆ ಸೇರಿದ ದಿನದ ಅನುಭವ ಮತ್ತು ಯಾವುದೇ ಮುನ್ಸೂಚನೆ ನೀಡದೇ ಲೇಆಫ್ ಮಾಡಿರುವ ಬಗ್ಗೆ ಅನುಕೃತಿ ಹೇಳಿಕೊಂಡಿದ್ದಾರೆ. ಕೊನೆಗೂ ಇದು ದೇವರ ಸೂಚನೆಯಾಗಿರಬಹುದು ಎಂದು ಪರಿಗಣಿಸಿ ಹೊಸ ಆರಂಭದ ಬಗ್ಗೆ ಅನುಕೃತಿ ಮಾತನಾಡಿದ್ದಾರೆ.
ಜೂನ್ 29ರಂದು ಕೆಲಸ ಕಳೆದುಕೊಂಡಿದ್ರೂ ಈ ವಿಷಯವನ್ನು ಪೋಷಕರೊಂದಿಗೆ ಹೇಳಿಕೊಂಡಿರಲಿಲ್ಲ. ಜುಲೈ 1ರಂದು ಕೆಲಸಕ್ಕೆ ಹೋಗಲ್ಲವಾ ಎಂದು ತಾಯಿ ಕೇಳಿದ್ದಾರೆ. ಇದಕ್ಕೆ ನಾನು ಮಾಡುತ್ತಿರುವ ಕೆಲಸ ನನ್ನೊಂದಿಗೆ ಇಲ್ಲ ಎಂದು ಹೇಳಿದಾಗ ತಾಯಿ, ಆತಂಕಕ್ಕೊಳಗಾಗದೇ ಹೊಸ ಜೀವನ ಆರಂಭದ ಕುರಿತು ಮಾತನಾಡಿದರು ಎಂದು ಅನುಕೃತಿ ತಿಳಿಸಿದ್ದಾರೆ.
ಇದನ್ನೂ ಓದಿ: ಆಡಿ ಮತ್ತು ಪೋರ್ಷೆ ತಯಾರಿಕಾ ಕಂಪೆನಿ ವೋಕ್ಸ್‌ವ್ಯಾಗನ್‌ನಲ್ಲಿ 1ಲಕ್ಷ ನೌಕರರ ವಜಾ!: 4 ಕಾರ್ಖಾನೆಗಳ ಮುಚ್ಚಲು ನಿರ್ಧಾರ!
ಸೋಶಿಯಲ್ ಮೀಡಿಯಾ ಬಳಕೆದಾರರ ಮಾತು ಏನು?
ಮತ್ತೊಂದು ವಿಡಿಯೋದಲ್ಲಿ ಕೆಲಸ ಕಳೆದುಕೊಂದು ಒಂದು ವಾರ ಆಗಿದೆ. ಪ್ರತಿ ತಿಂಗಳು ಬರುತ್ತಿದ್ದ ಆದಾಯ ಇನ್ಮುಂದೆ ಬರಲ್ಲ. ಆದ್ರೂ ಹೊಸ ಆರಂಭಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ. ಅನುಕೃತಿ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಸೋಶಿಯಲ್ ಮೀಡಿಯಾ ಬಳಕೆದಾರರು, ಖಾಸಗಿ ಕಂಪನಿಗಳಲ್ಲಿ ಲೇಆಫ್ ಅನ್ನೋ ಭೂತ ಬೆನ್ನ ಹಿಂದೆಯೇ ಇರುತ್ತೆ. ನಾನು ಇಂತಹ ಕಷ್ಟದ ಪರಿಸ್ಥಿತಿಯನ್ನು ಎದುರಿಸಿದ್ದೇನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇಲ್ಲಿಂದ ಜೀವನವು ನಿರೀಕ್ಷೆಗಿಂತ ಉತ್ತಮ ತಿರುವು ಪಡೆಯಬಹುದು. ಹಾಗಾಗಿ ಧೈರ್ಯವಾಗಿರಿ ಎಂದು ಕೆಲವರು ಸಲಹೆ ನೀಡಿದ್ದಾರೆ. ದೇವರು ನಿಮಗಾಗಿ ಒಂದು ದೊಡ್ಡ ಯೋಜನೆ ಹೊಂದಿರಬಹುದು ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ: ಎಐ ಭರವಸೆಯಿಂದ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕ್ ; ಗುಣಮಟ್ಟದ ಸೇವೆ ನೀಡದ ಎಐ ಟೂಲ್ಸ್
ಇದನ್ನೂ ಓದಿ: 21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್! ಬೆಂಗಳೂರು, ಹೈದರಾಬಾದ್ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ


