ಕೋಲ್ಕತಾ(ಡಿ.19): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಆಟಗಾರರ ಹರಾಜಿನಲ್ಲಿ 2ನೇ ಆಟಗಾರರನ್ನು ಖರೀದಿಸಿತು. ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೋರಿಸ್‌ಗೆ 10 ಕೋಟಿ ರೂಪಾಯಿ ನೀಡಿ  RCB ಖರೀದಿಸಿದೆ. ಇದಕ್ಕೊ ಮೊದಲು ಆ್ಯರೋನ್ ಫಿಂಚ್‌ಗೆ 4.4 ಕೋಟಿ ರೂಪಾಯಿ ನೀಡಿ ಖರದಿಸಿತ್ತು. 

RCB ಖರೀದಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತೀವ್ರ ಪೈಪೋಟಿ ನೀಡಿತ್ತು. ಆದರೆ 10 ಕೋಟಿ ರೂಪಾಯಿ ನೀಡಿ ಕ್ರಿಸ್ ಮೊರಿಸ್ ಖರೀದಿಸುವಲ್ಲಿ RCB ಯಶಸ್ವಿಯಾಯಿತು.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಕಳೆದ ಆವೃತ್ತಿಯಲ್ಲಿ ಕ್ರಿಸ್ ಮೊರಿಸ್ ಡೆಲ್ಲಿ ಕ್ಯಾಪಿಟಲ್ಸ್ ಪರ 9 ಪಂದ್ಯ ಆಡಿ 13 ವಿಕೆಟ್ ಕಬಳಿಸಿದ್ದರು.ಆದರೆ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಮೊರಿಸ್‌ನನ್ನು ಡೆಲ್ಲಿ ಕೈಬಿಟ್ಟಿತ್ತು.