ಕೋಲ್ಕತಾ(ಡಿ.15): ಐಪಿಎಲ್ ಹರಾಜಿಗೆ ಕೌಂಟ್‌ಡೌನ್ ಶುರುವಾಗಿದೆ. ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ಆಟಗಾರರ ಹರಾಜು ನಡೆಯಲಿದೆ. 8 ಪ್ರಾಂಚೈಸಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಆಟಗಾರರ ಖರೀದಿಗೆ ತಯಾರಾಗಿದೆ. ಇದೀಗ ಬಿಸಿಸಿಐ ಹರಾಜು ಕಣದಲ್ಲಿರುವ ಅಂತಿಮ ಪಟ್ಟಿ ಬಿಡುಗಡೆ ಮಾಡಿದ್ದು, ಉದಯೋನ್ಮುಖ ಆಟಗಾರರೇ ಹೆಚ್ಚಿನ ಸಂಖ್ಯೆಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

971 ಆಟಗಾರರ ಪೈಕಿ 332 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ 186 ಭಾರತೀಯ, 143 ವಿದೇಶಿ ಆಟಗಾರರಿದ್ದಾರೆ. ಗರಿಷ್ಠ ಮೊತ್ತ, ಅಂದರೆ 2 ಕೋಟಿ ಮೂಲ ಬೆಲೆ ವಿಭಾಗದಲ್ಲಿ ಯಾವ ಭಾರತೀಯನೂ ಕಾಣಿಸಿಕೊಂಡಿಲ್ಲ. ಪ್ಯಾಟ್ ಕಮಿನ್ಸ್, ಜೋಶ್ ಹೇಜ್‌ಲ್‌ವುಡ್, ಕ್ರಿಸ್ ಲಿನ್, ಮಿಚೆಲ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇಲ್ ಸ್ಟೇನ್ ಹಾಗೂ ಎಂಜಲೋ ಮ್ಯಾಥ್ಯೂಸ್ 2 ಕೋಟಿ ಮೂಲ ಬೆಲೆಯ ಕ್ರಿಕೆಟಿಗರು

1.5 ಕೋಟಿ ಮೂಲ ಬೆಲೆಯ ಆಟಗಾರರ ಬೈಕಿ, ಕನ್ನಡಿಗ ರಾಬಿನ್ ಉತ್ತಪ್ಪ ಏಕೈಕ ಭಾರತೀಯ. ಇನ್ನು ಪಿಯುಷ್ ಚಾವ್ಲಾ, ಯೂಸುಫ್ ಪಠಾಣ್ ಹಾಗೂ ಜಯದೇವ್ ಉನಾದ್ಕಟ್ 1 ಕೋಟಿ ಮೂಲ ಬೆಲೆಯ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.

ಐಪಿಎಲ್ ಕಣದಲ್ಲಿರುವ ಅಂತಾರಾಷ್ಟ್ರೀಯ ಕ್ರಿಕೆಟಿಗರು
2 ಕೋಟಿ ಮೂಲ ಬೆಲೆಯಲ್ಲಿ 7 ವಿದೇಶಿ ಕ್ರಿಕೆಟಿಗರು, 1.5 ಕೋಟಿ ಮೂಲ ಬೆಲೆಯಲ್ಲಿ ಒರ್ವ ಭಾರತೀಯ, 9 ವಿದೇಶಿ ಕ್ರಿಕೆಟಿಗರು ಸೇರಿದಂತೆ ಒಟ್ಟು 10 ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. 1 ಕೋಟಿ ಮೂಲ ಬೆಲೆಯಲ್ಲಿ 23 ಆಟಗಾರರಿದ್ದು, 20  ವಿದೇಶಿ ಹಾಗೂ ಮೂವರು ಭಾರತೀಯರು ಕಾಣಿಸಿಕೊಂಡಿದ್ದಾರೆ.

75 ಲಕ್ಷ ಮೂಲಬೆಲೆಯಲ್ಲಿ 16 ವಿದೇಶಿ ಆಟಗಾರರು, 50 ಲಕ್ಷ ಮೂಲ ಬೆಲೆಯಲ್ಲಿ 9 ಭಾರತೀಯರು ಸೇರಿದಂತೆ 78 ಕ್ರಿಕೆಟಿಗರು ಇದ್ದಾರೆ. ಯುವ ಹಾಗೂ ಉದಯೋನ್ಮುಖ ಆಟಗಾರರ ಪೈಕಿ ಒಟ್ಟು 183 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. 167 ಭಾರತೀಯರು ಹಾಗೂ 16 ವಿದೇಶಿ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ 13 ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.