ಕೋಲ್ಕತಾ(ಡಿ.19): ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್ ದಾಖಲೆ ಬರೆದಿದ್ದಾರೆ. ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂಪಾಯಿಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಖರೀದಿಸಿತು. ಇದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಟ್ಟು ಐಪಿಎಲ್ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತ ಅನ್ನೋ ದಾಖಲೆ ಬರೆದಿದೆ. 

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಖರೀದಿಸಲು 8 ತಂಡಗಳಿಂದಲೂ ಪೈಪೋಟಿ ಎರ್ಪಟ್ಟಿತ್ತು. 2 ಕೋಟಿ ಮೂಲ ಬೆಲೆ ಹೊಂದಿದ್ದ ಕಮಿನ್ಸ್ ಬರೋಬ್ಬರಿ 15 ಕೋಟಿ ನೀಡಲು RCB ತಯಾರಾಗಿತ್ತು. ಆದರೆ ಕೆಕೆಆರ್ 15.50 ಕೋಟಿಗೆ ತಮ್ಮ ತೆಕ್ಕೆಗೆ ಸೆಳೆಯಲು ಯಶಸ್ವಿಯಾಯಿತು.

ಆರಂಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಯಾಟ್ ಕಮಿನ್ಸ್ ಖರೀದಿಗೆ ಮುಗಿ ಬಿದ್ದಿತ್ತು.  ಮಧ್ಯ ಪ್ರವೇಶಿಸಿದ ಕೆಕೆಆರ್ ಎಲ್ಲರಿಗೂ ಶಾಕ್ ನೀಡಿತು.