ಕೋಲ್ಕತಾ(ಡಿ.19): IPL ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಆ್ಯರೋನ್ ಫಿಂಚ್, ಕ್ರಿಸ್ ಮೋರಿಸ್ ಬಳಿಕ ಮತ್ತಿಬ್ಬರು ಕ್ರಿಕೆಟಿಗರನ್ನು RCB ಖರೀದಿಸಿದೆ. ಅನ್‌ಸೋಲ್ಡ್ ಆಟಗಾರರ ಬಿಡ್ಡಿಂಗ್‌ನಲ್ಲಿ RCB ಆಸೀಸ್ ವೇಗಿ ಕೇನ್ ರಿಚರ್ಡ್ಸನ್ ಹಾಗೂ ವಿಕೆಟ್ ಕೀಪರ್ ಜೋಶುವಾ ಪಿಲಿಫ್ ಖರೀದಿಸಿದೆ.

IPL ಹರಾಜು: ಪಂಜಾಬ್‌ಗೆ ಫೈಟ್ ನೀಡಿ ಸ್ಟಾರ್ ಆಲ್ರೌಂಡರ್ ಖರೀದಿಸಿದ RCB.

ಕೇನ್ ರಿಚರ್ಡ್ಸನ್‍‌ಗೆ ಬರೋಬ್ಬರಿ 4 ಕೋಟಿ ರೂಪಾಯಿ ನೀಡಿ RCB ಖರೀದಿಸಿದೆ. ಆಸ್ಟ್ರೇಲಿಯಾದ ಯುವ ವಿಕೆಟ್ ಕೀಪರ್ ಜೋಶುವಾ ಪಿಲಿಪ್‌ಗೆ ಮೂಲ ಬೆಲೆ 20 ಲಕ್ಷ ರೂಪಾಯಿ ನೀಡಿ ಖರೀದಿಸಿದೆ. ಈ ಮೂಲಕ ಈ ಹರಾಜಿನಲ್ಲಿ RCB ಒಟ್ಟು ನಾಲ್ವರನ್ನು ಖರೀದಿಸಿದೆ.

Live| IPL 2020: 8 ಫ್ರಾಂಚೈಸಿ, 73 ಆಟಗಾರರು, ಯಾರು ಯಾವ ತಂಡಕ್ಕೆ?

ಕ್ರಿಸ್ ಮೊರಿಸ್ = 10 ಕೋಟಿ
ಆರೋನ್ ಫಿಂಚ್ = 4.4 ಕೋಟಿ
ಕೇನ್ ರಿಚರ್ಡ್ಸನ್ = 3 ಕೋಟಿ
ಜೋಶುವಾ ಫಿಲಿಪ್ = 20 ಲಕ್ಷ