ಬೆಂಗಳೂರು(ಡಿ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 12 ಆವೃತ್ತಿಗಳಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ 13ನೇ ಆವೃತ್ತಿಯಲ್ಲಿ ತಂಡದಲ್ಲಿ ಕೆಲ ಬದಲಾವಣೆ  ಮಾಡಿ ಕಣಕ್ಕಿಳಿಯಲು ನಿರ್ಧರಿಸಿದೆ. ಈಗಾಗಲೇ 12 ಆಟಗಾರರನ್ನು ರಿಲೀಸ್ ಮಾಡಿ ಇದೀಗ ಹರಾಜು ಕಣಕ್ಕೆ ಧುಮುಕಿದೆ. ತಂಡದ ಬೌಲಿಂಗ್ ಹಾಗೂ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು RCB ಮುಂದಾಗಿದೆ.

ಇದನ್ನೂ ಓದಿ: IPL ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ RCB ತಂಡದಲ್ಲಿರುವ ಮೊತ್ತವೆಷ್ಟು?

ಈ ಬಾರಿಯ ಹರಾಜಿನಲ್ಲಿ ಬೆಂಗಳೂರು ತಂಡ ಐವರು ವಿದೇಶಿ ಕ್ರಿಕೆಟಿಗರ ಮೇಲೆ ಕಣ್ಣಿಟ್ಟಿದೆ. ಸದ್ಯ ತಂಡದಲ್ಲಿ ವಿದೇಶಿ ಆಟಗಾರರಾಗಿ ಎಬಿ ಡಿವಿಲಿಯರ್ಸ್ ಮಾತ್ರ ಉಳಿದುಕೊಂಡಿದ್ದಾರೆ. ಹೀಗಾಗಿ ಐವರ ಮೇಲೆ ಬಡ್ಡಿಂಗ್ ಮಾಡಲು ಬೆಂಗಳೂರು ಮುಂದಾಗಿದೆ.

ಇದನ್ನೂ ಓದಿ: IPL 2020: ಹರಾಜಿಗೂ ಮುನ್ನ RCB ಮಾಡಿದ ಅತಿದೊಡ್ಡ ಎಡವಟ್ಟುಗಳಿವು..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣ್ಣಿಟ್ಟಿರುವ ಐವರು ವಿದೇಶಿ ಕ್ರಿಕೆಟಿಗರು:
ಪ್ಯಾಟ್ ಕಮಿನ್ಸ್(ಆಸ್ಟ್ರೇಲಿಯಾ) ವೇಗಿ
ಅಲೆಕ್ಸ್ ಕ್ಯಾರಿ(ಆಸ್ಟ್ರೇಲಿಯಾ) ವಿಕೆಟ್ ಕೀಪರ್ ಬ್ಯಾಟ್ಸ್‌ಮನ್
ಕ್ರಿಸ್ ಲಿನ್(ಆಸ್ಟ್ರೇಲಿಯಾ)ಸ್ಫೋಟಕ ಬ್ಯಾಟ್ಸ್‌ಮನ್
ಗ್ಲೆನ್ ಮ್ಯಾಕ್ಸ್ವೆಲ್(ಆಸ್ಟ್ರೇಲಿಯಾ)ಆಲ್ರೌಂಡರ್
ಕ್ರಿಸ್ ಮೊರಿಸ್(ಸೌತ್ ಆಫ್ರಿಕಾ) ಆಲ್ರೌಂಡರ್

IPL 2020 ಹರಾಜಿಗೂ ಮುನ್ನ RCB ತಂಡ:

1. ವಿರಾಟ್ ಕೊಹ್ಲಿ, 2. ಮೊಯಿನ್ ಅಲಿ , 3. ಯುಜುವೇಂದ್ರ ಚಹಲ್ , 4. ಪಾರ್ಥಿವ್ ಪಟೇಲ್, 5. ಮೊಹಮ್ಮದ್ ಸಿರಾಜ್, 6. ಉಮೇಶ್ ಯಾದವ್, 7. ಪವನ್ ನೇಗಿ, 8. ದೇವದತ್ ಪಡಿಕ್ಕಲ್,  9. ಗುರುಕೀರತ್ ಸಿಂಗ್ ಮನ್, 10. ವಾಷಿಂಗ್ಟನ್ ಸುಂದರ್, 11. ಶಿವಂ ದುಬೆ
12. ನವದೀಪ್ ಸೈನಿ, 13. ಎಬಿ ಡಿವಿಲಿಯರ್ಸ್

RCB ಕೈಬಿಟ್ಟ ಆಟಗಾರರು
1. ಡೇಲ್ ಸ್ಟೇನ್, 2. ಮಾರ್ಕಸ್ ಸ್ಟೋನಿಸ್, 3. ಶಿಮ್ರೋನ್ ಹೆಟ್ಮೇಯರ್, 4. ಅಕ್ಷದೀಪ್ ನಾಥ್, 5.ನೇಥನ್ ಕೌಲ್ಟರ್ ನೀಲ್, 6. ಕಾಲಿನ್ ಡಿ ಗ್ರಾಂಡ್ ಹೋಮ್, 7. ಪ್ರಯಾಸ್ ರೇ ಬರ್ಮನ್, 8. ಟಿಮ್ ಸೌಥಿ, 9. ಕುಲ್ವಂತ್ ಖೆಜ್ರೋಲಿಯಾ, 10. ಹಿಮ್ಮತ್ ಸಿಂಗ್, 11. ಹೆನ್ರಿಚ್ ಕ್ಲಾಸೆನ್, 12. ಮಿಲಿಂದ್ ಕುಮಾರ್  

ಡಿಸೆಂಬರ್ 15ರ ಟಾಪ್ 10 ಸುದ್ದಾಗಾಗಿ ಇಲ್ಲಿ ಕ್ಲಿಕ್ ಮಾಡಿ: