ಕೋಲ್ಕತಾ[ಡಿ.19]: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿಗೆ ತೆರೆಬಿದ್ದಿದೆ. ಎಲ್ಲಾ 8 ಫ್ರಾಂಚೈಸಿಗಳು ತಮಗೆ ಅಗತ್ಯವಿರುವ ಆಟಗಾರರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಧೋನಿ to ಉನಾದ್ಕಟ್: ಪ್ರತಿ IPL ಆವೃತ್ತಿಯ ದುಬಾರಿ ಆಟಗಾರರ ಲಿಸ್ಟ್!

ಇದೇ ಮೊದಲ ಬಾರಿಗೆ ಕೋಲ್ಕತಾದಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಬಹುತೇಕ ವಿದೇಶಿ ಆಟಗಾರರೇ ದುಬಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಅದರಲ್ಲೂ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ದಾಖಲೆಯ 15.5 ಕೋಟಿ ಮೊತ್ತಕ್ಕೆ ಹರಾಜಾಗುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಈ ಹಿಂದೆ 2017ರಲ್ಲಿ ಬೆನ್ ಸ್ಟೋಕ್ಸ್ ಅವರನ್ನು ರೈಸಿಂಗ್ ಪುಣೆ ಸೂಪರ್’ಜೈಂಟ್ಸ್ 14.5 ಕೋಟಿ ನೀಡಿ ಖರೀದಿಸಿತ್ತು. ಈ ಮೂಲಕ ವಿದೇಶಿ ಆಟಗಾರನೊಬ್ಬ ಪಡೆದ ಗರಿಷ್ಠ ಮೊತ್ತವೂ ಇದಾಗಿತ್ತು. ಆದರೀಗ ಕಮಿನ್ಸ್ ಬರೋಬ್ಬರಿ 15.5 ಕೋಟಿ ರುಪಾಯಿಗೆ ಕೆಕೆಆರ್ ಪಾಲಾಗುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 

IPL 2020: ಹರಾಜಿನ ಬಳಿಕ RCB ತಂಡದ ಫುಲ್ ಲಿಸ್ಟ್!

ಈ ಸಂದರ್ಭದಲ್ಲಿ 13ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 5 ಆಟಗಾರರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

1. ಪ್ಯಾಟ್ ಕಮಿನ್ಸ್- 15.50 ಕೋಟಿ- ಕೋಲ್ಕತಾ ನೈಟ್ ರೈಡರ್ಸ್

2. ಗ್ಲೆನ್ ಮ್ಯಾಕ್ಸ್’ವೆಲ್- 10. 75 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್

3. ಕ್ರಿಸ್ ಮೋರಿಸ್- 10 ಕೋಟಿ- ರಾಯಲ್ ಚಾಲೆಂಜರ್ಸ್ ಬೆಂಗಳೂರು

4. ಶೆಲ್ಡನ್ ಕಾಟ್ರೆಲ್- 8.5 ಕೋಟಿ- ಕಿಂಗ್ಸ್ ಇಲೆವನ್ ಪಂಜಾಬ್

5. ನೇಥನ್ ಕೌಲ್ಟರ್-ನೈಲ್- 8 ಕೋಟಿ- ಮುಂಬೈ ಇಂಡಿಯನ್ಸ್

ಐಪಿಎಲ್ ಹರಾಜಿನ ಕಂಪ್ಲೀಟ್ ಅಪ್‌ಡೇಟ್ಸ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...