ಮುಂಬೈ(ಆ.22):  IPL ಟೂರ್ನಿಗಾಗಿ 8 ತಂಡಗಳು ದುಬೈನಲ್ಲಿ ಬೀಡು ಬಿಟ್ಟಿದೆ.  ಸದ್ಯ ಆಟಗಾರರು ಕ್ವಾರಂಟೈನ್‌ನಲ್ಲಿದ್ದಾರೆ. ಇತ್ತ ಬಿಸಿಸಿಐ ಸೆಪ್ಟೆಂಬರ್ 19 ರಿಂದ ಆರಂಭಗೊಳ್ಳಲಿರುವ ಟೂರ್ನಿಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿವೋ ಐಪಿಎಲ್ ಟೈಟಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದ ಕಾರಣ ಬಿಸಿಸಿಐ ಹೊಸದಾಗಿ ಬಿಡ್ಡಿಂಗ್ ಮಾಡಿತ್ತು. ಈ ವೇಳೆ ಡ್ರೀಮ್ 11 ಐಪಿಎಲ್ ಟೈಟಲ್ ಪ್ರಾಯೋಜಕತ್ವ ಖರೀದಿಸಿದೆ. ಆದರೆ ಡ್ರೀಮ್ ಇಲೆವೆನ್‌ನಲ್ಲಿ ಚೀನಾ ಬಂಡವಾಳವಿದೆ ಅನ್ನೋ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಇದು ಸಂಪೂರ್ಣ ಭಾರತದ ಕಂಪನಿ ಎಂದು ಡ್ರೀಮ್ ಇಲೆವೆನ್ ಹೇಳಿದೆ

2020ರ ಐಪಿ​ಎಲ್‌ಗಷ್ಟೇ ಡ್ರೀಮ್‌ 11 ಪ್ರಾಯೋ​ಜ​ಕತ್ವ

ಐಪಿಎಲ್ 20202 ಟೂರ್ನಿಗಾಗಿ ಟೈಟಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11 ಗ್ರೂಪ್ 222 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. ಆದರೆ ಡ್ರೀಮ್ ಇಲೆವೆನ್ ಗ್ರೂಪ್‌ನಲ್ಲಿ ಚೀನಾ ಬಂಡವಾಳವಿದೆ. ಇದು ಕೂಡ ಚೀನಾ ಕಂಪನಿ ಎಂಬ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಡ್ರೀಮ್ 11, ಇದು ಭಾರತದ ಬ್ರ್ಯಾಂಡ್. ಟೆಕ್ನಿಕಲ್ ಸಪೂರ್ಟ, ಆ್ಯಪ್ ಅಭಿವೃದ್ದಿ ಸೇರಿದಂತೆ ಎಲ್ಲವೂ ಕೂಡ ಭಾರತದಲ್ಲೇ ಆಗಿದೆ. ಇದು ಭಾರತೀಯ ಕ್ರೀಡಾಭಿಮಾನಿಗಳಿಗೆ ತಯಾರಿಸಲಾಗಿದೆ ಎಂದು ಡ್ರೀಮ್ 11 ಹೇಳಿದೆ.

ಐಪಿಎಲ್ ಟೈಟಲ್‌ ಪ್ರಾಯೋಕತ್ವ ಪಡೆಯುವಲ್ಲಿ Dream11 ಯಶಸ್ವಿ..!.

ಡ್ರೀಮ್ 11 ಕಂಪನಿಯಲ್ಲಿ ಬಹುಪಾಲು ಭಾರತೀಯರೇ ಹೊಂದಿದ್ದಾರೆ. ಚೀನಾ ಮೂಲದ ಬಂಡವಾಳ ಕಡಿಮೆ ಇದೆ. ಆಡಳಿತ ಸೇರಿದಂತೆ ಎಲ್ಲವೂ ಭಾರತೀಯರು ಹಾಗೂ ಭಾರತದಲ್ಲೇ ನಡೆಯುತ್ತಿದೆ ಎಂದು ಡ್ರೀಮ್ 11 ಹೇಳಿದೆ.

ಒಟ್ಟು 5 ಬಂಡವಾಳದಾರರನ್ನು ಡ್ರೀಮ್ 11 ಹೊಂದಿದೆ. ಇದರಲ್ಲಿ ನಾಲ್ವರು ಭಾರತೀಯರಾಗಿದ್ದು, ಕೇವಲ ಒರ್ವ ಚೀನಾ ಮೂಲದವರಾಗಿದ್ದಾರೆ. ಆದರೆ ಚೀನಾ ಮೂಲದವರಲ್ಲಿ ಅತ್ಯಂತ ಕಡಿಮೆ ಪಾಲು ಹೊಂದಿದ್ದಾರೆ ಎಂದು ಕಂಪನಿ ಹೇಳಿದೆ. 400ಕ್ಕಿಂತಲೂ ಹೆಚ್ಚು ಭಾರತೀಯ ಉದ್ಯೋಗಿಗಳಿದ್ದಾರೆ. ಎಂದಿದೆ.