ಬೆಂಗಳೂರು(ಫೆ.13): ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ದಿಲ್ಲದೆ ತನ್ನ ಅಧೀಕೃತ ಸಾಮಾಜಿಕ ಜಾಲತಾಣದ ಪೋಸ್ಟ್ ಹಾಗೂ ಪಿಕ್ಚರ್ ಡಿಲೀಟ್ ಮಾಡಿದೆ. ನಾಯಕ ವಿರಾಟ್ ಕೊಹ್ಲಿಗೆ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಅನ್ನೋದನ್ನು ಸ್ವತಃ ಕೊಹ್ಲಿ ಬಹಿರಂಗ ಪಡಿಸಿದ್ದಾರೆ. 

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ RCB ಪ್ರೊಫೈಲ್ ಪಿಕ್ಟರ್ ಮಾಯ!

RCB ಪೋಸ್ಟ್‌ಗಳು ಡಿಲೀಟ್ ಆಗಿದೆ. ಈ ಕುರಿತು ನಾಯಕನಿಗೆ ಮಾಹಿತಿ ನೀಡಿಲ್ಲ. ಏನಾದರು ಸಹಾಯ ಬೇಕಾದರೆ ತಿಳಿಸಿ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. 

 

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ವಿರಾಟ್ ಕೊಹ್ಲಿ, ಹ್ಯಾಮಿಲ್ಟನ್‌ನಿಂದ ಟ್ವೀಟ್ ಮೂಲಕ ಆರ್‌ಸಿಬಿ ತಂಡದ ಕುರಿತು ವಿಚಾರಿಸಿದ್ದಾರೆ. ಆರ್‌ಸಿಬಿ ತಂಡದ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೂಡ ಇದೆಂಥಾ ಗೂಗ್ಲಿ? ಆರ್‌ಸಿಬಿ ಸಾಮಾಜಿಕ ಜಾಲತಾಣದ ಖಾತೆಗೆ ಏನಾಗಿದೆ ಎಂದು ಪ್ರಶ್ನಿಸಿದ್ದರು.

 

ಇದನ್ನೂ ಓದಿ: IPL 2020: RCBಗೆ ಹೊಸ ಟೈಟಲ್ ಪ್ರಾಯೋಜಕತ್ವ!

ಇದು ಹ್ಯಾಕರ್ಸ್ ಕೆಲಸವೇ ಅಥವಾ ಆರ್‌ಸಿಬಿ ಮ್ಯಾನೇಜ್ಮೆಂಟ್ ಕೆಲಸವೇ ಅನ್ನೋದು ಸ್ಪಷ್ಟವಾಗಿಲ್ಲ. ಈಗಾಗಲೇ ಮುತ್ತೂಟ್ ಫಿನ್‌ಕಾರ್ಪ್ ಪ್ರಾಯೋಜಕತ್ವ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರುು ಹೊಸ ಲೋಗೋ ಬಿಡುಗಡೆ ಮಾಡಲಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಡಿಲೀಟ್ ಮಾಡಿದೆ ಎನ್ನಲಾಗುತ್ತಿದೆ.
 

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ