ಮೊದಲ ಒಂದು ಗಂಟೆಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ಟಾಪ್ 8 ಆಟಗಾರರಿವರು

ಐಪಿಎಲ್ ಆಟಗಾರರ ಹರಾಜಿನ ಮೊದಲ ಒಂದು ಗಂಟೆಯಲ್ಲಿ 10 ಆಟಗಾರರು ಸೇಲ್ ಆಗಿದ್ದು, 10 ಆಟಗಾರರ ಪೈಕಿ 9 ಆಟಗಾರರು ವಿದೇಶಿಗರಾದರೆ, ಭಾರತದ ಏಕೈಕ ಆಟಗಾರನ್ನು ಮಾತ್ರ ಖರೀದಿಸುವಲ್ಲಿ ಐಪಿಎಲ್ ಫ್ರಾಂಚೈಸಿಗಳು ಒಲವು ತೋರಿದವು. ಯಾರೆಲ್ಲಾ ಎಷ್ಟು ಮೊತ್ತಕ್ಕೆ ಯಾವ ತಂಡ ಸೇರಿಕೊಂಡರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

Top 8 expensive buys in IPL player auction 2020

ಕೋಲ್ಕತಾ[ಡಿ.19]: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಮೊದಲ ಒಂದು ಗಂಟೆಯಲ್ಲಿ ಎಂಟು ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಮುಗಿಬಿದ್ದವು. ಇದುವರೆಗೂ 10 ಆಟಗಾರರು ಹರಾಜಾಗಿದ್ದು, 9 ಆಟಗಾರರು ವಿದೇಶಿಯರಾಗಿದ್ದಾರೆ.

ಸದ್ಯ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಅವರನ್ನು 15.50 ಕೋಟಿಗೆ ಖರೀದಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು. ಐಪಿಎಲ್ ಇತಿಹಾಸದಲ್ಲೇ ಇದು ಎರಡನೇ ಗರಿಷ್ಠ ಹರಾಜಾಗಿದೆ. ಈ ಮೊದಲು 2015ರ ಹರಾಜಿನಲ್ಲಿ ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 16 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇನ್ನು ಯೂಸುಪ್ ಪಠಾಣ್, ಸ್ಟುವರ್ಟ್ ಬಿನ್ನಿ, ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಸೇರಿದಂತೆ 5 ಆಟಗಾರರು ಅನ್ ಸೋಲ್ಡ್ ಆದರು.

ಸ್ಟಾರ್ ಆಲ್‌ರೌಂಡರ್ ಖರೀದಿಸಿದ RCB

ಇನ್ನು ಮತ್ತೋರ್ವ ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್’ವೆಲ್ ಅವರನ್ನು ಪಂಜಾಬ್ 10.75 ಕೋಟಿ ರುಪಾಯಿ ನೀಡಿ ಖರೀದಿಸಿದರೆ, ಕ್ರಿಸ್ ಮೋರಿಸ್ ಅವರನ್ನು 10 ಕೋಟಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿದೆ. ಫಿಂಚ್ ಕೂಡಾ 4.40 ಕೋಟಿಗೆ RCB ಪಾಲಾಗಿದ್ದಾರೆ.

1. ಪ್ಯಾಟ್ ಕಮಿನ್ಸ್- 15.50 ಕೋಟಿ- ಕೋಲ್ಕತ ನೈಟ್ ರೈಡರ್ಸ್
2. ಗ್ಲೆನ್ ಮ್ಯಾಕ್ಸ್’ವೆಲ್- 10.75 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್
3. ಕ್ರಿಸ್ ಮೋರಿಸ್- 10 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು
4. ಸ್ಯಾಮ್ ಕರನ್- 5.50 ಕೋಟಿ- ಚೆನ್ನೈ ಸೂಪರ್ ಕಿಂಗ್ಸ್
5. ಇಯಾನ್ ಮಾರ್ಗನ್-5.25 ಕೋಟಿ- ಕೋಲ್ಕತಾ ನೈಟ್ ರೈಡರ್ಸ್
6. ಆ್ಯರೋನ್ ಫಿಂಚ್- 4.40 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು
7. ರಾಬಿನ್ ಉತ್ತಪ್ಪ- 3 ಕೋಟಿ- ರಾಜಸ್ಥಾನ ರಾಯಲ್ಸ್
8. ಕ್ರಿಸ್ ಲಿನ್- 2 ಕೋಟಿ- ಮುಂಬೈ ಇಂಡಿಯನ್ಸ್

ದಾಖಲೆ ಮೊತ್ತಕ್ಕೆ ಸೇಲಾದ ಪ್ಯಾಟ್ ಕಮಿನ್ಸ್
 
 

Latest Videos
Follow Us:
Download App:
  • android
  • ios