ಬೆಂಗಳೂರು(ಫೆ.26): 2020ರ ಐಪಿಎಲ್‌ 13ನೇ ಆವೃತ್ತಿಗಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಅಭ್ಯಾಸ ಶಿಬಿರ ಆರಂಭಿಸಲಿದೆ ಎಂದು ಕೋಚ್‌ ಮೈಕ್‌ ಹೇಸನ್‌ ಹೇಳಿದ್ದಾರೆ. 

IPL ಫ್ಲ್ಯಾಶ್‌ಬ್ಯಾಕ್; 2008ರ ಹರಾಜಿನಲ್ಲಿ ಕೊಹ್ಲಿ ತಿರಸ್ಕರಿಸಿದ್ದ ಡೆಲ್ಲಿ!

ಬಾಂಗ್ಲಾದ ಢಾಕಾದಲ್ಲಿ ನಡೆಯಲಿರುವ ಏಷ್ಯಾ ಇಲೆವೆನ್‌ ಹಾಗೂ ವಿಶ್ವ ಇಲೆವೆನ್‌ ಚಾರಿಟಿ ಟಿ20 ಪಂದ್ಯಗಳಲ್ಲಿ ಕೊಹ್ಲಿ ಪಾಲ್ಗೊಳ್ಳುವ ಕಾರಣದಿಂದ ಅಭ್ಯಾಸ ಶಿಬಿರಕ್ಕೆ ತಡವಾಗಿ ಆಗಮಿಸಲಿದ್ದಾರೆ. ಅಭ್ಯಾಸ ಶಿಬಿರದಲ್ಲಿ ಆ್ಯರೋನ್‌ ಫಿಂಚ್‌, ಕ್ರಿಸ್‌ ಮೋರಿಸ್‌, ಡೇಲ್‌ ಸ್ಟೇನ್‌, ಇಸುರು ಉದಾನ, ಕೇನ್‌ ರಿಚರ್ಡ್‌ಸನ್‌, ಬಿಗ್‌ಬ್ಯಾಶ್‌ ಲೀಗ್‌ ಸ್ಟಾರ್‌ ಜೋಶ್‌ ಫಿಲೆಪ್‌ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಹೊಸ ಲಾಂಛನದೊಂದಿಗೆ ಕಣಕ್ಕಿಳಿಯುತ್ತಿರುವ ಆರ್‌ಸಿಬಿ ಈ ಬಾರಿಯಾದರೂ ಕಪ್‌ ಗೆಲ್ಲಲಿ ಎನ್ನುವುದು ಅಭಿಮಾನಿಗಳ ಆಶಯ.

ಕೊಹ್ಲಿ ಅನುಪಸ್ಥಿತಿಯಲ್ಲಿ ಈ ನಾಲ್ವರು RCB ತಂಡವನ್ನು ಮುನ್ನಡೆಸಬಹುದು..!

ಮಾ.2 ರಿಂದ ಧೋನಿ ಅಭ್ಯಾಸ:

ಚೆನ್ನೈ: ಕಳೆದ ವರ್ಷ ವಿಶ್ವಕಪ್‌ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಭಾರತದ ಮಾಜಿ ನಾಯಕ ಎಂ.ಎಸ್‌. ಧೋನಿ, ಐಪಿಎಲ್‌ಗಾಗಿ ಮಾ.2 ರಿಂದ ಅಖಾಡಕ್ಕಿಳಿಯಲಿದ್ದಾರೆ. 38 ವರ್ಷ ವಯಸ್ಸಿನ ಧೋನಿ, ತಂಡದ ಇತರೆ ಆಟಗಾರರೊಂದಿಗೆ ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಮಾ.29 ರಂದು ನಡೆಯಲಿರುವ 13ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ತಂಡ, ಹಾಲಿ ಚಾಂಪಿಯನ್‌ ಮುಂಬೈ ಯನ್ನು ಎದುರಿಸಲಿದೆ.

ಚೆನ್ನೈ ತಂಡದ ಪೂರ್ಣ ಪ್ರಮಾಣದ ಅಭ್ಯಾಸ ಶಿಬಿರ ಮಾ.19 ರಿಂದ ಆರಂಭವಾಗಲಿದೆ. ಧೋನಿ 17 ದಿನಗಳ ಮುಂಚಿತವಾಗಿಯೇ ಅಭ್ಯಾಸ ನಡೆಸಲು ಮುಂದಾಗಿದ್ದಾರೆ. ಧೋನಿ ಜತೆಯಲ್ಲಿ ಸುರೇಶ್‌ ರೈನಾ, ಅಂಬಟಿ ರಾಯುಡು ಅಭ್ಯಾಸದಲ್ಲಿ ನಿರತರಾಗಲಿದ್ದಾರೆ.