ಕೋಲ್ಕತಾ(ಡಿ.19): ಬಹುನಿರೀಕ್ಷಿತ  IPL ಆಟಗಾರರ ಹರಾಜು ಪ್ರಕ್ರಿಯೆ ಅಂತ್ಯವಾಗಿದೆ. ಆರಂಭದಲ್ಲಿ ವಿಜದೇಶಿ ಆಟಗಾರರ ಖರೀದಿಗೆ ಮುಗಿಬಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಹರಾಜಿನ ಅಂತ್ಯದಲ್ಲಿ ಭಾರತ ಹಾಗೂ ಕರ್ನಾಟಕ ಆಟಗಾರರನ್ನು ಖರೀದಿಸಿ ಅಭಿಮಾನಿಗಳನ್ನು ಸಮಾಧಾನ ಪಡಿಸಿತು. ಈ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸಿತು. 

IPL ಹರಾಜು: ಕೊನೆಗೂ RCB ಸೇರಿದ ಲಕ್ಕಿ ಪ್ಲೇಯರ್!.

ಸೌತ್ ಆಫ್ರಿಕಾ ಆಲ್ರೌಂಡರ್ ಕ್ರಿಸ್ ಮೊರಿಸ್‌ಗೆ 10 ಕೋಟಿ ರೂಪಾಯಿ ದುಬಾರಿ ಖರೀದಿ ಮಾಡಿತು. ಇನ್ನು ಕನ್ನಡಿಗ ಆಲ್ರೌಂಡರ್ ಪವನ್ ದೇಶಪಾಂಡೆಯನ್ನು ಮೂಲ ಬೆಲೆಗೆ ಖರೀದಿಸೋ ಮೂಲಕ, ತಂಡದಲ್ಲಿನ ಕರ್ನಾಟಕ ಆಟಗಾರರ ಸಂಖ್ಯೆಯನ್ನು ಎರಡಕ್ಕೇರಿಸಿತು. 27.90 ಕೋಟಿ ರುಪಾಯಿಯೊಂದಿಗೆ ಹರಾಜಿಗಿಳಿದ RCB ಇದೀಗ 6.4 ಕೋಟಿ ಉಳಿಸಿಕೊಂಡಿದೆ.

IPL ಹರಾಜು: ಕೊನೆಗೂ ಕನ್ನಡಿಗನ ಖರೀದಿಸಿದ RCB.

ಹರಾಜಿನಲ್ಲಿ ಬೆಂಗಳೂರು ತಂಡ ಖರೀದಿಸಿ ಆಟಗಾರರು
ಹರಾಜಿನಲ್ಲಿ RCB ಖರೀದಿ
ಕ್ರಿಸ್ ಮೊರಿಸ್ = 10 ಕೋಟಿ ರೂ
ಆರೋನ್ ಫಿಂಚ್ = 4.4 ಕೋಟಿ ರೂ
ಕೇನ್ ರಿಚರ್ಡ್ಸನ್ = 3 ಕೋಟಿ ರೂ
ಡೇಲ್ ಸ್ಟೇನ್ = 2 ಕೋಟಿ ರೂ
ಇಸ್ರು ಉದಾನ = 50 ಲಕ್ಷ ರೂ
ಶಹಬಾಝ್ ಅಹಮ್ಮದ್ = 20 ಲಕ್ಷ ರೂ
ಜೋಶುವಾ ಫಿಲಿಪ್ = 20 ಲಕ್ಷ ರೂ 
ಪವನ್ ದೇಶಪಾಂಡೆ = 20 ಲಕ್ಷ  ರೂ

ಹರಾಜಿನ ಬಳಿಕ RCB ತಂಡದ ಸಂಪೂರ್ಣ ವಿವರ
1. ವಿರಾಟ್ ಕೊಹ್ಲಿ

2 ಎಬಿ ಡಿವಿಲಿಯರ್ಸ್
2. ಮೊಯಿನ್ ಅಲಿ
3. ಯುಜುವೇಂದ್ರ ಚಹಲ್
4. ಪಾರ್ಥಿವ್ ಪಟೇಲ್
5. ಮೊಹಮ್ಮದ್ ಸಿರಾಜ್
6. ಉಮೇಶ್ ಯಾದವ್
7. ಪವನ್ ನೇಗಿ
8. ದೇವದತ್ ಪಡಿಕ್ಕಲ್
9. ಗುರುಕೀರತ್ ಸಿಂಗ್ ಮನ್
10. ವಾಷಿಂಗ್ಟನ್ ಸುಂದರ್
11. ಶಿವಂ ದುಬೆ
12. ನವದೀಪ್ ಸೈನಿ
13. ಎಬಿ ಡಿವಿಲಿಯರ್ಸ್
14 ಕ್ರಿಸ್ ಮೊರಿಸ್
15 ಆರೋನ್ ಫಿಂಚ್
16 ಕೇನ್ ರಿಚರ್ಡ್ಸನ್ 
17 ಡೇಲ್ ಸ್ಟೇನ್ 
18 ಇಸ್ರು ಉದಾನ 
19 ಶಹಬಾಝ್ ಅಹಮ್ಮದ್ 
20 ಜೋಶುವಾ ಫಿಲಿಪ್
22 ಪವನ್ ದೇಶಪಾಂಡೆ