ಬೆಂಗಳೂರು(ಫೆ.14): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಲೋಗೋವನ್ನು ಅನಾವರಣ ಮಾಡಿದೆ. ಮಾರ್ಚ್ 29ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಹೊಸ ಲೋಗೊದೊಂದಿಗೆ RCB ತಂಡ ಕಣಕ್ಕಿಳಿಯಲಿದೆ.

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿನ ಡಿಪಿ(ಡಿಸ್‌ಪ್ಲೇ ಪಿಕ್ಚರ್) ಹಾಗೂ ಕವರ್ ಫೋಟೋಗಳನ್ನು ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ, ಸ್ಟಾರ್ ಆಟಗಾರ ಎಬಿ ಡಿವಿಲಿಯರ್ಸ್ ಸೇರಿದಂತೆ ಹಲವರು ಟ್ವೀಟ್ ಮೂಲಕ ಏನಾಗಿದೆ ಎಂದೆಲ್ಲ ವಿಚಾರಿಸಿದ್ದರು.  

RCB ತಂಡಕ್ಕಿಂದು ಹೊಸ ಹೆಸರು..?

2008ರಿಂದ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡ ಮೂರನೇ ಬಾರಿಗೆ ತನ್ನ ಲೋಗೋ ಬದಲಾಯಿಸಿಕೊಂಡಿದೆ. 2008ರಿಂದ 2015ರವರೆಗೆ ಒಂದು ಲೋಗೋ ಬಳಸಿದ್ದ RCB ತಂಡ ಇದಾದ ಬಳಿಕ 2016ರಿಂದ 2019ರವರೆಗೂ ಇನ್ನೊಂದು ಲೋಗೋ ಬದಲಾಯಿಸಿಕೊಂಡಿತ್ತು. ಇದೀಗ ಮತ್ತೆ ಹೊಸ ಲೋಗೋದೊಂದಿಗೆ ಕಣಕ್ಕಿಳಿಯುತ್ತಿದೆ.

ಕೊಹ್ಲಿಗೆ ಮಾಹಿತಿ ನೀಡದೆ RCB ಪೋಸ್ಟ್ ಡಿಲೀಟ್!

ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಹೊಸ ಲೋಗೋ ಅನಾವರಣ ಮಾಡಿರುವ ಬೆಂಗಳೂರು ಮೂಲದ ಫ್ರಾಂಚೈಸಿ, ನೀವು ಕಾಯುತ್ತಿದ್ದ ಕ್ಷಣ ಇಲ್ಲಿದೆ ನೋಡಿ, ಹೊಸ ದಶಕ. ಹೊಸ RCB, ಹೊಸ ಲೋಗೋ ಎಂದು ಟ್ವೀಟ್ ಮಾಡಿದೆ.

ಹೀಗಿದೆ ನೋಡಿ ಹೊಸ ಲೋಗೊ:

 

ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಮುತ್ತೂಟ್ ಫಿನ್‌ಕಾರ್ಪ್ ಲಿಮಿಟೆಡ್‌ನೊಂದಿಗೆ 3 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಇನ್ನು ಮುಂದೆ RCB ತಂಡದ ಜೆರ್ಸಿಯಲ್ಲಿ ಮುತ್ತೂಟ್ ಲೋಗೋ ರಾರಾಜಿಸಲಿದೆ. ಪ್ರೇಮಿಗಳ ದಿನಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕನ್ನಡದಲ್ಲೇ ಕವಿತೆ ರಚಿಸಿ ಅಭಿಮಾನಿಗಳ ಮನ ಗೆದ್ದಿತ್ತು.

ಕಳೆದ 12 ಐಪಿಎಲ್ ಆವೃತ್ತಿಗಳಲ್ಲೂ ಕಪ್ ಗೆಲ್ಲಲು ವಿಫಲವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ,  ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಸಾಕಷ್ಟು ಅಳೆದುತೂಗಿ ತಮಗೆ ಅಗತ್ಯವಿರುವ ಆಟಗಾರರನ್ನು ಖರೀದಿಸಿದೆ. ಹೀಗಾಗಿ ಮತ್ತೊಮ್ಮೆ 2020ರ ಐಪಿಎಲ್‌ ಟೂರ್ನಿಯಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.   ಹೊಸ ತಂಡದೊಂದಿಗೆ ಕಣಕ್ಕಿಳಿಯುತ್ತಿರುವ ಬೆಂಗಳೂರು ತಂಡಕ್ಕೆ ಈ ಬಾರಿಯಾದರೂ ಅದೃಷ್ಟ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ನೋಡಿ: #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ