Asianet Suvarna News Asianet Suvarna News

IPL Auction: ಈ ಐವರು ವಿದೇಶಿ ಕ್ರಿಕೆಟಿಗರು ಮಾರಾಟವಾಗುವುದು ಖಚಿತ?

IPL ಹರಾಜು ಪ್ರಕ್ರಿಯೆ ಕುತೂಹಲ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಫ್ರಾಂಚೈಸಿಗಳ ಲೆಕ್ಕಾಚಾರ, ಕ್ರಿಕೆಟಿಗರ ಬಿಡ್ಡಿಂಗ್ ಸೇರಿದಂತೆ ಹಲವು ವಿಚಾರ ಭಾರಿ ಚರ್ಚೆಯಾಗುತ್ತಿದೆ. ಈ ಹರಾಜಿನಲ್ಲಿ ಮಾರಾಟವಾಗಲ್ಲ ಐವರು ವಿದೇಶಿ ಕ್ರಿಕೆಟಿಗರ ವಿವರ ಇಲ್ಲಿದೆ.

IPL auction 8 Franchise likely to buy five foreign players
Author
Bengaluru, First Published Dec 17, 2019, 5:39 PM IST

ಕೋಲ್ಕತಾ(ಡಿ.19): ಐಪಿಎಲ್ ಹರಾಜಿನಲ್ಲಿ ಯಾವ ಆಟಗಾರರು ಬಿಕರಿಯಾಗುತ್ತಾರೆ?, ಯಾರು ಗರಿಷ್ಟ ಮೊತ್ತ ಪಡೆಯುತ್ತಾರೆ ಅನ್ನೋ ಕುತೂಹಲ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಈ ಬಾರಿಯ ಹರಾಜಿನಲ್ಲಿ ಮಾರಾಟವಾಗಬಲ್ಲ ಐವರು ವಿದೇಶಿ ಕ್ರಿಕೆಟಿಗರ ಮೇಲೆ ಇದೀಗ 8 ಫ್ರಾಂಚೈಸಿಗಳ ನಡುವೆ ಪೈಪೋಟಿ ಆರಂಭವಾಗಿದೆ. ಇದೀಗ ಈ ಕ್ರಿಕೆಟಿಗರ ಮೇಲೆ ಅಭಿಮಾನಿಗಳು ಕೂಡ ಚಿತ್ತ ನೆಟ್ಟಿದ್ದಾರೆ.

ಇದನ್ನೂ ಓದಿ: IPL ಹರಾಜಿನಲ್ಲಿರುವ ಆಟಗಾರರ ಅಂತಿಮ ಪಟ್ಟಿ; ಉದಯೋನ್ಮುಖ ಕ್ರಿಕೆಟಿಗರ ಪೈಪೋಟಿ!

ಗ್ಲೆನ್ ಮ್ಯಾಕ್ಸ್‌ವೆಲ್(ಆಸ್ಟ್ರೇಲಿಯಾ) ಮೂಲ ಬೆಲೆ: 2 ಕೋಟಿ
ಜೇಸನ್ ರಾಯ್(ಇಂಗ್ಲೆಂಡ್) ಮೂಲ ಬೆಲೆ: 1.5 ಕೋಟಿ
ಕ್ರಿಸ್ ಲಿನ್(ಆಸ್ಟ್ರೇಲಿಯಾ) 2 ಕೋಟಿ
ಶಿಮ್ರೊನ್ ಹೆಟ್ಮೆಯರ್(ವೆಸ್ಟ್ ಇಂಡೀಸ್)50 ಲಕ್ಷ
ಸ್ಯಾಮ್ ಕುರ್ರನ್(ಇಂಗ್ಲೆಂಡ್) 1 ಕೋಟಿ

ಹರಾಜಿನಲ್ಲಿ 143 ವಿದೇಶಿ ಕ್ರಿಕೆಟಿಗರ ಪೈಕಿ ಈ ಐವರು ಕ್ರಿಕೆಟಿಗರು ಎಲ್ಲರ ಗಮನೆಳೆದಿದ್ದಾರೆ. ಪ್ರತಿ ತಂಡ ಬಿಸಿಸಿಐಗೆ ಕಳುಹಿಸಿರುವ ಪಟ್ಟಿಯಲ್ಲಿ ಈ ಐವರ ಹೆಸರಿದೆ. ಹೀಗಾಗಿ ಇವರ ಮೇಲೆ ಎಲ್ಲಾ ತಂಡಗಳು ಬಿಡ್ಡಿಂಗ್ ಮಾಡಲಿವೆ. ಹೀಗಾದಲ್ಲಿ ಗರಿಷ್ಠ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ.

ಇದನ್ನೂ ಓದಿ: ಐವರು ವಿದೇಶಿ ಆಟಗಾರರನ್ನು ಖರೀದಿಸಲು ಮುಂದಾದ RCB, ಇಲ್ಲಿದೆ ವಿವರ!

ಡಿಸೆಂಬರ್ 19ಕ್ಕೆ ಕೋಲ್ಕತಾದಲ್ಲಿ ಐಪಿಎಲ್ ಹರಾಜು ನಡೆಯಲಿದೆ. ಸದ್ಯ ಐಪಿಎಲ್ ಹರಾಜಿನಲ್ಲಿ 332 ಆಟಗಾರರಿದ್ದಾರೆ. ಇದರಲ್ಲಿ 186 ಭಾರತೀಯ ಹಾಗೂ 143 ವಿದೇಶಿ ಕ್ರಿಕೆಟಿಗರಿದ್ದಾರೆ. 8 ಫ್ರಾಂಚೈಸಿಗಳಲ್ಲಿ ಒಟ್ಟು 73 ಸ್ಥಾನ ಖಾಲಿ ಇದೆ. ಪ್ರತಿ ತಂಡಕ್ಕೆ ಒಂದಲ್ಲಾ ಒಂದು ವಿಭಾಗದಲ್ಲಿ ಪ್ರಮುಖ ಆಟಗಾರರ ಅವಶ್ಯಕತೆ ಇದೆ. ಹೀಗಾಗಿ ಈ ಬಾರಿಯ ಹರಾಜು ತೀವ್ರ ಕುತೂಹಲ ಕೆರಳಿಸಿದೆ.
 

Follow Us:
Download App:
  • android
  • ios